ಮೂವರು ಆರೋಪಿಗಳು 
ದೇಶ

ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ಮೂವರು ಆರೋಪಿಗಳಿಗೆ ಅ. 31ರವರೆಗೆ ಪೊಲೀಸ್ ಕಸ್ಟಡಿ!

ಈ ಪ್ರಕರಣದಲ್ಲಿ ಬಂಧಿತರಾದ ಮೂವರು ಪ್ರಮುಖ ಆರೋಪಿಗಳನ್ನು ರಾಜಸ್ಥಾನದ ಕೋಟಾದಿಂದ ಬುಧವಾರ ಮುಂಜಾನೆ ಮುಂಬೈಗೆ ಕರೆತರಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನ್ಯಾಯಾಲಯವೊಂದು ಮೂವರು ಆರೋಪಿಗಳನ್ನು ಅಕ್ಟೋಬರ್ 31ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಈ ಪ್ರಕರಣದಲ್ಲಿ ಬಂಧಿತರಾದ ಮೂವರು ಪ್ರಮುಖ ಆರೋಪಿಗಳನ್ನು ರಾಜಸ್ಥಾನದ ಕೋಟಾದಿಂದ ಬುಧವಾರ ಮುಂಜಾನೆ ಮುಂಬೈಗೆ ಕರೆತರಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ರಸ್ತೆ ಮಾರ್ಗವಾಗಿ ಕೋಟಾದಿಂದ ಮುಂಬೈಗೆ ಕರೆತರಲಾಯಿತು. ಮುಂಬೈಗೆ ತಲುಪಿದ ಕೂಡಲೇ, ಕಡ್ಡಾಯ ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಜಿ.ಟಿ. ಆಸ್ಪತ್ರೆಗೆ (GT Hospital) ಕರೆದೊಯ್ಯಲಾಯಿತು.

ವೈದ್ಯಕೀಯ ತಪಾಸಣೆಯ ನಂತರ ವಿಚಾರಣೆಗಾಗಿ ಮುಂಬೈ ಅಪರಾಧ ವಿಭಾಗದ (Mumbai Crime Branch) ದರೋಡೆ ವಿರೋಧಿ ಘಟಕದ (Anti-Extortion Cell - AEC) ಕಚೇರಿಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆರೋಪಿಗಳನ್ನು ಹರಿಯಾಣದ ಸೋನಿಪತ್‌ನ ರೆಹಾನ್ ಅಲಿಯಾಸ್ ಸುಕ್ಕಾ, ಮುಂಬೈನಲ್ಲಿ ವಾಸಿಸುತ್ತಿರುವ ಬಿಹಾರದ ಬೇಗುಸರಾಯ್ ಮೂಲದ ರಿತಿಕ್ ಕುರ್ಮಿ ಹಾಗೂ ಹರಿಯಾಣದ ಫೂಲ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕೋಟಾ ನಗರ ಪೊಲೀಸರು ಇವರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದರು. ಮುಂಬೈ ಪೊಲೀಸರು ಅವರನ್ನು ಔಪಚಾರಿಕವಾಗಿ ಬಂಧಿಸಿ, ಅಲ್ಲಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. ಅವರನ್ನು ಮುಂಬೈಗೆ ಕರೆತರುವ ಸಲುವಾಗಿ ನ್ಯಾಯಾಲಯವು 'ಟ್ರಾನ್ಸಿಟ್ ರಿಮಾಂಡ್' (ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲು ಅನುಮತಿ) ನೀಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ; ಮೈಸೂರು ಪೇಟ ಧರಿಸಿ ನಂದಿಧ್ವಜ ಪೂಜೆ ನೆರವೇರಿಸಿದ ಸಿಎಂ; Live Video

ಕುಮಾರಸ್ವಾಮಿ ಪರವಾಗಿ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ ಕರಾವಳಿಯ ಜನತೆ, ಬ್ಯಾನರ್ ವೈರಲ್!

ರಾಹುಲ್ ಗಾಂಧಿ ವಿದೇಶ ಪ್ರವಾಸದ ಬಗ್ಗೆ ಹೇಳಲು ನಾನು 'ಟ್ರಾವೆಲ್ ಏಜೆಂಟ್ ಅಲ್ಲ': ನನ್ನನ್ನು ಕೇಳುವುದರಲ್ಲಿ ಅರ್ಥವಿಲ್ಲ; ಶಶಿ ತರೂರ್ ಆಕ್ರೋಶ

‘Expiry Date'ಮುಗಿಯುತ್ತಾ ಬಂದಿದೆ: ಪಿಎಂ-ದಕ್ಷ್ ಯೋಜನೆ ಅನುಷ್ಟಾನದಲ್ಲಿ ಲೋಪದ ಆರೋಪ,ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ!

ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ: ಗಜಪಡೆಗೆ ಸಿಂಗಾರ, ಅಂಬಾರಿ ಹೊರಲು ಪ್ರಶಾಂತ ಸಜ್ಜು