ಮಾರ್ಕೊ ರುಬಿಯೊ 
ದೇಶ

ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಲ್ಲ: SIR ಪ್ರತಿಭಟನೆ ಬಗ್ಗೆ ಮಾರ್ಕೊ ರುಬಿಯೊ ಹೇಳಿಕೆ

ಅಧಿಕೃತ ಭೇಟಿಗಾಗಿ ಭಾರತದಲ್ಲಿರುವ ರೂಬಿಯೊ, ಎಸ್ ಐಆರ್ ವಿರುದ್ಧ ಸಿಜೆಪಿ, ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ವಿಶ್ವಸಂಸ್ಥೆಯ ತಜ್ಞರು ವ್ಯಕ್ತಪಡಿಸಿರುವ ಟೀಕೆಗಳನ್ನು ಸಹ ಗಣನೆಗೆ ತೆಗೆದುಕೊಂಡಿಲ್ಲ

ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ನಿರಾಕರಿಸಿದ್ದಾರೆ. ಇದು ಭಾರತದ ಆಂತರಿಕ ರಾಜಕೀಯ ವಿಷಯ" ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿರುವ ಅವರು, ವಿಶ್ವಸಂಸ್ಥೆಯ ತಜ್ಞರ ಟೀಕೆಗಳನ್ನು ತಳ್ಳಿಹಾಕಿದ್ದಾರೆ.

ಅಧಿಕೃತ ಭೇಟಿಗಾಗಿ ಭಾರತದಲ್ಲಿರುವ ರೂಬಿಯೊ, ಎಸ್ ಐಆರ್ ವಿರುದ್ಧ ಸಿಜೆಪಿ, ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ವಿಶ್ವಸಂಸ್ಥೆಯ ತಜ್ಞರು ವ್ಯಕ್ತಪಡಿಸಿರುವ ಟೀಕೆಗಳನ್ನು ಸಹ ಗಣನೆಗೆ ತೆಗೆದುಕೊಂಡಿಲ್ಲ. ಬುಧವಾರ ಅಮೆರಿಕದ ವಿದೇಶಾಂಗ ಇಲಾಖೆ (Department of State) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ವಿಶ್ವಸಂಸ್ಥೆಯ "ತಜ್ಞರು" ಎಂಬ ಪದಪ್ರಯೋಗವೇ ಒಂದು ವಿರೋಧಾಭಾಸ (oxymoron) ಎಂದು ರುಬಿಯೊ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ವಿರೋಧ ಪಕ್ಷಗಳು ಮತ್ತು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಆಂತರಿಕ ರಾಜಕೀಯ ವಿಷಯ. ನಾನು ಅವರ ರಾಜಕೀಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಇದೊಂದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಚುನಾವಣೆಗಳು ನಡೆಯುತ್ತವೆ, ಆದ್ದರಿಂದ ಅವರ ಆಂತರಿಕ ರಾಜಕೀಯ ವಿಷಯಗಳ ಬಗ್ಗೆ ನಾನು ಯಾವುದೇ ಅಭಿಪ್ರಾಯ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಅಮೆರಿಕದಲ್ಲೂ ಪ್ರತಿದಿನ ಪ್ರತಿಭಟನೆಗಳು ನಡೆಯುತ್ತಿರುತ್ತವೆ ಮತ್ತು ಇವು ಅಲ್ಲಿನ ರಾಜಕೀಯ ಚರ್ಚೆಗಳು ಹಾಗೂ ಭಿನ್ನಾಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು. ಅಮೆರಿಕದಲ್ಲಿ ನಾವು ಪ್ರತಿದಿನ ಪ್ರತಿಭಟನೆಗಳನ್ನು ನೋಡುತ್ತೇವೆ. ಜನರು ಪ್ರತಿಭಟನೆಗಳನ್ನು ನಡೆಸುತ್ತಾರೆ. ಆದರೆ ನಾನು ಇಲ್ಲಿ ಗಲಭೆಗಳ ಬಗ್ಗೆ ಮಾತನಾಡುತ್ತಿಲ್ಲ ಯುರೋಪ್‌ನಲ್ಲಿ ಕಾಣುತ್ತಿರುವಂತೆ, ಅಲ್ಲಿ ಜನರು ದಾಂಧಲೆ ನಡೆಸುವುದು, ವಸ್ತುಗಳನ್ನು ಒಡೆಯುವುದು ಮತ್ತು ಕಟ್ಟಡಗಳಿಗೆ ಬೆಂಕಿ ಹಚ್ಚುವಂತಹ ಘಟನೆಗಳು ಅಮೆರಿಕದಲ್ಲಿ ನಡೆಯುತ್ತಿಲ್ಲ ಎಂದರು.

ಜನರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು,ಆ ದೇಶದಲ್ಲಿ ರಾಜಕೀಯ ಚರ್ಚೆಗಳು ಮತ್ತು ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ ಎಂಬುದರ ಸಂಕೇತವಾಗಿದೆ. ನಾವು ಆಂತರಿಕ ರಾಜಕೀಯ ವಿಷಯಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದನ್ನು ನಿರ್ಧರಿಸುವುದು ಮತ್ತು ನಿಭಾಯಿಸುವುದು ಭಾರತದ ಜನರಿಗೆ ಬಿಟ್ಟ ವಿಷಯ ಎಂದು ರುಬಿಯೊ ಹೇಳಿದರು.

ಮಂಗಳವಾರ ಜಿನೀವಾದಲ್ಲಿರುವ ವಿಶ್ವಸಂಸ್ಥೆಯ 20ಕ್ಕೂ ಹೆಚ್ಚು ಮಾನವ ಹಕ್ಕುಗಳ ತಜ್ಞರು, ರಾಷ್ಟ್ರ ರಾಜಧಾನಿಯಲ್ಲಿ ಯುವಜನರ ನೇತೃತ್ವದಲ್ಲಿ ನಡೆದ ಶಾಂತಿಯುತ ಪ್ರತಿಭಟನೆಗಳ ವಿರುದ್ಧ ಪೊಲೀಸರು "ಪದೇ ಪದೇ ಅತ್ಯಂತ ಕಠಿಣ ಕ್ರಮಗಳನ್ನು" ಕೈಗೊಂಡಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಪ್ರತಿಭಟನೆಗಳ ಸಂದರ್ಭದಲ್ಲಿ ನಡೆದಿವೆ ಎಂದು ವರದಿಯಾಗಿರುವ ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ, ನ್ಯಾಯ ಒದಗಿಸಬೇಕೆಂದು ಅವರು ಅಧಿಕಾರಿಗಳನ್ನು ಒತ್ತಾಯಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾ: ವೈಭವದ ಜಂಬೂ ಸವಾರಿ ಮೆರವಣಿಗೆ; ಮೊದಲ ಬಾರಿಗೆ ಅಂಬಾರಿ ಹೊತ್ತು ಸಾಗಿದ ಪ್ರಶಾಂತ ಆನೆ, ಲಕ್ಷಾಂತರ ಜನರಿಂದ ವೀಕ್ಷಣೆ! Video

ಐತಿಹಾಸಿಕ ಸೆಂಗೋಲ್‌ನ ವಾಸ್ತುಶಿಲ್ಪಿ 99 ವರ್ಷದ ವುಮ್ಮಿಡಿ ಎಥಿರಾಜುಲು ನಿಧನ

ಕಾಯಲೇಬೇಕು, ಬೇರೆ ದಾರಿ ಇಲ್ಲ: ವೈಭವ್ ಸೂರ್ಯವಂಶಿಗೆ ಶ್ರೇಯಸ್ ಅಯ್ಯರ್ 'Sweet Headache' ಸಂದೇಶ!

ದರ್ಶನ್ ಬಗ್ಗೆ ವಿಜಯಲಕ್ಷ್ಮೀ ಪೋಸ್ಟ್‌ ಬೆನ್ನಲ್ಲೇ 'ಶಕುನಿ' ಅಂತ ಪೋಸ್ಟ್ ಹಾಕಿದ ನಟ ಧನ್ವೀರ್ ಗೌಡ; ಯಾರಿಗೆ ಟಾಂಗ್?

ಬೆಳಗಾವಿ: ದೇವಸ್ಥಾನದ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ; ಆಸ್ಪತ್ರೆಗೆ ದಾಖಲು!