ಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ  
ದೇಶ

ಕೂಡಲೇ ಬೆಳೆವಿಮೆ ಪ್ರೀಮಿಯಂ ಹಣ ಬಿಡುಗಡೆ ಮಾಡಿ: ಸಿಎಂ ಡಿಕೆ ಶಿವಕುಮಾರ್ ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪತ್ರ!

ಕೇಂದ್ರ ಸರ್ಕಾರ ತನ್ನ ಪಾಲಿನ ಪ್ರೀಮಿಯಂ ಸಹಾಯಧನವಾಗಿ ಈಗಾಗಲೇ ₹1,342 ಕೋಟಿ ಪಾವತಿಸಿದೆ. ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ ₹1,680 ಕೋಟಿ ಪ್ರೀಮಿಯಂ ಮೊತ್ತವನ್ನು ಕಳೆದ ಒಂದೂವರೆ ತಿಂಗಳಿಂದಲೂ ಪಾವತಿಸದೇ ಇರುವುದು ಸರಿಯಲ್ಲವೆಂದು ಆಕ್ಷೇಪಿಸಿದ್ದಾರೆ.

ನವದೆಹಲಿ: ರಾಜ್ಯ ಸರ್ಕಾರ ಕೂಡಲೇ ತನ್ನ ಪಾಲಿನ ಬೆಳೆವಿಮೆ ಪ್ರೀಮಿಯಂ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ತನ್ನ ಪಾಲಿನ ಪ್ರೀಮಿಯಂ ಸಹಾಯಧನವಾಗಿ ಈಗಾಗಲೇ ₹1,342 ಕೋಟಿ ಪಾವತಿಸಿದೆ. ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ ₹1,680 ಕೋಟಿ ಪ್ರೀಮಿಯಂ ಮೊತ್ತವನ್ನು ಕಳೆದ ಒಂದೂವರೆ ತಿಂಗಳಿಂದಲೂ ಪಾವತಿಸದೇ ಇರುವುದು ಸರಿಯಲ್ಲವೆಂದು ಆಕ್ಷೇಪಿಸಿದ್ದಾರೆ.

ರಾಜ್ಯ ಸರ್ಕಾರ ಬೆಳೆ ವಿಮೆ ಪ್ರೀಮಿಯಂ ಮೊತ್ತವನ್ನು ಹಣಕಾಸು ಇಲಾಖೆಯಲ್ಲಿ ಹಾಗೇ ಬಾಕಿ ಉಳಿಸಿಕೊಂಡಿದೆ. ಪರಿಣಾಮ ಸಂಕಷ್ಟದಲ್ಲಿರುವ ರೈತರಿಗೆ ಸಕಾಲದಲ್ಲಿ ಪರಿಹಾರ ತಲುಪದೇ ತೊಡಕಾಗಿದೆ. ಸಿಎಂ ಕೂಡಲೇ ಗಮನಹರಿಸಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಜೋಶಿ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ 2026ನೇ ಸಾಲಿನ ತನ್ನ ಪಾಲಿನ ಬೆಳೆ ವಿಮೆ ಪ್ರೀಮಿಯಂ ಹಣ ಬಿಡುಗಡೆ ಮಾಡದೇ ಇರುವುದರಿಂದ ರೈತರಿಗೆ ವಿಮೆ ಪರಿಹಾರ ದೊರೆಯುತ್ತಿಲ್ಲ. ಹಾಗಾಗಿ ಕೂಡಲೇ ಪ್ರೀಮಿಯಂ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವರು ಗಮನ ಸೆಳೆದಿದ್ದಾರೆ. ಕರ್ನಾಟಕದಲ್ಲಿ ತೀವ್ರ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವಿಮಾ ಪರಿಹಾರ ಆಸರೆಯಾಗಿದೆ. ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ ಪ್ರೀಮಿಯಂ ಮೊತ್ತ ಬಿಡುಗಡೆ ಮಾಡದಿರುವುದು ರೈತರನ್ನು ಶೋಷಿಸಿದಂತೆಯೇ ಸರಿ ಎಂದು ಟೀಕಿಸಿದ್ದಾರೆ.

ಸಿಎಂ ಮಧ್ಯಪ್ರವೇಶಕ್ಕೆ ಒತ್ತಾಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಕೂಡಲೇ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ, ಹಣಕಾಸು ಇಲಾಖೆಯಲ್ಲಿ ಬಾಕಿಯಿರುವ ಕಡತವನ್ನು ವಿಲೇವಾರಿ ಮಾಡಿಸಬೇಕು. ರಾಜ್ಯ ಸರ್ಕಾರದ ಪಾಲಿನ ಪ್ರೀಮಿಯಂ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನನ್ನ ಪರ HDK ಏಕೆ ನಿಲ್ಲಬೇಕು?; 'ಸ್ಟಿಂಗ್ ಆಪರೇಷನ್' ಕಟ್ಟುಕಥೆ, ಬ್ಲ್ಯಾಕ್‌ಮೇಲ್ ಉದ್ದೇಶ; ನಿಷ್ಪಕ್ಷಪಾತ ತನಿಖೆಗೆ ಸಿದ್ದರಾಮಯ್ಯ ಆಗ್ರಹ; Video

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ 600 ಯಾತ್ರಿಕರ ರಕ್ಷಣೆ: ಕೇಂದ್ರಕ್ಕೆ ಸಿಎಂ ಡಿ ಕೆ ಶಿವಕುಮಾರ್ ಮನವಿ

ತೆಂಗಿನ ಮರದ ಮೇಲೆ ಏರಿ ಚಿರತೆ ವಿಶ್ರಾಂತಿ: ನಾಯಿ, ಮನುಷ್ಯರ ಕಾಟ ತಾಳಲಾರದೇ ಮತ್ತೆ ಕಾಡಿನತ್ತ ಓಟ! Video

ಪೊಲೀಸ್ ನೋಟಿಸ್ ವಿರುದ್ಧ ನೇಹಾ ಬೋರಾ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾ

ಮನೆಗೆ ನುಗ್ಗಿ ಜೀವ ಬೆದರಿಕೆ: ಡಿಬಾಸ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ನಟ ಧನ್ವೀರ್‌ ತಂದೆಯಿಂದ ದೂರು!