ಅಯೋಧ್ಯೆ ರಾಮಮಂದಿರ  Online Desk
ದೇಶ

ರಾಮಲಲ್ಲಾ ದರ್ಶನದ ಸಮಯದಲ್ಲಿ ಕಡಿತ! ಅಯೋಧ್ಯೆ ರಾಮಮಂದಿರದ ದರ್ಶನ, ಆರತಿ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ: ನವೆಂಬರ್ 1ರಿಂದ ಹೊಸ ಸಮಯ ಜಾರಿ

ಅಯೋಧ್ಯೆಯಲ್ಲಿರುವ ಅತ್ಯಂತ ಪವಿತ್ರ ದೇವಾಲಯವಾದ ರಾಮಮಂದಿರದ ದರ್ಶನ ಮತ್ತು ಆರತಿ ವೇಳಾಪಟ್ಟಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪರಿಷ್ಕರಿಸಿದೆ. ಆ ಕುರಿತ ವರದಿ ಇಲ್ಲಿದೆ:

ಅಯೋಧ್ಯೆ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಅತ್ಯಂತ ಪವಿತ್ರ ದೇವಾಲಯವಾದ ರಾಮಮಂದಿರದ ದರ್ಶನ ಮತ್ತು ಆರತಿ ವೇಳಾಪಟ್ಟಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪರಿಷ್ಕರಿಸಿದೆ. ಬಾಲಕ ರಾಮನ ವಿಶ್ರಾಂತಿ ಮತ್ತು ಪೂಜಾ ವಿಧಿವಿಧಾನಗಳನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 1, 2026 ರಿಂದ ಜಾರಿಗೆ ಬರುವಂತೆ ಹೊಸ ನಿಯಮಗಳು ಜಾರಿಗೆ ಬರಲಿವೆ. ಆ ಕುರಿತ ವರದಿ ಇಲ್ಲಿದೆ:

ದೇವಾಲಯದ ಬಾಗಿಲು ತೆರೆಯುವ ಸಮಯ

ಹೊಸ ನಿಯಮಾವಳಿಗಳ ಪ್ರಕಾರ, ಪ್ರಸ್ತುತ ಬೆಳಗ್ಗೆ 3:45ಕ್ಕೆ ತೆರೆಯುತ್ತಿದ್ದ ದೇವಾಲಯದ ಬಾಗಿಲು ಇನ್ನು ಮುಂದೆ ಬೆಳಗ್ಗೆ 4:00 ಗಂಟೆಗೆ ತೆರೆಯಲಿದ್ದು, ರಾತ್ರಿ 10:30ರ ಬದಲು ರಾತ್ರಿ 10:00 ಗಂಟೆಗೆ ಮುಚ್ಚಲ್ಪಡುತ್ತದೆ. ಇದರಿಂದಾಗಿ ಭಕ್ತರ ದರ್ಶನದ ಅವಧಿ ದಿನಕ್ಕೆ 14.5 ಗಂಟೆಗಳಿಂದ 13 ಗಂಟೆಗಳಿಗೆ ಇಳಿಕೆಯಾಗಲಿದೆ.

ನವೆಂಬರ್ 1 ರಿಂದ ಅನ್ವಯವಾಗುವ ಸಂಪೂರ್ಣ ನೂತನ ವೇಳಾಪಟ್ಟಿ ಇಲ್ಲಿದೆ:

ಬೆಳಗಿನ ಜಾವ ಹಾಗೂ ಮುಂಜಾನೆಯ ವೇಳಾಪಟ್ಟಿ

  • ಬೆಳಗ್ಗೆ 4:00: ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.

  • ಬೆಳಗ್ಗೆ 4:30 ರಿಂದ 4:40: ಮಂಗಳ ಆರತಿ.

  • ಬೆಳಗ್ಗೆ 4:40 ರಿಂದ 6:30: ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಈ ಸಮಯದಲ್ಲಿ ಅರ್ಚಕರು ರಾಮಲಲ್ಲಾನಿಗೆ ಅಭಿಷೇಕ, ಶೃಂಗಾರ, ಧೂಪ-ದೀಪ ಹಾಗೂ ಬೆಳಗಿನ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾರೆ.

  • ಬೆಳಗ್ಗೆ 6:30: ಶೃಂಗಾರ ಆರತಿ.

  • ಬೆಳಗ್ಗೆ 7:00: ಭಕ್ತಾದಿಗಳಿಗೆ ಅಧಿಕೃತವಾಗಿ ದರ್ಶನ ಆರಂಭ.

  • ಬೆಳಗ್ಗೆ 8:00 ರಿಂದ 8:10: ಬಾಲ ಭೋಗ್ ನೈವೇದ್ಯಕ್ಕಾಗಿ 10 ನಿಮಿಷ ಬಾಗಿಲು ಮುಚ್ಚಿರುತ್ತದೆ. (ಬಳಿಕ 11:30 ರವರೆಗೆ ದರ್ಶನ ಮುಂದುವರಿಯುತ್ತದೆ).

ಮಧ್ಯಾಹ್ನದ ವೇಳಾಪಟ್ಟಿ

  • ಮಧ್ಯಾಹ್ನ 11:30 ರಿಂದ 12:00: ರಾಜ್ ಭೋಗ್ ಅರ್ಪಣೆ (ದರ್ಶನ ಇರುವುದಿಲ್ಲ).

  • ಮಧ್ಯಾಹ್ನ 12:00: ರಾಜ್ ಭೋಗ್ ಆರತಿ.

  • ಮಧ್ಯಾಹ್ನ 12:30 ರಿಂದ 1:30: ಬಾಲಕ ರಾಮನ ಮಧ್ಯಾಹ್ನದ ವಿಶ್ರಾಂತಿ ಸಮಯ. ಈ 1 ಗಂಟೆ ಕಾಲ ಗರ್ಭಗುಡಿಯ ಬಾಗಿಲು ಸಂಪೂರ್ಣ ಮುಚ್ಚಿರುತ್ತದೆ.

  • ಮಧ್ಯಾಹ್ನ 1:35: ಭಕ್ತರಿಗೆ ಮಧ್ಯಾಹ್ನದ ದರ್ಶನ ಪುನಾರಂಭ.

ಸಂಜೆ ಮತ್ತು ರಾತ್ರಿಯ ವೇಳಾಪಟ್ಟಿ

  • ಸಂಜೆ 4:00 ರಿಂದ 4:10: ಸಂಜೆಯ ಬಾಲ ಭೋಗ್ ನೈವೇದ್ಯಕ್ಕಾಗಿ ಬಾಗಿಲು ಮುಚ್ಚಿರುತ್ತದೆ. (ಬಳಿಕ 6:45 ರವರೆಗೆ ದರ್ಶನ ಲಭ್ಯ).

  • ಸಂಜೆ 6:45 ರಿಂದ 7:00: ಧೂಪ-ದೀಪ ಮತ್ತು ನೈವೇದ್ಯ ಸಲ್ಲಿಕೆ.

  • ಸಂಜೆ 7:00: ಸಂಧ್ಯಾ ಆರತಿ ನೆರವೇರಲಿದೆ.

  • ರಾತ್ರಿ 8:00 ರಿಂದ 8:30 ಹಾಗೂ 9:15 ರಿಂದ 9:30: ಧೂಪ-ದೀಪ ಮತ್ತು ವಿಶೇಷ ನೈವೇದ್ಯಕ್ಕಾಗಿ ಬಾಗಿಲು ಮುಚ್ಚಿರುತ್ತದೆ.

  • ರಾತ್ರಿ 9:30: ಶಯನ ಆರತಿ ನೆರವೇರಲಿದೆ.

  • ರಾತ್ರಿ 10:00: ದೇವಾಲಯದ ಬಾಗಿಲುಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಈ ಫಲಿತಾಂಶ ಆಶ್ಚರ್ಯವೇನಲ್ಲ, ಮೋದಿಗೂ ಇದು ಎಚ್ಚರಿಕೆ ಸಂಕೇತ': MLC ಚುನಾವಣೆಯಲ್ಲಿ 'ಕೈ' ಶೂನ್ಯ ಸಾಧನೆ ಬಗ್ಗೆ BK ಹರಿಪ್ರಸಾದ್

MLC ಚುನಾವಣೆ: ವಾರಣಾಸಿಯ ಎರಡೂ ಸ್ಥಾನಗಳಲ್ಲಿ SP ಜಯಭೇರಿ; ಪ್ರಧಾನಿ ಮೋದಿ ಕ್ಷೇತ್ರದಲ್ಲೇ BJPಗೆ ಮುಖಭಂಗ!

'ಸಾವಿರಾರು ಪೋಸ್ಟ್‌ಗಳು ಮಾಯ': 'ಖಾತೆಗಳನ್ನು ತೆಗೆದುಹಾಕಿದ ಮಾತ್ರಕ್ಕೆ ಪ್ರಶ್ನೆಗಳು ಮಾಯವಾಗಲ್ಲ'; ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ!

'ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಗೆ ನಟಿಯರ ಮೈ ಬಣ್ಣದ ಗೀಳು; ಬಾಲಿವುಡ್‌ಗೆ ವಿದೇಶಿಯರೇ ಬೇಕು'!

ಟಾಟಾ ಸಮೂಹದಲ್ಲಿ ಬಿಕ್ಕಟ್ಟು: ಭಾರತೀಯ ಉದ್ಯಮಗಳು ನಿಮ್ಮ ಆಟದ ವಸ್ತುಗಳಲ್ಲ; ಪ್ರಧಾನಿ ಮೋದಿ-ಅಮಿತಾ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ