ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿಯಾದರೆ ಸರ್ಕಾರಿ ಕೆಲಸವಿಲ್ಲ ಎಂದ ಯೋಗಿ ಸರ್ಕಾರ Online Desk
ದೇಶ

ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಬಿಗ್ ಶಾಕ್! ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿಯಾದರೆ ಸರ್ಕಾರಿ ಕೆಲಸವಿಲ್ಲ: ನೇಮಕಾತಿ ನಿಯಮ ಬಿಗಿಗೊಳಿಸಿದ ಯೋಗಿ ಸರ್ಕಾರ

ಉತ್ತರ ಪ್ರದೇಶದಲ್ಲಿ ಹಿಂಸಾತ್ಮಕ ಮಾರ್ಗಗಳ ಮೂಲಕ ಆಡಳಿತ ಬದಲಾವಣೆಗೆ ಕರೆ ನೀಡುವ ಅಥವಾ ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಸರ್ಕಾರಿ ಉದ್ಯೋಗಗಳನ್ನು ನಿರಾಕರಿಸಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಆ ಕುರಿತ ವರದಿ ಇಲ್ಲಿದೆ:

ಲಕ್ನೊ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಹಿಂಸಾತ್ಮಕ ಮಾರ್ಗಗಳ ಮೂಲಕ ಆಡಳಿತ ಬದಲಾವಣೆಗೆ ಕರೆ ನೀಡುವ ಅಥವಾ ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಸರ್ಕಾರಿ ಉದ್ಯೋಗಗಳನ್ನು ನಿರಾಕರಿಸಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ನೇರ ನೇಮಕಾತಿಯ ಅಭ್ಯರ್ಥಿಗಳ ಚಾರಿತ್ರ್ಯ ಪರಿಶೀಲನೆ ನಿಯಮಗಳನ್ನು ಬಿಗಿಗೊಳಿಸಿ ಸರ್ಕಾರ ಈ ಆದೇಶ ಹೊರಡಿಸಿದೆ. ಆದರೆ, ಈ ಕ್ರಮಕ್ಕೆ ವಿರೋಧ ಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು ಬ್ರಿಟಿಷ್ ಕಾಲದ ಮನಸ್ಥಿತಿ ಎಂದು ಟೀಕಿಸಿವೆ. ಆ ಕುರಿತ ವರದಿ ಇಲ್ಲಿದೆ:

ಆದೇಶದಲ್ಲಿ ಏನಿದೆ?

ಅಲಹಾಬಾದ್ ಹೈಕೋರ್ಟ್‌ನ ನಿರ್ದೇಶನಗಳಿಗೆ ಅನುಗುಣವಾಗಿ ನೇಮಕಾತಿ ಮತ್ತು ಸಿಬ್ಬಂದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ದೇವರಾಜ್ ಅವರು ಹೊರಡಿಸಿರುವ ಆದೇಶದ ಅನ್ವಯ, ಹಿಂಸಾತ್ಮಕ ಮಾರ್ಗಗಳ ಮೂಲಕ ಅಸ್ತಿತ್ವದಲ್ಲಿರುವ ಆಡಳಿತ ಅಥವಾ ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸುವುದನ್ನೇ ಉದ್ದೇಶವಾಗಿಟ್ಟುಕೊಂಡಿರುವ ಸಂಘಟನೆಗಳ ಸದಸ್ಯರಾಗಿರುವ ವ್ಯಕ್ತಿಗಳು ಸರ್ಕಾರಿ ಹುದ್ದೆಗಳಿಗೆ ಅನರ್ಹರಾಗುತ್ತಾರೆ. ಒಬ್ಬ ವ್ಯಕ್ತಿಯು 21 ವರ್ಷ ತುಂಬಿದ ನಂತರ, ಚಾರಿತ್ರ್ಯ ಪರಿಶೀಲನೆಗೆ ಒಳಪಡುವ ಹಿಂದಿನ 3 ವರ್ಷಗಳ ಅವಧಿಯಲ್ಲಿ ಇಂತಹ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರೆ, ಅದನ್ನು ಆತ ಇನ್ನೂ ಸಕ್ರಿಯನಾಗಿದ್ದಾನೆ ಎಂಬುದಕ್ಕೆ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ, ಮಧ್ಯಂತರ ಅವಧಿಯಲ್ಲಿ ನಡವಳಿಕೆ ಸುಧಾರಿಸಿದೆ ಎಂಬ ಸ್ಪಷ್ಟ ಸಾಕ್ಷ್ಯಗಳಿದ್ದರೆ ಇದನ್ನು ಮರುಪರಿಶೀಲಿಸಬಹುದು.

ಯಾರಿಗೆ ಅನ್ವಯ?

ವಿವಿಧ ರಾಜ್ಯ ಸರ್ಕಾರಿ ಇಲಾಖೆಗಳು, ನಿಗಮಗಳು, ಮಂಡಳಿಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ನೇರ ನೇಮಕಾತಿಯ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಈ ನಿಯಮ ಅನ್ವಯಿಸುತ್ತದೆ. ಈಗಾಗಲೇ ಸೇವೆಯಲ್ಲಿರುವ ನೌಕರರಿಗೆ ಹೊಸದಾಗಿ ಚಾರಿತ್ರ್ಯ ಪರಿಶೀಲನೆ ಅಗತ್ಯವಿರುವುದಿಲ್ಲ. ಅದರಲ್ಲೂ, ಕೇವಲ ಅಭ್ಯರ್ಥಿಯ ರಾಜಕೀಯ ಸಿದ್ಧಾಂತ ಅಥವಾ ಅಭಿಪ್ರಾಯಗಳನ್ನು ಆಧರಿಸಿ ಯಾರನ್ನೂ ಅನರ್ಹಗೊಳಿಸುವಂತಿಲ್ಲ ಎಂದು ಸ್ಪಷ್ಟಪಡಿಸಿರುವ ಸರ್ಕಾರ, ಕೇವಲ ಎಫ್‌ಐಆರ್ ದಾಖಲಾಗಿದೆ ಅಥವಾ ತನಿಖೆ ಬಾಕಿ ಇದೆ ಎಂಬ ಮಾತ್ರಕ್ಕೆ ಉದ್ಯೋಗ ನಿರಾಕರಿಸುವಂತಿಲ್ಲ. ನ್ಯಾಯಾಲಯದಿಂದ ದೋಷಮುಕ್ತಗೊಂಡವರು, ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡ ಪ್ರಕರಣಗಳು ಮತ್ತು ಬಾಲಾಪರಾಧ ನ್ಯಾಯ ಕಾಯ್ದೆಯ ವ್ಯಾಪ್ತಿಗೆ ಬರುವ ಪ್ರಕರಣಗಳಿರುವ ಅಭ್ಯರ್ಥಿಗಳಿಗೆ ಸ್ವಯಂಚಾಲಿತ ಅನರ್ಹತೆ ಇರುವುದಿಲ್ಲ ಎಂದು ತಿಳಿಸಿದೆ. ಹಾಗಾಗಿ, ನೇಮಕಾತಿ ಪ್ರಕ್ರಿಯೆ ವಿಳಂಬವಾಗುವುದನ್ನು ತಪ್ಪಿಸಲು ಜಿಲ್ಲಾ ಪೊಲೀಸ್ ಮತ್ತು ಸ್ಥಳೀಯ ಗುಪ್ತಚರ ಸಂಸ್ಥೆಗಳು ವಿನಂತಿ ಬಂದ 30 ದಿನಗಳ ಒಳಗಾಗಿ ಚಾರಿತ್ರ್ಯ ಪರಿಶೀಲನಾ ವರದಿಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ, ಕೇವಲ ಪ್ರತಿಭಟನೆ ಮಾತ್ರವಲ್ಲದೆ ದೇಶದ್ರೋಹ, ಭಯೋತ್ಪಾದನೆ, ಪೇಪರ್ ಲೀಕ್, ಪರೀಕ್ಷೆಗಳಲ್ಲಿ ನಕಲಿ ಅಭ್ಯರ್ಥಿಗಳನ್ನು ಕೂರಿಸುವುದು, ಸೈಬರ್ ಕ್ರೈಮ್ ಮತ್ತು ಯುಪಿಐ ವಂಚನೆಗಳಲ್ಲಿ ಭಾಗಿಯಾದವರನ್ನೂ ಉದ್ಯೋಗದಿಂದ ದೂರ ಇಡಲು ನಿಯಮ ರೂಪಿಸಲಾಗಿದೆ.

ಏತನ್ಮಧ್ಯೆ, ಇತ್ತೀಚಿನ ಪ್ರತಿಭಟನೆಯೊಂದರಲ್ಲಿ ಆಡಳಿತ ಬದಲಾವಣೆ ಘೋಷಣೆ ಮೊಳಗಿದ ಬೆನ್ನಲ್ಲೇ ಯೋಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದನ್ನು ಬಲವಾಗಿ ಖಂಡಿಸಿರುವ ಸಮಾಜವಾದಿ ಪಕ್ಷ, "ಇಂತಹ ಕರಾಳ ಆದೇಶಗಳನ್ನು ಬ್ರಿಟಿಷರ ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ಭಾರತೀಯರ ಧ್ವನಿ ಅಡಗಿಸಲು ಬಳಸಲಾಗುತ್ತಿತ್ತು. ಇದು ಯುವ ಸಮೂಹದ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ" ಎಂದು ಆರೋಪಿಸಿದೆ. ಕಾಂಗ್ರೆಸ್ ನಾಯಕರೂ ಕೂಡ ದೇಶದಲ್ಲಿ ನ್ಯಾಯಾಲಯದಿಂದ ಅಪರಾಧ ಸಾಬೀತಾಗುವ ಮುನ್ನವೇ ಯುವಕರನ್ನು ಉದ್ಯೋಗದಿಂದ ವಂಚಿಸುವುದು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೇರೆಯವರಿಗೆ ಉಪದೇಶ ನೀಡುವುದು ನಿಲ್ಲಿಸಿ; ವಾರಾಣಸಿ, ನಾಗ್ಪುರ ಬಿಜೆಪಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಿ: ಪ್ರಧಾನಿ ಮೋದಿಗೆ ಕಾಂಗ್ರೆಸ್‌ ತಿರುಗೇಟು

KPSC: ರಾಜ್ಯ ಸರ್ಕಾರಕ್ಕೆ ಭಾರಿ ಶಾಕ್; ಸುಪ್ರೀಂ ನಲ್ಲಿ 2022 ರ ವಿಶೇಷ ಕಾಯ್ದೆ ರದ್ದು! 362 ಕೆಎಎಸ್ ಅಧಿಕಾರಿಗಳ ನೌಕರಿಗೆ ಕುತ್ತು!

Israel polls: ಅರಬ್ ಪಾರ್ಟಿಗಳೇ 'ಕಿಂಗ್ ಮೇಕರ್' ಆಗೋ ಸಾಧ್ಯತೆ, ಅಧಿಕಾರದಿಂದ ನೆತನ್ಯಾಹುರನ್ನು ಕಿತ್ತೆಸೆಯಲು ಪ್ಲಾನ್!

ಇಸ್ರೇಲ್ ಚುನಾವಣೆ ಫಲಿತಾಂಶ: ಬಹುಮತ ಪಡೆಯುವಲ್ಲಿ ನೆತನ್ಯಾಹು, ಗಾಡಿ ಐಸೆನ್‌ಕೋಟ್‌ ವಿಫಲ, ಮೈತ್ರಿ ಅಗತ್ಯ!

'ನಾಸೀರುದ್ದೀನ್ ಶಾ ಸೈದ್ಧಾಂತಿಕ ಒಲವುಗಳನ್ನು ನಾನು ತಪ್ಪಾಗಿ ಅರ್ಥೈಸಿದ್ದೆ: ಅವರೊಬ್ಬ ಅಪಾಯಕಾರಿ ದಿಮಾಗಿ ನಕ್ಸಲ್, ವಿನಾಶಕಾರಿ ಚಿಂತಕ'