ಶ್ರೇಯಸಿ ಸಿಂಗ್ 
ದೇಶ

ನೈತಿಕ ಪೊಲೀಸ್‌ಗಿರಿಯನ್ನು ಸಭ್ಯ, ಸುಸಂಸ್ಕೃತ ರೀತಿಯಲ್ಲಿ ಮಾಡಬಹುದು: ಬಿಹಾರ ಸಚಿವೆ ಶ್ರೇಯಸಿ ಸಿಂಗ್ ಆಘಾತಕಾರಿ ಹೇಳಿಕೆ

ಕೆಲವು ದಿನಗಳ ಹಿಂದೆ ಜಮುಯಿ ಜಿಲ್ಲೆಯ ರಸ್ತೆಬದಿಯಲ್ಲಿ ಹುಡುಗ ಮತ್ತು ಹುಡುಗಿಯನ್ನು ತಡೆದು ಗುಂಪೊಂದು ಕಿರುಕುಳ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾದ ನಂತರ ಅವರ ಈ ಹೇಳಿಕೆ ಹೊರಬಂದಿದೆ.

ಜಮುಯಿ ಜಿಲ್ಲೆಯಲ್ಲಿ ಓರ್ವ ಯುವಕ ಮತ್ತು ಯುವತಿಗೆ ಕಿರುಕುಳ ನೀಡಿದ ಘಟನೆಯನ್ನು ಖಂಡಿಸುವಾಗ, 'ನೈತಿಕ ಪೊಲೀಸ್‌ಗಿರಿಯನ್ನು (moral policing) ಹೆಚ್ಚು ಸಭ್ಯ ಮತ್ತು ಸುಸಂಸ್ಕೃತ ರೀತಿಯಲ್ಲಿ ಮಾಡಬಹುದು' ಎಂದು ಹೇಳಿಕೆ ನೀಡುವ ಮೂಲಕ ಬಿಹಾರದ ಸಚಿವೆ ಹಾಗೂ ಜಮುಯಿ ಕ್ಷೇತ್ರದ ಶಾಸಕಿ ಶ್ರೇಯಸಿ ಸಿಂಗ್ ಮಂಗಳವಾರ ವಿವಾದ ಸೃಷ್ಟಿಸಿದ್ದಾರೆ.

'ನೈತಿಕ ಪೊಲೀಸ್‌ಗಿರಿಯನ್ನು ಹೆಚ್ಚು ಸಭ್ಯ ಮತ್ತು ಘನತೆಯಿಂದ ನಡೆಸಬಹುದು. ಆದರೆ, ಆ ಯುವಕ ಮತ್ತು ಯುವತಿಯನ್ನು ನಡೆಸಿಕೊಂಡ ರೀತಿ ಹಾಗೂ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಬಗೆಯನ್ನು ಖಂಡಿತವಾಗಿಯೂ ಸಹಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಮಾಜಿ ಶೂಟಿಂಗ್ ಕ್ರೀಡಾಪಟು ಹಾಗೂ ಬಿಜೆಪಿ ನಾಯಕಿ ಸಿಂಗ್ 'ಇಂಡಿಯಾ ಟುಡೇ ಟಿವಿ'ಗೆ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಜಮುಯಿ ಜಿಲ್ಲೆಯ ರಸ್ತೆಬದಿಯಲ್ಲಿ ಹುಡುಗ ಮತ್ತು ಹುಡುಗಿಯನ್ನು ತಡೆದು ಗುಂಪೊಂದು ಕಿರುಕುಳ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾದ ನಂತರ ಅವರ ಈ ಹೇಳಿಕೆ ಹೊರಬಂದಿದೆ.

ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡುವಂತೆ ಕೇಳಿದಾಗ, 'ಒಬ್ಬ ವ್ಯಕ್ತಿ ತಮ್ಮ ಜೀವನವನ್ನು ಹೇಗೆ ನಡೆಸಲು ಬಯಸುತ್ತಾರೆ ಮತ್ತು ಅದರೊಂದಿಗೆ ಏನು ಮಾಡಲು ಇಚ್ಛಿಸುತ್ತಾರೆ ಎಂಬುದರ ಕುರಿತು ನೀವು ಅಭಿಪ್ರಾಯವನ್ನು ಹೊಂದಿರಬಹುದು. ಬಹುಶಃ ಅದನ್ನು ಮಾಡಲು ಇನ್ನೂ ಉತ್ತಮ ಮಾರ್ಗವಿರಬಹುದು. ಆದರೆ, ಅವರೊಂದಿಗೆ ನಡೆದುಕೊಂಡಿರುವ ರೀತಿ ಮಾತ್ರ ಖಂಡಿತವಾಗಿಯೂ ಸಹಿಸಲಸಾಧ್ಯವಾದುದು. ಹೊರಬಂದಿರುವ ವಿಡಿಯೋಗಳು ಆಘಾತಕಾರಿಯಾಗಿವೆ' ಎಂದು ಅವರು ಹೇಳಿದರು.

'ನೀವು ವಾಸಿಸುವ ಸಮಾಜದಲ್ಲಿರುವ ಒಬ್ಬ ಹುಡುಗ ಮತ್ತು ಹುಡುಗಿಯೊಂದಿಗೆ ಹೇಗೆ ನಡೆದುಕೊಳ್ಳುತ್ತೀರಿ? ಆ ಹುಡುಗ ಮತ್ತು ಹುಡುಗಿ ಜಮ್ಮುವಿನಿಂದ ಬಂದ ಮಕ್ಕಳೆಂಬುದು ಅವರಿಗೆ ಖಂಡಿತವಾಗಿಯೂ ತಿಳಿದಿರಬೇಕು. ಸ್ಥಳೀಯರು ಅವರೊಂದಿಗೆ ಇಷ್ಟು ಕೆಟ್ಟದಾಗಿ ನಡೆದುಕೊಂಡರು ಎಂಬುದನ್ನು ನನಗೆ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ' ಎಂದು ಸಿಂಗ್ ಹೇಳಿದರು.

'ಈ ರೀತಿಯ ಅಪರಾಧ ತಡೆಗಟ್ಟಲು, ಇದಕ್ಕೆ ಕಾರಣರಾದವರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿರದಂತೆ ನಾನು ನನ್ನ ಕಡೆಯಿಂದ ಖಚಿತಪಡಿಸಿಕೊಳ್ಳಲಿದ್ದೇನೆ. ಈ ಘಟನೆಯು ಭವಿಷ್ಯಕ್ಕೆ ಒಂದು ಮಾದರಿಯಾಗಬೇಕು," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: Cricket Finalನಲ್ಲಿ ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ, ಚಿನ್ನದ ಬೇಟೆ!

‘ಡಿಕೆಶಿಗಿಂತ 4 ಪಟ್ಟು ಹೆಚ್ಚು ಸಂಪತ್ತು HDK ಬಳಿ ಇದೆ, ಏರ್​ಪೋರ್ಟ್ ರಸ್ತೆ, ನೆಲಮಂಗಲದಲ್ಲೂ ಆಸ್ತಿ ಇದೆ; ಇದೆಲ್ಲ ಎಲ್ಲಿಂದ ಸಂಪಾದನೆ ಮಾಡಿದರು?

Video: ಪತ್ನಿ, ಮಗಳೊಂದಿಗೆ ಲಾಲ್‌ಬಾಗ್ಚಾ ರಾಜನ ದರ್ಶನ ಪಡೆದ ಶಾರುಖ್ ಖಾನ್; ಗಣೇಶನಿಗೆ ಭಕ್ತಿಯಿಂದ ಕೈಮುಗಿದ ಕಿಂಗ್ ಖಾನ್!

60 ಎಸೆತ, 62 ರನ್; ಜಪಾನ್ ವಿರುದ್ಧ ಭಾರತಕ್ಕೆ 2 ರನ್ ರೋಚಕ ಜಯ

ಇದೊಂದು ಕೆಲಸ ಮಾಡಿದ್ರೆ, ಮುಂದಿನ ಸಾಂಕ್ರಾಮಿಕದಲ್ಲಿ 27 ಲಕ್ಷಕ್ಕೂ ಅಧಿಕ ಜನರ ಜೀವ ಉಳಿಸಬಹುದು: ಅಧ್ಯಯನ