ದೇಶ

ಶಾಲಾ ಮಕ್ಕಳಿಗೆ ಪೊಂಗಲ್ ಬಡಿಸಿ, ನೆಲದ ಮೇಲೆ ಕುಳಿತು ಉಪಾಹಾರ ಸೇವಿಸಿದ ತಮಿಳುನಾಡು ಸಿಎಂ ವಿಜಯ್; Video Viral

ಮುಖ್ಯಮಂತ್ರಿ ವಿಜಯ್ ಅವರು ಶಾಲೆಯ ತರಗತಿ ಕೊಠಡಿಗಳನ್ನೂ ಪರಿಶೀಲಿಸಿದರು. ವಿದ್ಯಾರ್ಥಿಗಳು ಉಪಾಹಾರ ಸೇವಿಸುತ್ತಿದ್ದ ವೇಳೆ ಅವರೊಂದಿಗೆ ಸಂವಾದ ನಡೆಸಿದ ಅವರು, ಊಟ ಇಷ್ಟವಾಗಿದೆಯೇ ಎಂದು ಕೇಳಿದಂತೆ ಕಂಡುಬಂದಿತು.

ಚೆನ್ನೈನ ತಿರುವನ್ಮಿಯೂರಿನ ಗಾಂಧಿ ಗ್ರಾಮಂನ ಚೆನ್ನೈಮಾಧ್ಯಮಿಕ ಶಾಲೆಯಲ್ಲಿ ಇಂದು ಬೆಳಗ್ಗೆ ಸಿಎಂ ಜೋಸೆಫ್ ವಿಜಯ್ ಅವರು ಮಕ್ಕಳ ಬೆಳಗಿನ ಉಪಾಹಾರ ಯೋಜನೆಯ ವಿಸ್ತರಣೆಗೆ ಚಾಲನೆ ನೀಡಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಸಿಹಿ ಪೊಂಗಲ್ ಬಡಿಸಿದ ಅವರು, ಬಳಿಕ ಮಕ್ಕಳೊಂದಿಗೆ ನೆಲದ ಮೇಲೆ ಕುಳಿತು ಉಪಾಹಾರ ಸೇವಿಸಿದರು.

ಮುಖ್ಯಮಂತ್ರಿ ವಿಜಯ್ ಅವರು ಶಾಲೆಯ ತರಗತಿ ಕೊಠಡಿಗಳನ್ನೂ ಪರಿಶೀಲಿಸಿದರು. ವಿದ್ಯಾರ್ಥಿಗಳು ಉಪಾಹಾರ ಸೇವಿಸುತ್ತಿದ್ದ ವೇಳೆ ಅವರೊಂದಿಗೆ ಸಂವಾದ ನಡೆಸಿದ ಅವರು, ಊಟ ಇಷ್ಟವಾಗಿದೆಯೇ ಎಂದು ಕೇಳಿದಂತೆ ಕಂಡುಬಂದಿತು. ಯೋಜನೆ ವಿಸ್ತರಣೆಯ ಉದ್ಘಾಟನಾ ದಿನ ವಿದ್ಯಾರ್ಥಿಗಳಿಗೆ ಸಿಹಿ ಪೊಂಗಲ್, ಪೊಂಗಲ್ ಹಾಗೂ ಸಾಂಬಾರ್‌ನ್ನು ನೀಡಲಾಯಿತು.

ವಿಜಯ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವ್ಯಕ್ತಿ ಇಡೀ ಭಾರತದಲ್ಲಿ ಜನರ ಹೃದಯ ಗೆಲ್ಲುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ನಡೆ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯನ್ನು ತರುತ್ತದೆ. ರಾಜ್ಯದ ಕಾರ್ಯಾಂಗದ ಮುಖ್ಯಸ್ಥರು ಅನಿರೀಕ್ಷಿತವಾಗಿ ಭೇಟಿ ನೀಡುತ್ತಿರುವುದು ಗಮನಾರ್ಹ. ಸಿಎಂ ವಿಜಯ್ ಆಡಳಿತದಲ್ಲಿ ವೃತ್ತಿಪರತೆಯ ಹೊಸ ಮಟ್ಟವನ್ನು ತರುತ್ತಿದ್ದಾರೆ. ಅಭಿನಂದನೆಗಳು ಎಂದು ಹೇಳಿದ್ದಾರೆ.

ವಿಜಯ್ ಅವರನ್ನು ನೋಡಿ ಮಕ್ಕಳು ತುಂಬಾ ಸಂತೋಷವಾಗಿರುವಂತೆ ಕಾಣುತ್ತಿದ್ದಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ವಾವ್, ಇದು ತುಂಬಾ ಸುಂದರವಾಗಿದೆ. ಅವರಿಗೆ ಅಭಿನಂದನೆಗಳು ಎಂದು ಇನ್ನೊಬ್ಬರು ಬರೆದಿದ್ದಾರೆ.

ಯೋಜನೆಯ ವಿಸ್ತರಣೆ ಕುರಿತು

ಪೆರುಂತಲೈವರ್ ಕಾಮರಾಜರ್ ಉಚಿತ ಉಪಾಹಾರ ಯೋಜನೆಯ ವಿಸ್ತರಣೆಯಿಂದ 15,454 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 6ರಿಂದ 8ನೇ ತರಗತಿಯ ಸುಮಾರು 15.30 ಲಕ್ಷ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರಯೋಜನ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್ ಅವರ ಹೆಸರಿನಲ್ಲಿರುವ ಈ ವಿಸ್ತರಿತ ಯೋಜನೆಯು 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪೌಷ್ಟಿಕ ಉಪಾಹಾರ ಒದಗಿಸುವ ಮೂಲಕ ಅವರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸುವ ಉದ್ದೇಶ ಹೊಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಯೋಜನೆಗಾಗಿ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 217.63 ಕೋಟಿ ರೂ ಅನುದಾನ ನೀಡಿದ್ದು, ಒಟ್ಟು ಬಜೆಟ್ 724 ಕೋಟಿ ರೂಗೆ ಏರಿಕೆಯಾಗಿದೆ.

ಉಪಾಹಾರದ ಮೆನುವಿನಲ್ಲಿ ಉಪ್ಪಿಟ್ಟು, ಕಿಚಡಿ ಹಾಗೂ ಪೊಂಗಲ್‌ನಂತಹ ತಿನಿಸುಗಳು ಇರಲಿದ್ದು, ವಾರದಲ್ಲಿ ಎರಡು ಬಾರಿ ಸಿರಿಧಾನ್ಯ ಆಧಾರಿತ ತಿನಿಸುಗಳನ್ನು ನೀಡಲಾಗುತ್ತದೆ.

ಗ್ರೇಟರ್ ಚೆನ್ನೈ ಕಾರ್ಪೊರೇಷನ್ ವ್ಯಾಪ್ತಿಯ 447 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸಮಗ್ರ ಅಡುಗೆಮನೆಗಳ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ.

ಇತರ ಮಹಾನಗರ ಪಾಲಿಕೆಗಳು, ನಗರಸಭೆಗಳು ಹಾಗೂ ಅವುಗಳಿಗೆ ಹೊಂದಿಕೊಂಡಿರುವ ಪಟ್ಟಣ ಪ್ರದೇಶಗಳಲ್ಲಿ 2,150 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸಮಗ್ರ ಅಡುಗೆಮನೆಗಳ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಪೌರಾಡಳಿತ ನಿರ್ದೇಶನಾಲಯ ವಹಿಸಲಿದೆ.

ಗ್ರಾಮೀಣ, ಪಟ್ಟಣ ಹಾಗೂ ಅವುಗಳಿಗೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳ 12,857 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ತಮಿಳುನಾಡು ಮಹಿಳಾ ಅಭಿವೃದ್ಧಿ ನಿಗಮ ಯೋಜನೆಯನ್ನು ಜಾರಿಗೊಳಿಸಲಿದೆ.

ಸಂಬಂಧಿತ ಶಾಲೆಗಳಲ್ಲೇ ಸ್ವಸಹಾಯ ಸಂಘಗಳ ಸದಸ್ಯರು ಉಪಾಹಾರವನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಬಡಿಸಲಿದ್ದಾರೆ. ಆರೋಗ್ಯ, ಪೌಷ್ಟಿಕತೆ, ಶಾಲಾ ಹಾಜರಾತಿ ಹಾಗೂ ವಿದ್ಯಾರ್ಥಿಗಳ ಕಲಿಕೆಯನ್ನು ಸಮನ್ವಯಗೊಳಿಸುವ ಮೂಲಕ ಶಾಲಾ ಶಿಕ್ಷಣದ ಅಡಿಪಾಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜಕೀಯದತ್ತ ಸಿಎಂ ವಿಜಯ್ ಅವರ ಪಯಣ

ವಿಜಯ್ ಅವರು 1984ರಲ್ಲಿ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದರು. ಗಿಲ್ಲಿ, ತುಪ್ಪಕ್ಕಿ , ಮೆರ್ಸಲ್, ಬಿಗಿಲ್, ಮಾಸ್ಟರ್ ಮತ್ತು ಲಿಯೋ ಸೇರಿದಂತೆ ಹಲವು ಯಶಸ್ವಿ ಚಿತ್ರಗಳ ಮೂಲಕ ತಮಿಳು ಚಿತ್ರರಂಗದ ಪ್ರಮುಖ ತಾರೆಯರಲ್ಲಿ ಒಬ್ಬರಾಗಿ ಬೆಳೆದರು.

2024ರ ಫೆಬ್ರವರಿಯಲ್ಲಿ ಅವರು ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಸ್ಥಾಪಿಸುವ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶ ಘೋಷಿಸಿದರು. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವನ್ನೂ ಅವರು ಪ್ರಕಟಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: Cricket Finalನಲ್ಲಿ ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ, ಚಿನ್ನದ ಬೇಟೆ!

ಕರ್ನಾಟಕದ 4 ನಾಲ್ಕು MLC ಸ್ಥಾನಗಳಿಗೆ ಚುನಾವಣೆ ಘೋಷಣೆ; ನಾಲ್ಕು ರಾಜ್ಯಗಳ 28 ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದ ಆಯೋಗ

ಜಾಗತಿಕ ವ್ಯವಸ್ಥೆ ಒತ್ತಡದಲ್ಲಿದೆ, ಬಹುಪಕ್ಷೀಯತೆಗೆ ಸುಧಾರಣೆ ಅಗತ್ಯ: ವಿಶ್ವಸಂಸ್ಥೆಯಲ್ಲಿ ಜೈಶಂಕರ್ ಕರೆ

ಜೀವ ಪಣಕ್ಕಿಟ್ಟು 3 ಕಿ.ಮೀ ಬೆನ್ನಟ್ಟಿ ಆನೆಮರಿ ರಕ್ಷಿಸಿದ ಮೀನುಗಾರರು, ಕೊನೆಗೂ ತಾಯಿ ಮಡಿಲು ಸೇರಿದ ಪುಟ್ಟ ಕಂದ! Video

'ಚೀಟಿಂಗ್ ಸಮರ್ಥಿಸುತ್ತಿಲ್ಲ.. ಆದ್ರೆ ವ್ಯವಸ್ಥೆ ಸರಿಯಾಗಬೇಕು, ಸಾಹಿಲ್ ಸಾವಿಗೆ ನ್ಯಾಯಬೇಕು': ಪ್ರತಿಭಟನಾ ನಿರತ IIT Bombay ವಿದ್ಯಾರ್ಥಿಗಳು!