ಶಿವರಾಜ್ ಸಿಂಗ್ ಚೌಹಾಣ್ 
ದೇಶ

ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಬರ, ಕಡಿಮೆ ನೀರು ಬೇಕಾದ ಬೆಳೆಗಳಿಗೆ ಒತ್ತು: ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಈವರೆಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ರಾಯಲಸೀಮೆ ಸೇರಿದಂತೆ ಕೆಲವು ಭಾಗಗಳು, ತೆಲಂಗಾಣದ ಕೆಲವು ಪ್ರದೇಶಗಳು ಹಾಗೂ ರಾಜಸ್ಥಾನದ ಕೆಲವು ಭಾಗಗಳಲ್ಲಿ ಬರದ ಪರಿಸ್ಥಿತಿ..

ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಕುರಿತು ಕಳವಳವಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ತಿಳಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, 'ರಾಜ್ಯಗಳಿಂದ ವಿವರವಾದ ವರದಿಗಳು ಇನ್ನೂ ಬರಬೇಕಿದೆ.

ಈವರೆಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದ ರಾಯಲಸೀಮೆ ಸೇರಿದಂತೆ ಕೆಲವು ಭಾಗಗಳು, ತೆಲಂಗಾಣದ ಕೆಲವು ಪ್ರದೇಶಗಳು ಹಾಗೂ ರಾಜಸ್ಥಾನದ ಕೆಲವು ಭಾಗಗಳಲ್ಲಿ ಬರದ ಪರಿಸ್ಥಿತಿ ಕುರಿತು ಕಳವಳವಿದೆ. ರಾಜ್ಯಗಳಿಂದ ವಿವರವಾದ ವರದಿಗಳನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ” ಎಂದರು.

ಕರ್ನಾಟಕ ಸರ್ಕಾರ ಕೇಂದ್ರದ ತಂಡವನ್ನು ಕಳುಹಿಸುವಂತೆ ಮನವಿ ಮಾಡಿದ್ದು, ಅಕ್ಟೋಬರ್ 3ರಂದು ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಕೂಡ ಕೇಂದ್ರದ ಪರಿಶೀಲನಾ ತಂಡಕ್ಕೆ ಮನವಿ ಮಾಡಿದ್ದು, ಅಲ್ಲಿಗೂ ತಂಡವನ್ನು ಕಳುಹಿಸಲಾಗುವುದು ಎಂದು ಚೌಹಾಣ್ ಹೇಳಿದ್ದಾರೆ.

ಖುದ್ದು ಭೇಟಿಗೂ ಯೋಜನೆ

ಮಾತ್ರವಲ್ಲದೇ ಬರಪೀಡಿತ ರಾಜ್ಯಗಳಿಗೆ ತಾವೇ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುವುದಾಗಿ ತಿಳಿಸಿರುವ ಕೃಷಿ ಸಚಿವರು, ಸಂಬಂಧಿತ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ.

“ಕೃಷಿ ಭೂಮಿಗಳು ಪಾಳು ಬೀಳದಂತೆ ನೋಡಿಕೊಳ್ಳುವುದು ತಕ್ಷಣದ ಉದ್ದೇಶ” ಎಂದ ಚೌಹಾಣ್, ಮುಂಬರುವ ರಬಿ ಹಂಗಾಮಿನಲ್ಲಿ ನೀರಿನ ಲಭ್ಯತೆ ಹಾಗೂ ಮಣ್ಣಿನ ತೇವಾಂಶವನ್ನು ಆಧರಿಸಿ ಬೆಳೆ ಆಯ್ಕೆ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಕಡಿಮೆ ನೀರು ಬೇಕಾಗುವ ಬೇಳೆಕಾಳುಗಳು ಹಾಗೂ ಎಣ್ಣೆಕಾಳುಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಲಾಗಿದೆ ಎಂದರು.

ಸ್ಥಳೀಯ ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗೆ ಹೊಂದಿಕೊಳ್ಳುವ, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಹಾಗೂ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ಬೀಜಗಳು ಮತ್ತು ಬೆಳೆ ತಳಿಗಳನ್ನು ಗುರುತಿಸಲು ರಾಜ್ಯಗಳಿಗೆ ಕೇಂದ್ರ ನೆರವು ನೀಡಲಿದೆ ಎಂದು ಚೌಹಾಣ್ ತಿಳಿಸಿದ್ದಾರೆ.

ಬರ ಪರಿಸ್ಥಿತಿಯ ನಡುವೆಯೂ ರೈತರು ಕೃಷಿ ಮುಂದುವರಿಸಲು ಅಗತ್ಯ ಸಹಾಯ ಒದಗಿಸುವುದಾಗಿ ಅವರು ಹೇಳಿದ್ದಾರೆ. ರಾಜ್ಯಗಳು ಹಾಗೂ ಇತರ ಸಂಬಂಧಿತ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಸಹಕಾರಕ್ಕೂ ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಚೌಹಾಣ್ ತಿಳಿಸಿದ್ದಾರೆ.

ದೇಶದಾದ್ಯಂತ ಮಳೆ ಕೊರತೆ ಮತ್ತು ನೀರಿನ ಲಭ್ಯತೆಯಲ್ಲಿನ ವ್ಯತ್ಯಾಸದ ಹಿನ್ನೆಲೆಯಲ್ಲಿ ರಬಿ ಹಂಗಾಮಿನ ಬೆಳೆ ಯೋಜನೆಗಳನ್ನು ನೀರಿನ ಲಭ್ಯತೆ ಹಾಗೂ ಮಣ್ಣಿನ ತೇವಾಂಶಕ್ಕೆ ಅನುಗುಣವಾಗಿ ರೂಪಿಸುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇವ್ರು ಊರುಬಿಟ್ಟು ಊರಿಗೆ ಬಂದು ಆಸ್ತಿ ಮಾಡಬಹುದು, ನಾವು ಮಾಡ್ಬಾರ್ದ? ಪಾರ್ಟ್-2ನಲ್ಲಿ ಏನಿದೆ ಅಂತ ಗೊತ್ತು: HDK ಆರೋಪಕ್ಕೆ CM ಡಿಕೆಶಿ ತಿರುಗೇಟು

ಬರದಿಂದ ಕೆಂಗೆಟ್ಟ ಕರ್ನಾಟಕಕ್ಕೆ ಕೇಂದ್ರದ ನೆರವಿನ ನಿರೀಕ್ಷೆ: ಅಕ್ಟೋಬರ್ 3 ರಿಂದ ಕೇಂದ್ರ ತಂಡದ ಸಮೀಕ್ಷೆ- ಎಚ್.ಡಿ ಕುಮಾರಸ್ವಾಮಿ

ಪಾಕ್‌ಗೆ ನಡುಕ ಹುಟ್ಟಿಸಿದ ಬಲೂಚ್ ನೂತನ ಮಹಿಳಾ ಪಡೆ: 9 ಸೈನಿಕರ ಹತ್ಯೆಗೈದ ಮೊದಲ ಕಾರ್ಯಾಚರಣೆ ವಿಡಿಯೋ ಬಿಡುಗಡೆ!

ಕಥುವಾದಲ್ಲಿ ಘೋರ ಕೃತ್ಯ: ಓರ್ವ ಅಧಿಕಾರಿ ಸೇರಿ ನಾಲ್ವರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ CISF ಯೋಧ!

ಜೀವದ ಹಂಗು ತೊರೆದು, ಕಾರಿನ ಮೇಲೆ ಹತ್ತಿ ಗುಟ್ಕಾ ಸ್ಮಗ್ಲಿಂಗ್ ತಡೆದ ಪೊಲೀಸ್ ಪೇದೆ ಸನ್ಮಾನಿಸಿದ ಸಿಎಂ ವಿಜಯ್! Video