ರಾಹುಲ್ ಗಾಂಧಿ - ಅಜ್ಮಲ್ ಕಸಬ್ ಫೋಟೊ ಹಂಚಿಕೊಂಡ ಐಎಎಫ್ ಮಾಜಿ ಅಧಿಕಾರಿ Photo | @FltLtAnoopVerma/X
ದೇಶ

'ಭಾರತಕ್ಕೆ ಹೆಚ್ಚು ಅಪಾಯಕಾರಿ': ರಾಹುಲ್ ಗಾಂಧಿಯನ್ನು ಅಜ್ಮಲ್ ಕಸಬ್‌ಗೆ ಹೋಲಿಸಿದ ಮಾಜಿ ಐಎಎಫ್ ಅಧಿಕಾರಿ; ದೂರು ದಾಖಲು

'ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ಅಥವಾ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆಸುವ ಯಾವುದೇ ದುರುದ್ದೇಶಪೂರಿತ ಅಥವಾ ಕಾನೂನುಬಾಹಿರ ಕೃತ್ಯಗಳನ್ನು ಸಹಿಸುವುದಿಲ್ಲ' ಎಂದು ಆ ಸಂಘಟನೆ ಹೇಳಿದೆ.

ಭಾರತೀಯ ವಾಯುಪಡೆಯ ನಿವೃತ್ತ ಫ್ಲೈಟ್ ಲೆಫ್ಟಿನೆಂಟ್ ಅನೂಪ್ ವರ್ಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಒಂದರ ವಿರುದ್ಧ ಕಾಂಗ್ರೆಸ್ ಸೇವಾ ದಳವು ಸೈಬರ್ ದೂರು ದಾಖಲಿಸಿದೆ; ಈ ಪೋಸ್ಟ್‌ನಲ್ಲಿ ಅವರು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು 2008ರ ಮುಂಬೈ ದಾಳಿಯ ಅಪರಾಧಿ ಹಾಗೂ ಭಯೋತ್ಪಾದಕ ಅಜ್ಮಲ್ ಕಸಬ್‌ಗೆ ಹೋಲಿಸಿದ್ದರು.

ವರ್ಮಾ ಅವರು ಮಂಗಳವಾರ 'ಎಕ್ಸ್'ನಲ್ಲಿ ರಾಹುಲ್ ಗಾಂಧಿ ಮತ್ತು ಕಸಬ್ ಇಬ್ಬರೂ ಬ್ಯಾಗ್ ಹಿಡಿದು ನಡೆದು ಹೋಗುತ್ತಿರುವ ಚಿತ್ರಗಳನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದರು. 'ನಾನು ನಿಮಗೆ ಸಂಪೂರ್ಣ ದೃಢತೆಯಿಂದ ಹೇಳಬಲ್ಲೆ, ಎಡಭಾಗದಲ್ಲಿರುವ ವ್ಯಕ್ತಿಯು ಭಾರತಕ್ಕೆ ಹೆಚ್ಚು ಅಪಾಯಕಾರಿ' ಎಂದು ಅವರು ಬರೆದಿದ್ದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು, 26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿನ ಪಾತ್ರಕ್ಕಾಗಿ ಅಪರಾಧಿಯೆಂದು ಸಾಬೀತಾಗಿದ್ದ ಕಸಬ್‌ಗೆ ಹೋಲಿಸಿದ್ದರಿಂದ ಈ ಪೋಸ್ಟ್ ವಿವಾದಕ್ಕೆ ಕಾರಣವಾಯಿತು.

ಈ ವಿಷಯವನ್ನು 'ಸೂಕ್ತ ಕಾನೂನು ಮಾರ್ಗಗಳ' ಮೂಲಕ ಮುಂದುವರಿಸುವುದಾಗಿ ಕಾಂಗ್ರೆಸ್ ಸೇವಾ ದಳದ ಕಾನೂನು ಘಟಕ ತಿಳಿಸಿದೆ. 'ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ಅಥವಾ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆಸುವ ಯಾವುದೇ ದುರುದ್ದೇಶಪೂರಿತ ಅಥವಾ ಕಾನೂನುಬಾಹಿರ ಕೃತ್ಯಗಳನ್ನು ಸಹಿಸುವುದಿಲ್ಲ' ಎಂದು ಆ ಸಂಘಟನೆ ಹೇಳಿದೆ.

'ಸಾಂವಿಧಾನಿಕ ಹುದ್ದೆಗಳಿಗೆ ಮಸಿ ಬಳಿಯುವ, ಕಾಂಗ್ರೆಸ್ ನಾಯಕರ ಮಾನಹಾನಿ ಮಾಡುವ ಅಥವಾ ಸದ್ಯ ಪ್ರಕರಣದಲ್ಲಿ ಆರೋಪಿಸಲಾದಂತೆ ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯವನ್ನು ಭಯೋತ್ಪಾದನೆಗೆ ಸಮೀಕರಿಸುವ ಪ್ರತಿಯೊಂದು ಕಾನೂನುಬಾಹಿರ ಕೃತ್ಯವನ್ನೂ ಪ್ರಶ್ನಿಸಲು ನಾವು ಬದ್ಧರಾಗಿದ್ದೇವೆ' ಎಂದಿದೆ.

ಸಂವಿಧಾನದ 19ನೇ ವಿಧಿಯ ಅಡಿಯಲ್ಲಿನ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ರಕ್ಷಣೆಗಳನ್ನು ಉಲ್ಲೇಖಿಸಿದ ಆ ಸಂಸ್ಥೆಯು, ಇಂತಹ ಸ್ವಾತಂತ್ರ್ಯಗಳು ಕಾನೂನುಬದ್ಧ ನಿರ್ಬಂಧಗಳಿಗೆ ಒಳಪಟ್ಟಿರುತ್ತವೆ. ಸಂವಿಧಾನ, ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಅನ್ವಯವಾಗುವ ಸೈಬರ್ ಕಾನೂನುಗಳ ಅಡಿಯಲ್ಲಿ ಕಾನೂನು ಪರಿಹಾರಗಳನ್ನು ಪಡೆಯುವುದಾಗಿ ಅದು ಹೇಳಿದೆ.

'ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ಸೂಕ್ತ ಕಾನೂನು ಪ್ರಕ್ರಿಯೆಯ ಮೂಲಕ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು' ಎಂದಿದೆ.

ಈ ಪೋಸ್ಟ್‌ಗೆ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಸಾರ್ಜೆಂಟ್ ಕರ್ಮ್‌ವೀರ್ ಸಿಂಗ್ ಕೂಡ ಪ್ರತಿಕ್ರಿಯಿಸಿದ್ದಾರೆ. ವರ್ಮಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸಿಂಗ್, ಈ ಕುರಿತು ಸೈಬರ್ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದು, ಗಾಂಧಿ ಹಾಗೂ ಅಪರಾಧಿ ಎಂದು ಸಾಬೀತಾದ ಭಯೋತ್ಪಾದಕನ ನಡುವಿನ ಹೋಲಿಕೆಯನ್ನು ಟೀಕಿಸಿದ್ದಾರೆ.

'ನೀವು ವಿರೋಧ ಪಕ್ಷದ ನಾಯಕರನ್ನು ಅಪರಾಧಿ ಎಂದು ಸಾಬೀತಾದ ಭಯೋತ್ಪಾದಕನಿಗೆ ಹೋಲಿಸುತ್ತಿದ್ದೀರಿ. ರಾಜಕೀಯ ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಭಾಗವಾಗಿದ್ದರೂ, 'ಗೌರವ ಮತ್ತು ಸಭ್ಯತೆಯ ವಿಷಯದಲ್ಲಿ ಯಾವುದೇ ರಾಜಿ ಇರಬಾರದು' ಎಂದು ಸಿಂಗ್ 'ಎಕ್ಸ್'ನಲ್ಲಿ ಬರೆದಿದ್ದಾರೆ.

'ನೀವು ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದೀರಿ, ಕನಿಷ್ಠ ಸ್ವಲ್ಪ ಸಭ್ಯತೆ ಮತ್ತು ಘನತೆಯನ್ನು ಕಾಪಾಡಿಕೊಳ್ಳಿ... ಅಂತಹ ಹೋಲಿಕೆಗಳನ್ನು ಮಾಡದೆಯೇ ನೀವು LoP ಅನ್ನು ಟೀಕಿಸಬಹುದು. ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಅಂಗವಾಗಿದೆ. ಗೌರವ ಮತ್ತು ಸಭ್ಯತೆಯ ಎಲ್ಲೆ ಮೀರಬಾರದು' ಎಂದಿದ್ದಾರೆ.

'ಪ್ರಜಾಪ್ರಭುತ್ವವು ಆಳವಾದ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡುತ್ತದೆ, ಆದರೆ ಈ ಮಟ್ಟಕ್ಕೆ ಇಳಿಯುವುದು ಮೂಲಭೂತ ಮಾನವ ಸಭ್ಯತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ರಾಜಿ ಮಾಡುತ್ತದೆ. 24 ವರ್ಷಗಳ ಕಾಲ IAF ಗೆ ಹೆಮ್ಮೆಯಿಂದ ಸೇವೆ ಸಲ್ಲಿಸಿದ ಅನುಭವಿಯಾಗಿ, ನಿಮ್ಮ ಅಗ್ಗದ ವರ್ತನೆಗಳು ಸಂಪೂರ್ಣ ಮುಜುಗರವನ್ನುಂಟುಮಾಡುತ್ತವೆ. ನಿಮ್ಮ ನಡವಳಿಕೆಯು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ತೀವ್ರ ಅವಮಾನಕರ ವಿಷಯವಾಗಿದೆ. ಒಮ್ಮೆ ಸಮವಸ್ತ್ರ ಧರಿಸಿದ ಮಾತ್ರಕ್ಕೆ ರಾಜಕೀಯ ಟ್ರೋಲ್‌ನಂತೆ ವರ್ತಿಸುವ ಪರವಾನಗಿ ನಿಮಗೆ ಸಿಗುವುದಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಚೀನಾಗೆ ಶಾಕ್ ಕೊಟ್ಟು ಚಿನ್ನ ಗೆದ್ದ ಭಾರತ; ವಿಶ್ವ ದಾಖಲೆ ಬರೆದ ಮಹಿಳಾ ಆರ್ಚರಿ ಟೀಮ್..!

Budgam encounter: LET ಮೋಸ್ಟ್ ವಾಂಟೆಡ್ ಉಗ್ರ ಸುಲೈಮಾನ್ ಶಾ ಅಲಿಯಾಸ್ ಮೂಸಾ ಹತ, ಮುಂದುವರೆದ ಸೇನಾ ಕಾರ್ಯಾಚರಣೆ

ಮಳೆ, ಪ್ರವಾಹದಿಂದ 6 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿ: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಬರ ಘೋಷಣೆ. ಅಕ್ಟೋಬರ್ 3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ..!

ಬೆಂಗಳೂರು ವಿಸ್ತರಣೆಗೆ ಸರ್ಕಾರ ಹೊಸ ರೂಪುರೇಷೆ: ಭವಿಷ್ಯದ ಸಂಚಾರ ಸಮಸ್ಯೆ ತಡೆಯಲು ಮಾಸ್ಟರ್ ಪ್ಲ್ಯಾನ್..!

ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಮಹಾ ಬದಲಾವಣೆ: GBA ಮಾದರಿಯಲ್ಲಿ ಮರುಸಂಘಟನೆ, ಅಕ್ಟೋಬರ್‌ನಲ್ಲಿ ಅಧಿಸೂಚನೆ ಸಾಧ್ಯತೆ..!