ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾ ಕ್ಷೇತ್ರದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕದಲ್ಲಿ ಜನಿಸಿದ್ದ ರಜನಿಕಾಂತ್ ಅವರು ಸಿನಿಮಾಕ್ಕೆ ಬರುವ ಮೊದಲು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು.ಸಿಬಿಎಸ್‌ಇ ಶಾಲೆ ಪಠ್ಯದಲ್ಲಿ ಸೇರ್ಪಡೆಗೊಂಡಿರುವ ಭಾರತದ ಏಕೈಕ ನಟ ರಜನಿಕಾಂತ್. ಅವರ ಕುರಿತು ಪಠ್ಯ ಬಸ್ ಕಂಡಕ್ಟರ್ ಟು ಸೂಪರ್ ಸ್ಟಾರ್ ಎಂದೇ ಇದೆ.ರಜನಿಕಾಂತ್ ಮೂಲ ಹೆಸರು ಶಿವಾಜಿ ರಾವ್ ಗಾಯಕ್‌ವಾಡ್. ಛತ್ರಪತಿ ಶಿವಾಜಿ ಮಹಾರಾಜ್ ಹೆಸರನ್ನು ಇಡಲಾಗಿತ್ತು.ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಬಾಬಾರ ಅತಿ ದೊಡ್ಡ ಅನುಯಾಯಿ. ದೇವರು, ಧರ್ಮಗಳ ಬಗ್ಗೆ ಅಪಾರವಾದ ನಂಬಿಕೆ ಹೊಂದಿದ್ದಾರೆ.1975ರಲ್ಲಿ ಬಿಡುಗಡೆಯಾಗಿದ್ದ ಅಪೂರ್ವ ರಾಗಂಗಳ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ರಜನಿಕಾಂತ್ ಅವರು ನಂತರ ಕನ್ನಡದಲ್ಲಿ ಕಥಾ ಸಂಗಮ ಚಿತ್ರದಲ್ಲಿ ಅಭಿನಯಿಸಿದ್ದರು.ರಜನಿ ಅವರು ಬರೋಬ್ಬರಿ 181 ಚಿತ್ರಗಳಲ್ಲಿ ಅಭಿನಯಿಸಿದ್ದು ಅವರ 182ನೇ ಚಿತ್ರ ಅಣ್ಣಾತೆ ಚಿತ್ರೀಕರಣ ನಡೆಯುತ್ತಿದೆ.2000-2010ರ ತನಕ ರಜನಿಕಾಂತ್ 26 ಕೋಟಿ ಸಂಭಾವಣೆ ಪಡೆದಿದ್ದಾರೆ. ಜಾಕಿ ಚಾನ್ ನಂತರ ಏಷ್ಯಾದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ 2ನೇ ನಟ.ರಜನಿ ಅವರು ಕೇಂದ್ರ ಸರ್ಕಾರದ ಪದ್ಮಭೂಷಣ ಪದ್ಮವಿಭೂಷಣ ಇದೀಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಾರೆ.ರಜನಿಕಾಂತ್ಕಮಲ್ ಹಾಸನ್-ರಜನಿಕಾಂತ್ರಜನಿಕಾಂತ್Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos