ಬಹುಭಾಷಾ ನಟಿ ನಯನತಾರಾ ತಮ್ಮ ಬಹುದಿನಗಳ ಒಡನಾಡಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
ನಯನತಾರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉಂಗುರ ತೊಟ್ಟಿರುವ ಫೋಟೋ ಪ್ರಕಟಿಸಿದ್ದಾರೆ. ಹೀಗಾಗಿ ಅವರು ಎಂಗೇಜ್ ಆಗಿರುವುದು ಪಕ್ಕಾ ಎನ್ನಲಾಗುತ್ತಿದೆ.ತಮಿಳಿನ ಸ್ಟಾರ್ ವಿಜಯ್ ಟಿವಿಯ ಕಾರ್ಯಕ್ರಮವೊಂದಕ್ಕೆ ನಯನತಾರಾ ಅತಿಥಿಯಾಗಿ ಹೋಗಿದ್ದರು. ಆ ಕಾರ್ಯಕ್ರಮದ ನಡುವೆ ಅವರು ತಮ್ಮ ಎಂಗೇಜ್ಮೆಂಟ್ ರಿಂಗ್ ತೋರಿಸಿದ್ದಾರೆ.ವಿಘ್ನೇಶ್ ಶಿವನ್ ಕುರಿತಾಗಿಯೂ ನಿರೂಪಕಿ ಪ್ರಶ್ನೆ ಕೇಳಿದ್ದು, ಅದಕ್ಕೂ ಅವರು ಉತ್ತರಿಸಿದ್ದಾರೆ. ಸದ್ಯ ಈ ಪ್ರೋಮೋ ವೈರಲ್ ಆಗುತ್ತಿದೆ. ಇದೇ 15ರಂದು ಈ ಸಂಚಿಕೆ ಪ್ರಸಾರವಾಗಲಿದೆ. ನಯನತಾರಾ ಅವರ ಪೂರ್ತಿ ಮಾತುಗಳನ್ನು ಕೇಳಲು ಅಭಿಮಾನಿಗಳು ಕಾಯುತ್ತಿದ್ದಾರೆ.ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರಾಗಿರುವ ನಯನತಾರಾ ಮತ್ತು ವಿಘ್ನೇಶ್ ಕೆಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ.ಇದೀಗ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಜೋಡಿ, ಕೊರೋನಾ ಸಂಕಷ್ಟ ಕಳೆದ ಮೇಲೆ ವಿವಾಹವಾಗಬಹುದು ಎನ್ನಲಾಗುತ್ತಿದೆ.ನಯನತಾರಾನಯನತಾರಾನಯನತಾರಾ