ಶುಕ್ರವಾರ ತೀವ್ರ ಹೃದಯಾಘಾತದಿಂದ ಮೃತಪಟ್ಟ ಕನ್ನಡಿಗರ ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಭಾರತೀಯ ಚಿತ್ರರಂಗ ಹಾಗೂ ಕೇಂದ್ರ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಅವರಲ್ಲಿ ಕೆಲ ಪ್ರಮುಖರು ನಮ್ಮ ಪುನೀತ್ ಬಗ್ಗೆ ಹೇಳಿರುವ ಮಾತುಗಳು ಇಲ್ಲಿವೆ. 
ಸಿನಿಮಾ

ಧ್ರುವ ನಕ್ಷತ್ರ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ ಸೆಲಬ್ರಿಟಿಗಳು: ಅಪ್ಪು ಬಗ್ಗೆ ಅವರ ಒಪ್ಪತಕ್ಕ ಮಾತುಗಳು 

ಶುಕ್ರವಾರ ತೀವ್ರ ಹೃದಯಾಘಾತದಿಂದ ಮೃತಪಟ್ಟ ಕನ್ನಡಿಗರ ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ್ ನಿಧನಕ್ಕೆ ಭಾರತೀಯ ಚಿತ್ರರಂಗದ ಗಣ್ಯರು ಹಾಗೂ ಕೇಂದ್ರ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಅವರಲ್ಲಿ ಕೆಲ ಪ್ರಮುಖರು ನಮ್ಮ ಪುನೀತ್ ಬಗ್ಗೆ ಹೇಳಿರುವ ಮಾತುಗಳು ಇಲ್ಲಿವೆ.

ಕಾಲಿವುಡ್ ನಟ ಧನುಷ್: ಪುನೀತ್ ನನ್ನ ಸ್ನೇಹಿತ. ಅವರ ಅಗಲಿಕೆ ಆಘಾತ ತಂದಿದೆ.
ನಿರ್ದೇಶಕ ರಾಜಮೌಳಿ: ಪುನೀತ್ ರನ್ನು ಎರಡು ಬಾರಿ ಭೇಟಿಯಾಗಿದ್ದೇ. ಆಗ ಅವರು ತೋರಿದ ಆಥಿಥ್ಯವನ್ನು ಎಂದಿಗೂ ಮರೆಯುವುದಿಲ್ಲ.
ಕಾಲಿವುಡ್ ನಟ ಅಜಿತ್: ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ದುರದೃಷ್ಟಕರ. ಕುಟುಂಬವರ್ಗಕ್ಕೆ, ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ.
ಬಾಲಿವುಡ್ ನಟ ಅನಿಲ್ ಕಪೂರ್: ಆಘಾತ ಮತ್ತು ತುಂಬಾ ಬೇಸರದ ಸಂಗತಿ. ಅವರ ಕುಟುಂಬವರ್ಗಕ್ಕೆ ನನ್ನ ಸಂತಾಪಗಳು.
ಬಾಲಿವುಡ್ ನಟಿ ತಾಪ್ಸಿ ಪನ್ನು: ಅನಿಷ್ಚಿತತೆ ಜೀವನದ ಬಹು ದೊಡ್ಡ ಪಾಠ ಕಲಿಸುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಏನೂ ಅವಘಡ ಸಂಭವಿಸುವುದಿಲ್ಲ ಎನ್ನುವ ನಂಬಿಕೆಯನ್ನು ಬದುಕು ಹುಸಿಗೊಳಿಸುತ್ತಿದೆ.
ಬಾಲಿವುಡ್ ನಟಿ ಸ್ವರ ಭಾಸ್ಕರ್: ಪುನೀತ್ ರಾ ಕುಮಾರ್ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪ ಭರಿಸುವ ಶಕ್ತಿ ಕರುಣಿಸಲಿ.
ಗಾಯಕಿ ಶ್ರೇಯಾ ಘೋಷಾಲ್: ವಿಧಿ ತುಂಬಾ ಕ್ರೂರಿ. ಇಷ್ಟು ಚಿಕ್ಕ ವಯಸ್ಸಿಗೇ ಸೂಪರ್ ಸ್ಟಾರ್ ಆಗಿದ್ದ ಪುನೀತ್ ರನ್ನು ನಮ್ಮಿಂದ ಕಸಿದುಕೊಂಡಿದೆ.
ಬಾಲಿವುಡ್ ನಟ ಅನುಪಂ ಖೇರ್: ಪುನೀತ್ ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಅವರ ಗುಣಗಾನ ಮಾಡುತ್ತಿದ್ದಾರೆ. ಅವರ ನಿಧನ ಅಭಿಮಾನಿಗಳಿಗೆ ಹಾಗೂ ಕುಟುಂಬಕ್ಕೆ ನಷ್ಟವನ್ನುಂಟು ಮಾಡಿದೆ.
ಟಾಲಿವುಡ್ ನಟ ರಾಮ್ ಚರಣ್: ನನ್ನ ನೆಚ್ಚಿನ ಪುನೀತ್ ರಾಜ್ ಕುಮಾರ್ ನಿದ್ಘನರಾಗಿದ್ದಾರೆ ಎನ್ನುವುದನ್ನು ನನ್ನಿಂದ ಅರಗಿಸಿಕೊಳ್ಲಲು ಆಗುತ್ತಿಲ್ಲ. ಸೋದರ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.
ಕಾಲಿವುಡ್ ನಟ ಕಮಲ್ ಹಾಸನ್: ನಾವೆಲ್ಲರೂ ಒಂದೇ ಕುಟುಂಬದಂತೆ ಇದ್ದೆವು. ಕರ್ನಾತಕದ ಅವರ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬವರ್ಗಕ್ಕೆ ನನ್ನ ಸಂತಾಪಗಳು.
ಬಾಲಿವುಡ್ ನಟ ಸಂಜಯ್ ದತ್: ನಾನು ಭೇಟಿ ಮಾಡಿದ ಸಿಂಪಲ್ ಹಾಗೂ ಒಳ್ಳೆಯ ವ್ಯಕ್ತಿ ಪುನೀತ್.
ನಟಿ ಹನ್ಸಿಕಾ ಮೋಟ್ವಾನಿ: ಅವರಷ್ಟು ಪ್ಯಾಷನೇಟ್, ವಿನಮ್ರ ಹಾಗೂ ಹೃದ್ಯ ವ್ಯಕ್ತಿ ಇನ್ನಿಲ್ಲ ಎನ್ನುವುದನ್ನು ನಂಬಲು ನನ್ನಿಂದ ಆಗುತ್ತಿಲ್ಲ.
ಬಾಲಿವುಡ್ ನಟಿ ಯಾಮಿ ಗೌತಮ್: ಪುನೀತ್ ಅವರ ಕುಟುಂಬಕ್ಕೆ ಹಾಗೂ ಅವರ ಅಸಂಖ್ಯ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.
ಮಾಲಿವುಡ್ ನಟ ಮಮ್ಮೂಟಿ: ಪುನೀತ್ ನಮ್ಮನ್ನು ಅಗಲಿದ್ದಾರೆ ಎನ್ನುವ ಸಂಗತಿ ಅಘಾತ ತರುವಂಥದ್ದು. ಇಡೀ ಚಿತ್ರರಂಗಕ್ಕೇ ತುಂಬಲಾರದ ನಷ್ತ.
ಟಾಲಿವುಡ್ ನಟ ಮಹೇಶ್ ಬಾಬು: ನಾನು ಭೇಟಿ ಮಾಡಿದ ವಿನಮ್ರ ವ್ಯಕ್ತಿಗಳಲ್ಲಿ ಪುನೀತ್ ಅವರೂ ಒಬ್ಬರು. ಅವರ ಕುಟುಂಬಕ್ಕೆ ದೇವರು ಪುನೀತ್ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ.
ಟಾಲಿವುಡ್ ನಟ ಪವನ್ ಕಲ್ಯಾಣ್: ಪುನೀತ್ ಬಾಲ ನಟರಾಗಿ ಅಭಿನಯಿಸಿದ್ದ ಬೆಟ್ಟದ ಹೂ ಸಿನಿಮಾ ನೋಡಿದಾಗಿನಿಂದ ಅವರು ನನಗೆ ಪ್ರೀತಿ ಪಾತ್ರರು. ಇಷ್ಟು ಬೇಗನೆ ನಿಧನರಾಗಿರುವುದು ದುರಾದೃಷ್ಟ.
ರಶ್ಮಿಕಾ ಮಂದಣ್ಣ: ಪುನೀತ್ ಸರ್ ನೀವೆಲ್ಲೇ ಇರಿ, ಯಾವತ್ತಿನಂತೆ ನಗುತ್ತಾ ಇರುತ್ತೀರಿ ಎಂದು ನಂಬಿದ್ದೇನೆ.
ಕಾಲಿವುಡ್ ನಟಿ ಸಮಂತಾ: ಬಹಳ ಬೇಗನೆ ನಮ್ಮನ್ನು ಬಿಟ್ಟು ಅಗಲಿದ್ದಾರೆ.
ಬಾಲಿವುಡ್ ನಟ ಸೋನು ಸೂದ್: ಸಹೋದರ ನಿಮ್ಮನ್ನು ಯಾವತ್ತೂ ಮಿಸ್ ಮಾಡಿಕೊಳ್ಳುತ್ತೇನೆ
ಬಾಲಿವುಡ್ ನಟ ರಣ್ ವೀರ್ ಶೋರೆ: ತುಂಬಾ ಶಾಕಿಂಗ್. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ
ಕಾಲಿವುಡ್ ನಟ ಮಾಧವನ್: ನನಗೆ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ. ಇದು ನಿಜ ಎಂದು ನಂಬಲು ಸಾಧ್ಯವಾಗುತ್ತಿಲ್ಲ.
ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್: ಪುನೀತ್ ಅವರ ಹಠಾತ್ ಅಗಲಿಕೆ ಅಘಾತ ತಂದಿದೆ. ಲಕ್ಷಾಂತರ ಮಂದಿಯ ಹೃದಯ ಗೆದ್ದಿದ್ದ ಆತ ಒಬ್ಬ ಅತ್ಯುತ್ತಮ ನಟ.
ಕಾಲಿವುಡ್ ನಟ ಸಿದ್ಧಾರ್ಥ್: ಈ ಸುದ್ದಿಯನ್ನು ನಂಬಲು ನನ್ನಿಂದ ಆಗುತ್ತಿಲ್ಲ. ನಿರ್ಭೀತ ಸ್ವಭಾವದ, ಒಳ್ಲೆಯ ಹೃದಯವಂತ ವ್ಯಕ್ತಿತ್ವದ ಪುನೀತ್ ಇನ್ನಷ್ಟು ಸಾಧನೆ ಮಾಡುವವರಿದ್ದರು.
ಬಾಲಿವುಡ್ ನಟ ವಿವೇಕ್ ಒಬೆರಾಯ್: ಅಪ್ಪು ನಿಮ್ಮನ್ನು ನಾವೆಲ್ಲರೂ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನೀವು ನಮ್ಮ ಹೃದಯಗಳಲ್ಲಿ ಜೀವಂತವಾಗಿರುತ್ತೀರಿ.
ಟಾಲಿವುಡ್ ನಟ ವರುಣ್ ತೇಜ್: ಇದು ಶಾಕಿಂಗ್ ನ್ಯೂಸ್. ದುರಾದೃಷ್ಟಕರವಾದುದು. ಕುಟುಂಬ ಹಾಗೂ ಫ್ಯಾನ್ ಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.
ನಟಿ ಪೂಜಾ ಹೆಗ್ಡೆ: ನನ್ನ ಕಿವಿಗಳನ್ನೇ ನಂಬಲಾಗುತ್ತಿಲ್ಲ. ಭಾರತೀಯ ಸಿನಿಮಾರಂಗಕ್ಕೆ ತುಂಬಲಾರದ ನಷ್ಟ. ನನ್ನ ಮೊದಲ ಸಿನಿಮಾ ಶೋನಲ್ಲಿ ಅವರನ್ನು ಭೇಟಿ ಮಾಡಿದ್ದೆ. ತುಂಬಾ ಒಳ್ಳೆಯ ವ್ಯಕ್ತಿ ಅವರಾಗಿದ್ದರು.
ಮಲಯಾಳಂ ನಟ ದುಲ್ಖರ್ ಸಲ್ಮಾನ್: ಹೃದಯದಿಂದ ತುಂಬಾ ಒಳ್ಳೆಯ ವ್ಯಕ್ತಿ. ಆ ದೇವರು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ.
ನಟಿ ತಮನ್ನಾ ಭಾಟಿಯಾ: ಶಾಕ್ ಆಗಿದ್ದೇನೆ, ದುಃಖಿತಳಾಗಿದ್ದೇನೆ. ಅದನ್ನು ತೋರ್ಪಡಿಸಲು ಪದಗಳೇ ಸಿಗುತ್ತಿಲ್ಲ.
ಬಾಲಿವುಡ್ ನಟ ಅಭಿಷೇಕ್ ಬಚ್ಚನ್: ಚಿಕ್ಕ ವಯಸ್ಸಿಗೇ ಅಗಲಿದ್ದು ಶಾಕಿಂಗ್. ಪುನೀತ್ ಅಭಿಮಾನಿಗಳಿಗೆ, ಕುಟುಂಬವರ್ಗಕ್ಕೆ ನನ್ನ ಸಂತಾಪಗಳು.
ಟಾಲಿವುಡ್ ನಟ ಚಿರಂಜೀವಿ: ಕನ್ನಡ ಹಾಗೂ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಕುಟುಂಬವರ್ಗಕ್ಕೆ ನನ್ನ ಸಂತಾಪಗಳು.
ಮಲಯಾಳಂ ನಟ ಪೃಥ್ವಿರಾಜ್: ತುಂಬಾ ನೋವುಂಟುಮಾಡುವ ಸಂಗತಿ. ಅವರ ಲಕ್ಷಾಂತರ ಅಭಿಮಾನಿಗಳು ಮತ್ತು ಕುಟುಂಬವರ್ಗಕ್ಕೆ ನೋವನ್ನು ಸಹಿಸುವ ಶಕ್ತಿ ಕರುಣಿಸಲಿ.
ಟಾಲಿವುಡ್ ನಟ ಜೂನಿಯರ್ ಎನ್ ಟಿ ಆರ್: ಹೃದಯ ಒಡೆದಿದೆ. ಪುನೀತ್ ನಮ್ಮನ್ನೆಲ್ಲ ಬಿಟ್ಟು ಬೇಗನೆ ಹೋಗಿಬಿಟ್ಟಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್: ಪುನೀತ್ ಅವರ ಸಾಧನೆ, ದಂತಕಥೆಯಾಗಿ ಉಳಿಯಲಿದೆ.
ನರೇಂದ್ರ ಮೋದಿ: ಒಬ್ಬ ಪ್ರತಿಭಾನ್ವಿತ ಕಲಾವಿದನನ್ನು ವಿಧಿ ನಮ್ಮಿಂದ ಕಿತ್ತುಕೊಂಡಿದೆ. ಇದು ಅವರು ಸಾಯುವ ವಯಸ್ಸಲ್ಲ.
ರಾಹುಲ್ ಗಾಂಧಿ: ಕನ್ನಡ ನಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು: ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುನೀತ್ ಕಲಾವಿದನಾಗಿ, ಗಾಯಕನಾಗಿ ಅಪ್ರತಿಮ ಸಾಧನೆ ತೋರಿದವರು. ಅವರು ಬಹುಮುಖ ಪ್ರತಿಭೆ.
ಸಿಎಂ ಬಸವರಾಜ ಬೊಮ್ಮಾಯಿ: ಕರ್ನಾತಕದ ಅತ್ಯಂತ ಪ್ರೀತಿಪಾತ್ರ ಸೂಪರ್ ಸ್ಟಾರ್ ಆದ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿರುವುದು ತುಂಬಾ ಬೇಸರ ತಂದಿದೆ. ಭಗವಂತ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ.
ತಮಿಳುನಾಡು ಸಿಎಂ ಸ್ಟಾಲಿನ್: ಚಿತ್ರರಂಗದ ದಂತಕಥೆ ರಾಜ್ ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ತೀವ್ರ ಆಘಾತ ತಂದಿದೆ.
ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್: ಪುನೀತ್ ರಾಜ್ ಕುಮಾರ್ ಅವರು ಉಜ್ವಲ ನಕ್ಷತ್ರದಂತಿದ್ದರು. ಇನ್ನಷ್ಟು ಎತ್ತರಕ್ಕೆ ಅವರು ಏರುತ್ತಿದ್ದರು. ಅವರ ಅಗಲಿಕೆಯ ನಷ್ಟವನ್ನು ಭರಿಸುವ ಶಕ್ತಿ ಅಭಿಮಾನಿಗಳಿಗೆ, ಕುಟುಂಬದವರಿಗೆ ಸಿಗಲಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT