ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ನಟಿ ಜಯಲಲಿತಾ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರ ‘ತಲೈವಿ’ ಸೆಪ್ಟೆಂಬರ್ 10ರಂದು ತೆರೆಗೆ ಬರಲಿದೆ. ಈ ಸಂದರ್ಭದಲ್ಲಿ ಜಯಲಲಿತಾ ಪಾತ್ರ ನಿರ್ವಹಿಸಿರುವ ಕಂಗನಾ ರಣಾವತ್ ಪ್ರಚಾರದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ ಚೆನ್ನೈಯಲ್ಲಿರುವ ಜಯಲಿಲಿತಾ ಸ್ಮಾರಕಕ್ಕೆ ಚಿತ್ರತಂಡದೊಂದಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗುತ್ತಿರುವ ‘ತಲೈವಿ’ ಚಿತ್ರದ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.ದಕ್ಷಿಣ ಭಾರತೀಯ ಶೈಲಿಯಲ್ಲಿ ಜಯಲಲಿತಾ ಅವರಂತೆ ಉಡುಗೆ-ತೊಡುಗೆ ತೊಟ್ಟು ಸ್ಮಾರಕಕ್ಕೆ ಬಂದು ಪುಷ್ಪ ನಮನ ಸಲ್ಲಿಸಿ ನಂತರ ತಮ್ಮ ಪ್ರಚಾರ ಕಾರ್ಯ ಆರಂಭಿಸಿದರು.ಚೆನ್ನೈಯ ಮರೀನಾ ಬೀಚ್ ಬಳಿಯಿರುವ ದಿ. ಜಯಲಲಿತಾ ಸ್ಮಾರಕ ಬಳಿ ನಟಿ ಕಂಗನಾ ರಾನಾವತ್ಅಭಿಮಾನಿಗಳತ್ತ ಕೈ ಬೀಸುತ್ತಿರುವ ನಟಿ ಕಂಗನಾ ರಾನಾವತ್ರೇಷ್ಮೆ ಸೀರೆಯಲ್ಲಿ ಮಿಂಚುತ್ತಿರುವ ಕಂಗನಾಕಂಗನಾ ರಾನಾವತ್ಕಂಗನಾ ರಾನಾವತ್ತಲೈವಿ ಚಿತ್ರದಲ್ಲಿ ಕಂಗನಾ ರಾನಾವತ್ತಲೈವಿ ಚಿತ್ರದ ದೃಶ್ಯನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆದಿರುವ ಈ ಚಿತ್ರ ಸೆಪ್ಟೆಂಬರ್ 10ಕ್ಕೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆ ಆಗಲಿದೆ.ಎಂ.ಜಿ. ರಾಮಚಂದ್ರನ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ನಟಿಸಿದ್ದಾರೆ. ಎಂ. ಕರುಣಾನಿಧಿಯಾಗಿ ನಾಸಿರ್ ಬಣ್ಣ ಹಚ್ಚಿದ್ದಾರೆ. ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಖ್ಯಾತ ನಿರ್ದೇಶಕ ಎ.ಎಲ್. ವಿಜಯ್ ಅವರು ‘ತಲೈವಿ’ಗೆ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.