ಪ್ಯಾನ್ ಇಂಡಿಯಾ ಸಿನಿಮಾ- ತೆಲುಗು, ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಪುಷ್ಪಾ ಬಿಡುಗಡೆಯಾಗುತ್ತಿದೆ. 
ಸಿನಿಮಾ

ಅಲ್ಲು ಅರ್ಜುನ್ ಸಿನಿಮಾ 'ಪುಷ್ಪಾ' ಬಗ್ಗೆ ನಿಮಗೆ ಗೊತ್ತಿಲ್ಲದ 12 ಇಂಟರೆಸ್ಟಿಂಗ್ ಸಂಗತಿಗಳು

ನಾನಾ ಕಾರಣಗಳಿಗೆ ಸುದ್ದಿಯಾಗುತ್ತಿರುವ ಪುಷ್ಪಾ ಸಿನಿಮಾ ನೋಡಲು 12 ಒಳ್ಳೆಯ ಕಾರಣಗಳು ಇಲ್ಲಿವೆ.

ಒಂದು ಸಿನಿಮಾ ಎರಡು ಭಾಗ- ಈ ಹಿಂದೆ ಒಂದೇ ಸಿನಿಮಾ ಎಂದು ಹೇಳಲಾಗಿತ್ತಾದರೂ ಈಗ ಪುಷ್ಪಾ ಸಿನಿಮಾವನ್ನು ಎರಡು ಭಾಗಗಳಾಗಿ ಬಿಡುಗಡೆ ಮಾಡುವುದಾಗಿ ಸುದ್ದಿ ಹೊರ ಬಿದ್ದಿದೆ. ಕೊರೊನಾ ಕಾರಣದಿಂದ ನಷ್ಟದಿಂದ ತಪ್ಪಿಸಿಕೊಳ್ಳುವ ಮಾರ್ಗ ಇದೆಂದು ಹೇಳಲಾಗುತ್ತಿದೆ.
ಲಾರಿ ಡ್ರೈವರ್ ಪಾತ್ರ- ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇದೇ ಮೊದಲ ಬಾರಿಗೆ ಲಾರಿ ಡ್ರೈವರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸೆನ್ಸೇಷನ್ ಸೃಷ್ಟಿಸಿರುವ ರಶ್ಮಿಕಾ ಮಂದಣ್ಣ ಲುಕ್
ಪೊಲೀಸ್ ಪಾತ್ರದಲ್ಲಿ- ನಿರ್ದೇಶಕ/ ನಟ ಸಮುತಿರಖನಿ ಈ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ರ ಅಲಾ ವೈಕುಂಠಪುರಂಲೊ ಸಿನಿಮಾದಲ್ಲಿ ಅವರು ಖಳನಾಯಕನಾಗಿ ಮಿಂಚಿದ್ದರು.
ಆರ್ಯ ಮ್ಯಾಜಿಕ್- ಅಲ್ಲು ಅರ್ಜುನ್ ಅವರಿಗೆ ತೆಲುಗು ಚಿತ್ರರಂಗದಲ್ಲಿ ಮೊದಲು ಬ್ರೇಕ್ ನೀಡಿದ್ದ ಆರ್ಯ ಚಿತ್ರವನ್ನು ನಿರ್ದೇಶಿಸಿದ್ದು ಪುಷ್ಪಾ ನಿರ್ದೇಶಕ ಸುಕುಮಾರ್
ನಾಯಕ ಪಾತ್ರಕ್ಕೆ ಮೊದಲ ಆಯ್ಕೆ- ನಿರ್ದೇಶಕ ಸುಕುಮಾರ್ ಮೊದಲು ಪುಷ್ಪಾ ನಾಯಕ ಪಾತ್ರಕ್ಕೆ ಮಹೇಶ್ ಬಾಬು ಅವರನ್ನು ಸಂಪರ್ಕಿಸಿದ್ದರು. ಕೆಲ ಕ್ರಿಯೇಟಿವ್ ಭಿನ್ನಾಭಿಪ್ರಾಯಗಳಿಂದ ಮಹೇಶ್ ಬಾಬು ಈ ಸಿನಿಮಾ ದಿಂದ ಹಿಂದಕ್ಕೆ ಸರಿದಿದ್ದರು.
ಖಳ ನಟನಾಗಿ ಮಾಲಿವುಡ್ ನಾಯಕ- ಮಲಯಾಳಂ ಹೊಸ ಅಲೆ ಸಿನಿಮಾಗಳಿಂದ ದೇಶಾದ್ಯಂತ ಗಮನ ಸೆಳೆದಿರುವ ನಟ ಫಾದ್ ಫಾಜಿಲ್ ಪುಷ್ಪಾ ಖಳ ನಾಯಕರಾಗಿ ನಟಿಸಿದ್ದಾರೆ.
ಸ್ಟಾರ್ ಗಳ ಸಮ್ಮಿಲನ- ಪುಷ್ಪಾದಲ್ಲಿ ಅಲ್ಲು ಅರ್ಜುನ್- ರಶ್ಮಿಕಾ ಹೊರತು ಪಡಿಸಿ ಪ್ರಕಾಶ್ ರಾಜ್, ಫಹಾದ್ ಫಾಜಿಲ್, ವಿಜಯ್ ಸೇತುಪತಿ, ಜಗಪತಿ ಬಾಬು, ಡಾಲಿ ಧನಂಜಯ್ ಮತ್ತಿತರರು ನಟಿಸಿದ್ದಾರೆ.
ಐಟಂ ಡ್ಯಾನ್ಸ್ ನಂಬರ್- ಬಾಲಿವುಡ್ ಬೆಡಗಿ ಊರ್ವಶಿ ರೌಟೆಲಾರನ್ನು ಐಟಮ್ ಡ್ಯಾನ್ಸ್ ಗಾಗಿ ಪುಷ್ಪಾ ಸಿನಿಮಾಗೆ ಬರಮಾಡಿಕೊಳ್ಳಲಾಗಿದೆ. ಮೊದಲು ಶ್ರದ್ಧಾ ಕಪೂರ್ ಅವರನ್ನು ಸಿನಿಮಾ ತಂಡ ಸಂಪರ್ಕಿಸಿತ್ತು.
ಚಿತ್ರದ ಕಥೆ- ಚಿತ್ತೂರು ಜಿಲ್ಲೆಯ ಶೇಷಾಚಲಂ ಅರಣ್ಯಪ್ರದೇಶದಲ್ಲಿ ನಡೆಯುವ ರಕ್ತಚಂದನ ಕಳ್ಳಸಾಗಣೆ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ.
ಬಜೆಟ್ ಎಷ್ಟಪ್ಪಾ?- ಈ ಹಿಂದಿನ ಅಲ್ಲು ಅರ್ಜುನ್ ಹಿಟ್ ಚಿತ್ರ ಅಲಾ ವೈಕುಂಠಪುರಂಲೊ ಸಿನಿಮಾದ ಬಜೆಟ್ 75 ಕೋಟಿ ರೂ. ಪುಷ್ಪಾ ಬಜೆಟ್ ವಿಷಯದಲ್ಲಿ 10 ಕೋಟಿ ರೂ. ಮೀರಿಸಿದೆ. ಪುಷ್ಪಾ ಚಿತ್ರದ ಬಜೆಟ್ 85 ಕೋಟಿ ರೂ. ಮೀರಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT