ಗ್ಲಾಮರ್ ಜಗತ್ತಿನಲ್ಲಿದ್ದುಕೊಂಡು ವಿಚ್ಛೇದನ ಬಳಿಕ ವೈಯಕ್ತಿಕ ಜೀವನ ಕುರಿತ ಸುದ್ದಿಗೆ ಹೆಚ್ಚು ಗ್ರಾಸವಾಗುತ್ತಿರುವ ನಟಿ ಸಮಂತಾ ಅದನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 
ಸಿನಿಮಾ

ಗ್ಲಾಮರ್ ಜಗತ್ತಿನ ಮಧ್ಯೆ ವೈಯಕ್ತಿಕ ಬದುಕಿನ ನೋವು, ವೇದನೆಯಿಂದ ಹೊರಬಂದಿದ್ದು ಹೇಗೆ?, ಸಮಂತಾ 'ಹೃದಯದ' ಮಾತು

ನಟ ನಾಗಚೈತನ್ಯ ಜೊತೆಗೆ ವಿಚ್ಛೇದನ ಪಡೆದ ನಂತರ ಸಮಂತಾ ರುತ್ ಪ್ರಭು ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ.  

ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳಿರುತ್ತವೆ. ಹಲವರು ಎದುರಿಸುವ ಮಾನಸಿಕ ಅನಾರೋಗ್ಯವನ್ನು ಯಾರಲ್ಲೂ ಹೇಳಿಕೊಳ್ಳಲಾಗುವುದಿಲ್ಲ. ಬೇರೆಯವರು ಸಹಾಯ ಮಾಡುತ್ತಾರೆ ಎಂದು ಭಾವಿಸಲು ಸಾಧ್ಯವಿಲ್ಲ. ನಾನೂ ಮಾನಸಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ. ಆದರೆ ನನಗೆ ಸ್ನೇಹಿತರು, ಮಾನಸಿಕ ಸಲಹೆಗಾರರು, ಹಿತೈಷಿಗಳ ಸಲಹೆಗ
ಕಳೆದ ವರ್ಷವಷ್ಟೇ ತೆಲುಗು ನಟ ನಾಗಚೈತನ್ಯ ಜೊತೆಗೆ ವಿಚ್ಛೇದನ ಪಡೆದ ನಂತರ ನಟಿ ಸಮಂತಾ ರುತ್ ಪ್ರಭು ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ.
ಅಲ್ಲದೆ, ಮುಂದೆ ನನ್ನ ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆ ಎದುರಿಸುವಷ್ಟು ಶಕ್ತಿಶಾಲಿಯಾಗಿದ್ದೇನೆ. ಏಕೆಂದರೆ ನನ್ನ ಸ್ನೇಹಿತರು ಹಿತೈಷಿಗಳು ನನಗೆ ಸಹಾಯ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ನಾಚಿಕೆಪಡುವುದರ ಬದಲು ನಮ್ಮ ಮಾನಸಿಕ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಾದ ಕಷ್ಟದ ಸನ್ನಿವೇಶಗಳು, ಮಾನಸಿಕವಾಗಿ ಎದುರಿಸಿದ ಹಲವು ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ವೇದಿಕೆಯಾಗಿದ್ದು ರೋಶಿನಿ ಟ್ರಸ್ಟ್ ಮತ್ತು ಡಲ್ಟಾ ಫೌಂಡೇಶನ್ ನ ಮನೆಬಾಗಿಲಿಗೆ ಮಾನಸಿಕ ಚಿಕಿತ್ಸೆ ಅಭಿಯಾನದ ಉದ್ಘಾಟನೆ ಕಾರ್ಯಕ್ರಮ.
ನಾನು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೆ.. ಆದರೆ, ಈಗ ಅವುಗಳಿಂದ ಹೊರಬರಲು ಹಲವರು ನನಗೆ ಸಹಾಯ ಮಾಡಿದ್ದಾರೆ ಎಂದು ನಟಿ ಸಮಂತಾ ಹೇಳಿದ್ದಾರೆ.
“ನಾವು ಒತ್ತಡದ ಜಗತ್ತಿನಲ್ಲಿ ಜೀವಿಸಿದ್ದೇವೆ. ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಹೆಚ್ಚಿನ ಮಂದಿಯ ಗಮನ ನಮ್ಮತ್ತ ಕೇಂದ್ರೀಕರಿಸಿದೆ. ನಮ್ಮ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿರುವುದರಿಂದ ನಮ್ಮ ಆತಂಕ, ದೌರ್ಬಲ್ಯ, ಸಂಕಟಗಳ ಬಗ್ಗೆ ಮಾತನಾಡಲು ಮುಜುಗರವಾಗುತ್ತದೆ. ಈ ದಿನಗಳಲ್ಲಿ ಪರಿಪೂರ್ಣವಾಗಿ ಬದುಕುವುದು ತುಂಬಾ ಕಷ್
ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳಿರುತ್ತವೆ. ಹಲವರು ಎದುರಿಸುವ ಮಾನಸಿಕ ಅನಾರೋಗ್ಯವನ್ನು ಯಾರಲ್ಲೂ ಹೇಳಿಕೊಳ್ಳಲಾಗುವುದಿಲ್ಲ. ಬೇರೆಯವರು ಸಹಾಯ ಮಾಡುತ್ತಾರೆ ಎಂದು ಭಾವಿಸಲು ಸಾಧ್ಯವಿಲ್ಲ. ನಾನೂ ಮಾನಸಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ. ಆದರೆ ನನಗೆ ಸ್ನೇಹಿತರು, ಮಾನಸಿಕ ಸಲಹೆಗಾರರು, ಹಿತೈಷಿಗಳ ಸಲಹೆಗ
ನಮ್ಮ ಶಾರೀರಿಕ ಅನಾರೋಗ್ಯಕ್ಕೆ ಹೇಗೆ ವೈದ್ಯರ ಬಳಿಗೆ ಮುಕ್ತವಾಗಿ ಹೋಗಿ ಸಮಸ್ಯೆ ಹೇಳಿಕೊಂಡು ಚಿಕಿತ್ಸೆ ಪಡೆಯುತ್ತೇವೆಯೋ ಅದೇ ರೀತಿ ಮಾನಸಿಕ ರೋಗಕ್ಕೂ ಚಿಕಿತ್ಸೆ ಪಡೆಯುವಂತಾಗಬೇಕು. ನಮ್ಮ ಹೃದಯಕ್ಕೆ ಬೇನೆಯಾದಾಗ ವೈದ್ಯರನ್ನು ತಪ್ಪದೆ ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು ಎಂದು ಅವರು ಹೇಳುತ್ತಾರೆ.
ನನ್ನ ಮುಂದಿನ ಜೀವನದಲ್ಲಿ ನಾನು ಯಶಸ್ವಿಯಾದರೆ ಅದಕ್ಕೆ ನಾನು ಮಾನಸಿಕವಾಗಿ ಗಟ್ಟಿಯಾಗಿದ್ದೆ ಎಂದರ್ಥವಲ್ಲ, ನನ್ನ ಸುತ್ತಮುತ್ತಲಿದ್ದವರು ನನಗೆ ಗಟ್ಟಿಯಾಗುವಂತೆ ಸಹಾಯ ಮಾಡಿದ್ದಾರೆ ಎಂದು ಅಂದುಕೊಳ್ಳುತ್ತೇನೆ. ಸಾಕಷ್ಟು ಜನರು ಬೇರೆಯವರಿಗೆ ಸಹಾಯ ಮಾಡಲು ಸಮಯ ಕಳೆಯುತ್ತಾರೆ. ನಮ್ಮ ಕೈಲಾದ ಸಹಾಯವನ್ನು ಬೇರೆಯವರ ಕಷ್ಟ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT