ಮಾರ್ಚ್ 23ರ ಬುಧವಾರದಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಭಾನುವಾರ (ಮಾ.27) ಇನ್‌ಸ್ಟಾಗ್ರಾಂನಲ್ಲಿ ಆದಿ ಎಂಗೇಜ್‌ಮೆಂಟ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
‘ನಾವು ಪರಸ್ಪರ ಇಷ್ಟಪಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ಮಾರ್ಚ್ 23 ನಮ್ಮಿಬ್ಬರ ಪಾಲಿಗೂ ಮರೆಯಲಾಗದ ದಿನ. ಅಂದು ಕುಟುಂಬದವರು, ಹಿರಿಯರು, ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ‘ ಎಂದು ಆದಿ ಪೋಸ್ಟ್ ಹಾಕಿದ್ದಾರೆ.ನಿಕ್ಕಿ ಸಹ ಇದೇ ಚಿತ್ರವನ್ನು ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇನ್ನು ಕನ್ನಡದ ಅಜಿತ್, ಓ ಪ್ರೇಮವೇ, ಜಂಬೂ ಸವಾರಿ, ಸಿದ್ಧಾರ್ಥ ಸಿನಿಮಾಗಳಲ್ಲಿ ನಿಕ್ಕಿ ನಟಿಸಿದ್ದು, ಸದ್ಯ ಅವರು ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅವರು ಹೆಚ್ಚು ನಟಿಸುತ್ತಿದ್ದಾರೆ.ಆದಿ ಕೂಡ ತೆಲುಗು, ತಮಿಳಿನ ಮುಖ್ಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಕೊಚಾಡಿಯನ್, ತೆಲುಗಿನ ರಂಗಸ್ಥಳಂ, ಗುಡ್ ಲಕ್ ಸಖಿ, ಸರೈನೋಡು ಸಿನಿಮಾಗಳಲ್ಲಿ ನಟಿಸಿದ್ದಾರೆ.ನಿಕ್ಕಿ ಗಲ್ರಾನಿ ಅವರು ಕನ್ನಡದ ನಟಿ ಸಂಜನಾ ಗಲ್ರಾನಿ ಅವರ ಸಹೋದರಿಯಾಗಿದ್ದಾರೆ.