ಕನ್ನಡ ಚಲನಚಿತ್ರೋದ್ಯಮಕ್ಕೆ ವರ್ಷದ ಆರಂಭ ನೀರಸವಾಗಿತ್ತು. ಜನವರಿಯಲ್ಲಿ ಬಿಡುಗಡೆಯಾದ ಯಾವ ಸಿನೆಮಾಗಳು ಆ ಪರಿಯ ಯಶಸ್ಸು ಪಡೆಯಲಿಲ್ಲ. ಪುನೀತ್ ರಾಜಕುಮಾರ್ ಮತ್ತು ಎರಿಕಾ ಫರ್ನಾಂಡಿಸ್ ಅಭಿನಯದ ಬಹು ನಿರೀಕ್ಷಿತ 'ನಿನ್ನಿಂದಲೆ' ಸಿನೆಮಾ ನೆಲ ಕಚ್ಚಿದ್ದು, ಪುನೀತ್ ರಾಜ್ ಕುಮಾರ್ ಅವರಿಗೆ ಹೊಸ ವರ್ಷದ ಆಘಾತ ಹಾಗೂ ಪುನ 
ಹಿನ್ನೋಟ 2014

ಕನ್ನಡ ಸಿನಿಮಾ 2014 - ಹಿಟ್ ಅಂಡ್ ಮಿಸ್

ಭರವಸೆಯ ನಟ ಎಂದೆ ತಿಳಿಯಲಾಗಿದ್ದ ಶ್ರೀನಗರ ಕಿಟ್ಟಿ ಅಭಿನಯದ
ಲೋಕಸಭಾ ಚುನಾವಣೆಯಲ್ಲಿ ಸೋತ ನಟಿ ರಮ್ಯ ಅವರ ಕೊನೆಯ ಚಲನಚಿತ್ರ, ಶಿವರಾಜ್ ಕುಮಾರ್ ಅಭಿನಯದ 'ಆರ್ಯನ್' ದಿವಂಗತ ಡಿ ರಾಜೇಂದ್ರ ಬಾಬು ಅವರು ಅರ್ಧ ನಿರ್ದೇಶಿಸಿ ಬಿಟ್ಟಿದ್ದನ್ನು ಮುದುವರೆಸಿದವರು ಗುರುದತ್ತ್. ಜೆಸ್ಸಿ ಗಿಫ್ಟ್ ಅವರ ಸಂಗೀತ ಕೂಡ ಇತ್ತು. ಇಷ್ಟೆಲ್ಲಾ ಇದ್ದರೂ ಪ್ರೇಕ್ಷಕರು ಈ ಸಿನೆಮಾವನ್ನು ಕೈಹಿಡಿಯಲು
'ಅಧ್ಯಕ್ಷ' ಬಹುಷಃ ೨೦೧೪ ರ ಉತ್ತಮ ಹಾಸ್ಯ ಸಿನೆಮಾಗಳ ಸಾಲಿಗೆ ಸೇರಿ ಹೋಗಿದೆ. ನಂದ ಕಿಶೋರ್ ನಿರ್ದೇಶನದ ಶರಣ್ ಅಭಿನಯದ ಈ ಚಿತ್ರ ಗಳಿಕೆಯಲ್ಲೂ ಒಳ್ಳೆಯ ಸಾಧನೆ ಮಾಡಿದ್ದು ವಿಶೇಷ. ಶರಣ್ ಅವರನ್ನು ಮುಂಚೂಣಿ ಹಾಸ್ಯ ನಟನಾಗಿ ಹಾಗೂ ನಾಯಕನಟನಾಗಿ ಸ್ಥಾಪಿಸಿದ ಚಲನಚಿತ್ರ ಇದು ಎನ್ನಬಹುದು.
'ನಿನ್ನಿಂದಲೆ' ಚಲನಚಿತ್ರದಿಂದ ತನ್ನ ಅಭಿಮಾನಿಗಳಿಗೆ ನಿರಾಸೆ ಉಂಟು ಪುನೀತ್ ರಾಜ್ ಕುಮಾರ್ ಅವರ ಅಭಿನಯದ 'ಪವರ್ ***' ಬಹಳ ನಿರೀಕ್ಷೆ ಹುಟ್ಟಿಸಿತ್ತು. ತೆಲುಗಿನ 'ದೂಕುಡು' ಸಿನೆಮಾದ ರಿಮೇಕ್ ಆಗಿದ್ದರೂ, ದಕ್ಷಿಣ ಭಾರತದ ಚೆಲುವೆ ತ್ರಿಶಾ, ಪುನೀತ್ ಎದುರು ನಟಿಸಿದ್ದು ವಿಶೇಷವಾಗಿತ್ತು. ಸಿನೆಮಾಗೆ ಪ್ರೇಕ್ಷಕರು ಮಿಶ
ನಾಲ್ಕು ವರ್ಷದ ನಂತರ ಹಿಂದಿರುಗಿ ದುನಿಯಾ ವಿಜಯ್ ಅವರ ನಟನೆಯೊಂದಿಗೆ 'ಸಿಂಹಾದ್ರಿ' ನಿರ್ದೇಶಿಸಿದ ಶಿವಮಣಿ ಅವರ ಈ ಸಿನೆಮಾವನ್ನು ಜನ ಒಪ್ಪಲೇ ಇಲ್ಲ.
ಅರ್ಜುನ್ ಸರ್ಜಾ ಸಂಬಂಧಿ ಧ್ರುವ ಸರ್ಜಾ ಮತ್ತು ರಾಧಿಕಾ ಪಂಡಿತ್ ಅಭಿನಯದ 'ಬಹದ್ದೂರ್' ಧ್ರುವ್ ಸರ್ಜಾನಿಗೆ ಎರಡನೆ ಮತ್ತು ಲಕ್ಕಿ ಚಿತ್ರ. ಉತ್ತಮವಾಗಿ ದುಡ್ಡು ಮಾಡಿದ ಸಿನೆಮಾ, ರಾಧಿಕ ಪಂಡಿತ್ ಗೆ ಕೂಡ, ಕನ್ನಡ ಚಿತ್ರೋದ್ಯಮದಲ್ಲಿ ಸ್ಥಾನವನ್ನು ಭದ್ರಪಡಿಸಿದ ಚಿತ್ರ ಇದು.
೨೦೧೪ ಶಿವಣ್ಣನವರಿಗೆ ಅಷ್ಟೇನೂ ಫಲಪ್ರದವಾಗಿಲ್ಲ. ಬಿಡುಗಡೆಗೆ ಮುಂಚೆ ಕುತೂಹಲ ಕೆರಳಿಸಿದ್ದ 'ಬೆಳ್ಳಿ' ಸಿನೆಮಾ, ಬಿಡುಗಡೆಯ ನಂತರ ಅದೇ ಮಚ್ಚು ಲಾಂಗ್ ಸಿನೆಮಾ ಎಂದು ಜನರಲ್ಲಿ ಬೇಸರ ಮೂಡಿಸಿತು. ಭರವಸೆಯ ನಟಿ ಕೃತಿ ಕರಬಂಧ ಅವರು ಈ ಸಿನೆಮಾದಲ್ಲಿ ನಟಿಸಿದ್ದರೂ ಕೂಡ ಜನರ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಸೋತಿತು.
೨೦೧೪ ರ ಈ ಪ್ರಯತ್ನ ಇಷ್ಟು ಯಶಸ್ಸು ತಂದುಕೊಡುತ್ತದೆ ಎಂದು ಯಾರೂ ಊಹಿಸಿರಲಿಲ್ಲವೇನೋ! ಡಾ. ರಾಜ್ ಕುಮಾರ್ ಅಭಿನಯದ ೧೯೭೧ ರ ಕಸ್ತೂರಿ ನಿವಾಸ ಕಲರ್ ಅವತಾರದಲ್ಲಿ ಬಿಡುಗಡೆಯಾಗಿ, ಜನಮನ ಸೂರೆಗೊಂಡದ್ದು ೨೦೧೪ ರ ವಿಶೇಷಗಳಲ್ಲೊಂದು. ಗಾಂಧಿನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಇದು ಮುಂಚೂಣಿಯಲ್ಲಿ ಹಣ ಗಳಿಸಿದ್ದು, ಇನ್ನೂ
ದರ್ಶನ್ ಅಭಿನಯದ 'ಅಂಬರೀಶ' ಬಿಡುಗಡೆಗೆ ಗಾಂಧಿನಗರದಲ್ಲಿ ಚಿತ್ರಮಂದಿರ ಇಲ್ಲ ಎಂಬ ವಿವಾದ ಸೃಷ್ಟಿಸಿ ಬಿಡುಗಡೆಯಾದರೂ, ತಮ್ಮ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದ್ದನ್ನು ಹೊರತುಪಡಿಸಿದರೆ, ದೊಡ್ದ ಸಕ್ಸಸ್ ಎಂದು ಕರೆಯಲಾಗದ ಸಿನೆಮಾ. ಕನ್ನಡ ಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆ, ಈ ಸ
ಗೀತ ರಚನಕಾರ 'ಅರಸು ಅಂತಾರೆ' ಸಿನೆಮಾ ನಿರ್ದೇಶಿಸಿದರೆ, ಅದು ಕೂಡ ಹಿಟ್ ಆಗಬಹುದು ಎಂದು ಯಾರೂ ಊಹಿಸಿರಲಿಲ್ಲವೇನೋ! ಮಂಡ್ಯ ಜಿಲ್ಲೆಯ ಒಂದು ಹಳ್ಳಿಯ ಹಿನ್ನಲೆಯಲ್ಲಿ ಒಂದು ಕಥೆ ಹೆಣೆದು ಅತ್ಯುತ್ತಮ ಸಿನೆಮಾ 'ಲವ್ ಇನ್ ಮಂಡ್ಯ' ಕೊಟ್ಟವರು ಅರಸು ಅಂತಾರೆ! ಒಪ್ಕಂಬುಟ್ರು ಕಣ್ಲಾ ಎಂತಲೇ ಪ್ರಚಾರ ಮಾಡುತ್ತಿರುವ ಈ ಸಿನೆಮ
ಕ್ರಿಕೆಟ್ ಆಟಗಾರರಾದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಅವರು ಅಭಿನಯಿಸಿದ ಹಾಗೆಯೇ ಖ್ಯಾತ ನಟಿ ಸುಹಾಸಿನಿ ಮಣಿರತ್ನಂ ಕೂಡ ನಟಿಸಿದ ಕುತೂಹಲಕಾರಿ ಅಂಶಗಳಿದ್ದರೂ, ಇವ್ಯಾವು ಸಿನೆಮಾದ ಯಶಸ್ವಿಗೆ ಸಹಕರಿಸಲಿಲ್ಲ.
ಹೆಸರಿನಿಂದಲೇ ಕುತೂಹಲ ಕೆರಳಿಸಿದ್ದ 'ಜೈಲಲಿತಾ', ಬಿಡುಗಡೆಯಾದ ನಂತರ ಪ್ರೇಕ್ಷಕರನ್ನು ಸಿನೆಮಾ ಮಂದಿರಕ್ಕೆ ಎಳೆಯಲು ವಿಫಲವಾಯಿತು. ಶರಣ್ ಅಭಿನಯಿಸಿದ್ದರೂ, ಪ್ರೇಕ್ಷಕರಿಗೆ ಕಚಗುಳಿ ನೀಡಲು ವಿಫಲವಾದರು.
ಮೋಹನ್ ಲಾಲ್ ಅಭಿನಯದ ಮಲಯಾಳಂ ನ ಬ್ಲಾಕ್ಬಸ್ಟರ್ ಚಿತ್ರ
ಉಪೇಂದ್ರ ಸಿನೆಮಾ ಎಂದರೆ ನಿರೀಕ್ಷೆಗಳು ಇದ್ದೆ ಇರುತ್ತವೆ. ಇವರ ನಿರ್ದೇಶನದ ಸಿನೆಮಾಗಳು ಬರುತ್ತಲೇ ಇಲ್ಲ ಎಂಬುದು ಅಭಿಮಾನಿಗಳ ಕೂಗು. ಸದ್ಯಕ್ಕೆ ಇವರ ಅಭಿನಯದ ಸಿನೆಮಾಗಳಿಗೆ ಜನರು ಖುಷಿ ಪಡಬೇಕಿದೆ. ಅತಿ ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಕಂಡು, ಸುಮಾರು ೭೫ ದಿನ ಓಡಿದ ಉಪೇಂದ್ರ ಅಭಿನಯದ 'ಬ್ರಹ್ಮ', ಗಲ್ಲಾ ಪೆಟ್ಟಿ
ಪ್ರೇಮಿಗಳ ದಿನಾಚರಣೆಗೆ ಬಿಡುಗಡೆಯಾದ ವಿ ರವಿಚಂದ್ರನ್ ಅಭಿನಯದ 'ಕ್ರೇಜಿ ಸ್ಟಾರ್' ನಿರೀಕ್ಷಿತ ಮಟ್ಟದ ಯಶಸ್ಸು ಕಾಣದ ಚಲನಚಿತ್ರ. ಮಲ್ಲದಲ್ಲಿ ನಟಿಸಿದ್ದ ಪ್ರಿಯಾಂಕ ಉಪೇಂದ್ರ ಮತ್ತೆ ಈ ಸಿನೆಮಾದಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದರು. ಮಲಯಾಳಮ್ ಸಿನೆಮಾ 'ಟ್ರಾಫಿಕ್' ನ ರಿಮೇಕ್ ಅಂತಲೋ ಏನೋ ಕನ್ನಡ ಪ್ರೇಕ್ಷಕರು 'ಕ
ಮುರಳಿ ಮತ್ತು ಹರಿಪ್ರಿಯ ಜೋಡಿ ಅಭಿನಯದ ಪ್ರಶಾಂತ್ ನೀಲ್ ಅವರ ಚೊಚ್ಚಲ ನಿರ್ದೇಶನದ 'ಉಗ್ರಂ' ಚಲನಚಿತ್ರ ಮುರಳಿ ಅವರಿಗೆ ಮರುಜೀವ ನೀಡಿದ ಸಿನೆಮಾ. ೧೦೦ ದಿನಕ್ಕಿಂತಲೂ ಹೆಚ್ಚು ಓಡಿದ ಸಿನೆಮಾ ೨೦೧೪ ರ ಜನಪ್ರಿಯ ಸಿನೆಮಾಗಳಲ್ಲಿ ಒಂದು. ೨೦೧೫ಕ್ಕೆ ಇದರ ಎರಡನೆ ಭಾಗ ಸಿದ್ಧವಾಗುತ್ತಿದೆಯಂತೆ!
ರಾಗಿಣಿ ದ್ವಿವೇದಿ ಎಂದರೆ ಪಡ್ಡೆ ಯುವಕರ ಮೈ ನವಿರೇಳುತ್ತದೆ. ರಾಗಿಣಿ ಅಭಿನಯದ 'ರಾಗಿಣಿ ಐ ಪಿ ಎಸ್' ಒಂದು ವರ್ಷ ತಡೆಯ ನಂತರ ಬಿಡುಗಡೆ ಕಂಡು, ಬಿಡುಗಡೆಗೆ ಮುಂಚೆ ಇದ್ದ ಕುತೂಹಲವನ್ನು ಬಿಡುಗಡೆಯ ನಂತರ ಕಾಯ್ದುಕೊಳ್ಳಲು ಸೋತು ಹೋಯಿತು. ಆದರು ರಾಗಿಣಿ ಕನ್ನಡ ಚಿತ್ರೋದ್ಯಮದಲ್ಲಿ ನೆಲೆಯೂರುವಂತೆ ಮಾಡಿದ ಸಿನೆಮಾ ಇದು.
'ಉಳಿದವರು ಕಂಡಂತೆ' - ಬ್ಲಾಕ್ ಬಸ್ಟರ್ ಸಿನೆಮಾ ಅಲ್ಲದೆ ಹೋದರು, ೨೦೧೪ ರಲ್ಲಿ ಅತಿ ಹೆಚ್ಚು ಗಮನ ಸೆಳೆದ ಸಿನೆಮಾ ಇದು. ರಕ್ಷಿತ್ ಶೆಟ್ಟಿ ಅಭಿನಯಿಸಿ, ಚೊಚ್ಚಲ ಬಾರಿಗೆ ನಿರ್ದೇಶಿಸಿದ ಸಿನೆಮಾದಲ್ಲಿ ರೋಶೋಮಾನ್ ನ ಕೆಲವು ಎಳೆಗಳು ಸಿನೆಮಾದಲ್ಲಿ ಕಂಡುಬಂದರೂ, ಬಹುಷಃ ಪ್ರಾದೇಶಿಕತೆಗೆ ಒತ್ತು ಕೊಟ್ಟು, ಒಳ್ಳೆಯ ಸಂಗೀತದ
'ಅಗ್ರಜ' - ಖ್ಯಾತ ನಟರಾದ ಜಗ್ಗೇಶ್ ಮತ್ತು ದರ್ಶನ್ ಅಭಿನಯದ ಈ ಚಿತ್ರ ತನ್ನ ನಿರೀಕ್ಷೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾದ ಸಿನೆಮಾ. ತೆಲುಗಿನ
'ಡಿಸೆಂಬರ್-೧': ಕನ್ನಡ ಕಲಾತ್ಮಕ-ಪರ್ಯಾಯ ಚಿತ್ರಗಳನ್ನು ನಿರ್ದೇಶಿಸುವವರೆ ಕಡಿಮೆ. ಇವರಲ್ಲಿ ಒಬ್ಬರು ಪಿ ಶೇಷಾದ್ರಿ. ಮುಖ್ಯಮಂತ್ರಿಯೊಬ್ಬರ ಗ್ರಾಮ ವಾಸ್ತವ್ಯದ ಕಥೆಯ ಎಳೆ ಇಟ್ಟುಕೊಂಡು ಮಾಡಿದ್ದ ಈ ಸಿನೆಮಾ, ಕಮರ್ಷಿಯಲ್ ಸಕ್ಸಸ್ ಅಲ್ಲದೆ ಹೋದರು, ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮ
'ಮಾಣಿಕ್ಯ' ಬಹುಷಃ ೨೦೧೪ ರ ಬ್ಲಾಕ್ಬಸ್ಟರ್ ಚಿತ್ರ ಎನ್ನಬಹುದೇನೋ! 'ರಿಮೇಕ್ ರಾಜ' ಸ್ಥಾನಕ್ಕೆ ಪೈಪೋಟಿ ನೀಡಬಹುದ ನಟರಾದ ಸುದೀಪ್ ಮತ್ತು ರವಿಚಂದ್ರನ್ ಈ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು ವಿಶೇಷ. ಬಾಕ್ಸ್ ಆಫೀಸ್ ನಲ್ಲಷ್ಟೆ ಅಲ್ಲದೆ ಟಿ ವಿ ಹಕ್ಕುಗಳ ಮಾರಾಟದಲ್ಲೂ ದುಡ್ಡು ಬಾಚಿದ ಸಿನೆಮಾ ಇದು. ತೆಲುಗು ಸಿನೆಮಾ
ಯಶ್ ಅವರಿಗೆ ಸೂಪರ್ ಸ್ಟಾರ್ ಖ್ಯಾತಿ ತಂದುಕೊಟ್ಟ ಸಿನೆಮಾ 'ಗಜಕೇಸರಿ'. ಅಮೂಲ್ಯ, ಅನಂತನಾಗ್ ಕೂಡ ಮುಖ್ಯಭೂಮಿಕೆಯಲ್ಲಿದ್ದ ಸಿನೆಮಾ, ಬಾಕ್ಸ್ ಆಫೀಸಿನಲ್ಲಿ ಕೊಳ್ಳೆ ಹೊಡೆದ ಚಿತ್ರ. ಅಷ್ಟೇ ಅಲ್ಲದೆ, ೨೦೧೪ ರ ೭ ನೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕನ್ನಡದ ಕಮರ್ಷಿಯಲ್ ಚಿತ್ರ ಕೂಡ ಇದ
'ನಾನು ನನ್ನ ಕನಸು' ನಿರ್ದೇಶಿಸಿ, ಅದರ ಯಶಸ್ಸಿನ ಸ್ಫೂರ್ತಿಯಿಂದ ಪ್ರಕಾಶ್ ರಾಜ್ ನಿರ್ದೇಶಿಸಿದ 'ಒಗ್ಗರಣೆ'ಯ ಘಾಟು ಕನ್ನಡದ ಪ್ರೇಕ್ಷಕರಿಗೆ ಅಷ್ಟೇನೂ ಹಿಡಿಸಲಿಲ್ಲ. ಪ್ರಕಾಶ್ ರಾಜ್, ಸ್ನೇಹಾ, ಸಂಯುಕ್ತ ಹೊರನಾಡು ಇವರೆಲ್ಲಾ ಮುಖ್ಯ ಭೂಮಿಕೆಯಲ್ಲಿದ್ದ ಈ ಸಿನೆಮಾ ತೆಲಗು ಮತ್ತು ತಮಿಳು ಭಾಷೆಗಳಲ್ಲೂ ಚಿತ್ರೀಕರಣಗೊಂಡ
೨೦೧೪ ರಲ್ಲಿ ಎರಡೆರಡು ಸೂಪರ್ ಹಿಟ್ ಸಿನೆಮಾದಲ್ಲಿ ನಟಿಸಿದ್ದು ಇವರೊಬ್ಬರೇ ಇರಬೇಕು. ಗಜಕೇಸರಿಯ ಅದ್ಭುತ ಸ್ವೀಕಾರದ ನಂತರ ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮೊದಲ ದಿನವೇ ೩ಕೋಟಿ ರೂ ಗಳಿಸಿ ಸುದ್ದಿ ಮಾಡಿದೆ. ೨೦೧೪ ರನ್ನು ಬೀಳ್ಕೊಡಲು ಇದೊಂದು ಪಕ್ಕ ಮಾಸ್ ಎಂಟರ್ ಟೈನರ್. ಯಶ್ ಜೊತೆಯಾಗಿ ಈ ಸಿನೆಮಾದ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

ಬ್ರದರ್ ನಿಮಗೆ ತೊಂದರೆಯಾಗಿದ್ದರೆ ಇರಾನ್‌ಗೆ ಹೋಗಿ ಹೋರಾಡಿ: ಯುಪಿ ಪೊಲೀಸ್ ಅಧಿಕಾರಿ ಹೀಗೆ ಹೇಳಿದ್ದು ಯಾರಿಗೆ?

SCROLL FOR NEXT