'ಎಕ್ಸ್ಕ್ಯೂಸ್ ಮಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಅಜಯ್ ರಾವ್ ಅವರು ಡಿಸೆಂಬರ್ 18ರಂದು ಕೊಪ್ಪಳದಲ್ಲಿನ ದೇವಸ್ಥಾನವೊಂದರಲ್ಲಿ ಸ್ವಪ್ನ ಅವರೊಂದಿಗೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 
ಹಿನ್ನೋಟ 2014

ನವಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ತಾರೆಗಳು 2014

ನಟಿ, ನಿರ್ದೇಶಕಿ ರೂಪಾ ಅಯ್ಯರ್ ಮತ್ತು ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಅವರು ಇದೇ ವರ್ಷ ಆಗಸ್ಟ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
'ಜಾಲಿಡೇಸ್' ಚಿತ್ರದ ಯಶಸ್ವಿ ಜೋಡಿ ಸ್ಫೂರ್ತಿ ಹಾಗೂ ವಿಶ್ವಾಸ್ ಇದೇ ವರ್ಷ ಹಸೆಮಣೆ ಏರಿದರು. ಸುಮಾರು ಏಳು ವರ್ಷಗಳ ತಮ್ಮ ಪ್ರೇಮ ಸಂಬಂಧಕ್ಕೆ ಈ ವರ್ಷ ಅಧಿಕೃತ ಮುದ್ರೆ ಬಿದ್ದ ಖುಷಿಯಲ್ಲಿದ್ದಾರೆ ಈ ನವ ದಂಪತಿಗಳು.
ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಪುತ್ರ ಪನ್ನಾಗ ಅವರು ಗುರುವಾರ(ನಂ.20) ನಿಖಿತಾ ಪ್ರಿಯಾ ಅವರೊಂದಿಗೆ ಹೊಸ ಬಾಳಿಗೆ ಕಾಲಿಟ್ಟರು.
ನಟ ಹರೀಶ್ ರಾಜ್ ಅವರು ಆಗಸ್ಟ್ ತಿಂಗಳಲ್ಲಿ ಎಂ.ಎಸ್ಸಿ ಪದವೀಧರೆ ಶ್ರುತಿ ಲೋಕೇಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.
ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಏಪ್ರಿಲ್ ತಿಂಗಳಲ್ಲಿ ಹಾಲೆಂಡ್ ನಲ್ಲಿ ಹಾರ ಬದಲಾಯಿಸಿಕೊಂಡರು. ಪ್ರೇಯಸಿ ಕ್ಯಾಪಿಪೈಲಿ ಜೊತೆ ಫಾರಿನ್ ನಲ್ಲಿ ಸಪ್ತಪದಿ ತುಳಿದರೂ, ಭಾರತಕ್ಕೆ ವಾಪಸ್ಸಾದ ನಂತ್ರ ಮಂತ್ರಾಲಯದಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ನವ ಜೀವನಕ್ಕೆ ಕಾಲಿರಿಸಿದರು.
ಗೀತಸಾಹಿತಿ ಕವಿರಾಜ್ ಅವರ ಮದುವೆ ಮೇ ತಿಂಗಳಲ್ಲಿ ಕುಪ್ಪಳ್ಳಿಯಲ್ಲಿ ನೆರವೇರಿತು. ಕನ್ನಡ ಚಿತ್ರರಂಗದ ಹಲವು ತಾರೆಯರು ಮದುವೆ ಸಮಾರಂಭಕ್ಕೆ ಆಗಮಿಸಿ ನೂತನ ದಂಪತಿಗಳನ್ನು ಹರಸಿದರು. ಬಯೋ ಟೆಕ್ನಾಲಜಿ ಕ್ಷೇತ್ರದಲ್ಲಿರುವ ರಾಜೇಶ್ವರಿ ಅವರನ್ನು ಕವಿರಾಜ್ ಮದುವೆಯಾದರು.
'ಒಲವೇ ಮಂದಾರ' ಖ್ಯಾತಿಯ ನಟ ಶ್ರೀಕಿ ಅವರಿಗೂ ಇದೇ ವರ್ಷ ಕಂಕಣ ಬಲ ಕೂಡಿ ಬಂತು. ಗುರುಹಿರಿಯರು ನಿಶ್ಚಯಿಸಿದಂತೆ ಎಂ.ಬಿ.ಎ ಓದಿರುವ ವೀಣಾ ಅವರನ್ನ ಬಾಳಸಂಗಾತಿಯನ್ನಾಗಿ ಶ್ರೀಕಿ ಸ್ವೀಕರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!