ದೇಶ ವಿಭಜನೆಯ ಕಥೆಯನ್ನು "ದ ಟ್ರೈನ್ ಟು ಪಾಕಿಸ್ತಾನ್" ಪುಸ್ತಕದ ಮೂಲಕ ಸಶಕ್ತವಾಗಿ ಕಟ್ಟಿಕೊಟ್ಟ ಲೇಖಕ, ಪತ್ರಕರ್ತ, ಚಿಂತಕ ಖುಶ್ವಂತ್ ಸಿಂಗ್ ನಿಧನ. 'ಇಲ್ಲಸ್ಟ್ರೇಟೆದ್ ವೀಕ್ಲಿ' ಪತ್ರಿಕೆಯ ಉತ್ತುಂಗದ ಕಾಲದಲ್ಲಿ ಅದರ ಸಂಪಾದಕರಾಗಿದ್ದ ಖುಷ್ವಂತ್ ಸಿಂಗ್ ನಿಧನ ಮಾಧ್ಯಮ ಲೋಕ ಮತ್ತು ಸಾಹಿತ್ಯ ಲೋಕ ಎರಡಕ್ಕೂ ನಷ್ಟ! 
ಹಿನ್ನೋಟ 2014

ಸಾಹಿತ್ಯ ಲೋಕ ೨೦೧೪

ಪಿ ಡಿ ಜೇಮ್ಸ್ ನಿಧನ: ಖ್ಯಾತ ಪಾತಕಿ-ಪತ್ತೇದಾರಿ ಕಾದಂಬರಿಕಾರ್ತಿ ಫಿಲ್ಲಿಸ್ ಡೊರೊಥಿ ಜೇಮ್ಸ್ ತಮ್ಮ ೯೪ ನೆ ವಯಸ್ಸಿನಲ್ಲಿ ವಿಧಿವಶ. 'ಕವರ್ ಹರ್ ಫೇಸ್' ಇವರ ಮೊದಲ ಕಾದಂಬರಿ.
ಕನ್ನಡದ ಕವಿ, ವಿಮರ್ಶಕ, ಉಪನ್ಯಾಸಕ ಪ್ರೊ. ಜಿ ಎಚ್ ನಾಯಕ್ ಅವರಿಗೆ ೨೦೧೪ ನೆ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಜಿ ಎಚ್ ನಾಯಕ್ ಅವರ
ಚೇತನ್ ಭಗತ್
ಎಸ್ ಎಲ್ ಭೈರಪ್ಪ ಅವರ ಯಾನ ಕೃತಿ ಬಿಡುಗಡೆ. ಎಸ ಭೈರಪ್ಪ ಅಂದರೆ ಸಾಹಿತ್ಯ ಲೋಕದಲ್ಲಿ ತೀವ್ರ ಪ್ರಿಯ ಅಥವಾ ತೀವ್ರ ದ್ವೇಷ. ಆದರೆ ಮೊದಲ ದಿನವೇ 'ಯಾನ'ದ ೩೦ ಸಾವಿರ ಪ್ರತಿ ಬಿಕರಿಯಾಯಿತು ಎನ್ನುವ ಅಂಶ ಮಾತ್ರ ಕನ್ನಡ ಸಾಹಿತ್ಯ ಲೋಕವೇ ಏಕೆ ಇಡೀ ಭಾರತೀಯ ಸಾಹಿತ್ಯ ಲೋಕಕ್ಕೆ ಆಶ್ಚರ್ಯದ ಸಂಗತಿ!
ವಿಶ್ವ ಸಾಹಿತ್ಯ ಲೋಕದಲ್ಲಿ ಅಷ್ಟೇನೂ ಕಂಡು ಕೇಳರಿಯದ ಫ್ರೆಂಚ್ ಲೇಖಕ ಪ್ಯಾಟ್ರಿಕ್ ಮೋಡಿಯಾನೊ ಅವರಿಗೆ ೨೦೧೪ ರ ಸಾಹಿತ್ಯ ನೊಬೆಲ್ ಪ್ರಶಸ್ತಿ.
ಆಸ್ಟ್ರೇಲಿಯಾದ ಬರಹಗಾರ ರಿಚರ್ಡ್ ಫ್ಲಾನಗನ್ ಅವರಿಗೆ
ಕನ್ನಡದ ಖ್ಯಾತ ಸಾಹಿತಿ ಯು ಆರ್ ಅನಂತ ಮೂರ್ತಿ ನಿಧನ. ಕನ್ನಡದಲ್ಲೇ ಬರೆದು ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಏಕೈಕ ಸಾಹಿತಿ. ಜ್ಞಾನಪೀಠ ಪ್ರಶಸ್ತಿ ವಿಜೇತ. ಇವರ ಕೃತಿ ಸಂಸ್ಕಾರ 'ಲಿಟರರಿ ಕ್ಲಾಸಿಕ್' ಎಂತಲೇ ರಾಷ್ಟ್ರಾದ್ಯಂತ ಪ್ರಸಿದ್ಧ. ಸಿನೆಮಾವಾಗಿ ರಾಷ್ಟ್ರಪ್ರಶಸ್ತಿ ವಿಜೇತ! ಬೌದ್ಧಿಕ ಚರ್ಚೆಯನ್ನು
೧೯೯೧ ರಲ್ಲಿ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಪಡೆದ ದಕ್ಷಿಣ ಆಫ್ರಿಕಾದ ಬರಹಗಾರ್ತಿ-ಹೋರಾಟಗಾರ್ತಿ ನಾಡಿನ್ ಗಾರ್ಡಿಮರ್ ನಿಧನ. ಸಣ್ಣ ಕಥೆಗಳಿಗೆ ಹಾಗೂ ಪ್ರಬಂಧಗಳಿಗೆ ಹೆಸರುವಾಸಿಯಾಗಿದ್ದ ನಾಡಿನ್ ಗಾರ್ಡಿಮರ್, ನೆಲ್ಸನ್ ಮಂಡೇಲಾ ಅವರ ಆತ್ಮೀಯ ಗೆಳೆಯರಾಗಿದ್ದರು ಕೂಡ.
ಮಾಯಾ ಎಂಜಲೊ ನಿಧನ - ಇತ್ತೀಚೆಗೆ ಔಟ್ ಲುಕ್ ಪತ್ರಿಕೆ ನಡೆಸಿದ ಜೀವನವನ್ನು ಬದಲಾಯಿಸುವ ೧೦೦ ಪುಸ್ತಕಗಳು ಪಟ್ಟಿಯಲ್ಲಿ ಈ ವರ್ಷ ನಿಧನರಾದ ಮಾಯಾ ಎಂಜಲೋ ಅವರ ಆತ್ಮಕತೆಯ ಮೊದಲ ಭಾಗ
ಮಾಂತ್ರಿಕ ವಾಸ್ತವದ ಜನಕ ಎಂದೆ ಪ್ರಸಿದ್ಧರಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಜ್ ನಿಧನ. ದಕ್ಷಿಣ ಅಮೇರಿಕಾದ ಪೀಳಿಗೆಯ ಕಥೆಯನ್ನು ಹೇಳುವ 'ಒನ್ ಹಂಡ್ರೆಡ್ ಯಿಯರ್ಸ್ ಆಫ್ ಸಾಲಿಟ್ಯೂಡ್
ಕನ್ನಡ ಸಾಹಿತ್ಯ ಲೋಕಕ್ಕೆ ಕಾರ್ಪೋರೆಟ್ ಸಂದಿಗ್ಧಗಳನ್ನು ತಮ್ಮ ಬರವಣಿಗೆಯ ಮೂಲಕ ತಿಳಿಸಿದ 'ಶಿಕಾರಿ' ಖ್ಯಾತಿಯ ಯಶವಂತ ಚಿತ್ತಾಲ ನಿಧನ. ಮುಂಬೈನಲ್ಲಿ ಇದ್ದುಕೊಂಡೆ ಕನ್ನಡ ಸಾಹಿತ್ಯ ಸೇವೆ ಮಾಡಿದ ಚಿತ್ತಾಲರ ಪುರುಷೋತ್ತಮ, ಛೇದ, ಮತ್ತು ಅವರ ಇತರ ಕಥೆಗಳು ಕೂಡ ಶಿಕಾರಿಯಷ್ಟೆ ಪ್ರಸಿದ್ಧ.
ಶೇಕ್ಸ್ ಸ್ಪಿಯರ್ ನ ಫರ್ಸ್ಟ್ ಫೋಲಿಯೋ ಪತ್ತೆ - ಕೇವಲ ೨೩೦ ಪುಸ್ತಕಗಳಷ್ಟೇ ವಿಶ್ವದಾದ್ಯಂತ ಉಳಿದಿವೆ ಎಂದು ನಂಬಲಾದ 'ಶೇಕ್ಸ್ಪಿಯರ್ ಫರ್ಸ್ಟ್ ಫೋಲಿಯೊ' ಸೇಂಟ್-ಒಮರ್ ಗ್ರಂಥಾಲಯದಲ್ಲಿ ೨೦೦ ವರ್ಷಗಳಿಂದ ಯಾರೂ ಎರವಲು ಪಡೆಯದೆ ಬಿದ್ದದ್ದು ಪತ್ತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

ಬ್ರದರ್ ನಿಮಗೆ ತೊಂದರೆಯಾಗಿದ್ದರೆ ಇರಾನ್‌ಗೆ ಹೋಗಿ ಹೋರಾಡಿ: ಯುಪಿ ಪೊಲೀಸ್ ಅಧಿಕಾರಿ ಹೀಗೆ ಹೇಳಿದ್ದು ಯಾರಿಗೆ?

SCROLL FOR NEXT