ನೀರದ್ ಮಹಾಪಾತ್ರಭಾರತೀಯ ಖ್ಯಾತ ನಿರ್ದೇಶಕರೆಂದೇ ಹೆಸರು ಮಾಡಿದ್ದ ನೀರದ್ ಮಹಾಪಾತ್ರ ಅವರು ಹೃದಯ ಸ್ತಂಭನದಿಂದಾಗಿ ಫೆ.19ರಂದು ಸಾವನ್ನಪ್ಪಿದ್ದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಗೋವಿಂದ ಪನ್ಸಾರೆಮಹಾರಾಷ್ಟ್ರದ ವಿಚಾರವಾದಿ ಲೇಖಕ ಹಾಗೂ ಕಮ್ಯುನಿಸ್ಟ್ ನಾಯಕರಾಗಿದ್ದ ಗೋವಿಂದ್ ಪನ್ಸಾರೆ ಅವರನ್ನು ಅನಾಮಿಕ ವ್ಯಕ್ತಿಗಳು ಫೆ.20ರಂದು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅವರಿಗೆ.82 ವರ್ಷ ವಯಸ್ಸಾಗಿತ್ತು.
ವಿ,ಎಸ್. ರಾಘವನ್ವೃದ್ಧಾಪ್ಯ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಹಿರಿಯ ಮತ್ತು ಅನುಭವಿ ತಮಿಳು ನಟ ವಿ.ಎಸ್. ರಾಘವನ್ ಅವರು ಜ.24 ರಂದು ಸಾವನ್ನಪ್ಪಿದ್ದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
Advertisement
Advertisement
ಕಾಗ ರಂಗನಾಥ್ತೆಲುಗು ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳನ್ನು ಮಾಡಿ ಖ್ಯಾತಿಗಳಿಸಿದ್ದ ಹಿರಿಯ ನಟ ಕಾಗ ರಂಗನಾಥ್ ಅವರು ಡಿ.19ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಹುಕುಂ ಸಿಂಗ್1990-31ರವರೆಗು ಹರಿಯಾಣದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಹುಕುಂ ಸಿಂಗ್ ಅವರು ಫೆ.26ರಂದು ವಿಧಿವಶರಾಗಿದ್ದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಮಲ್ಲಿ ಮಸ್ತಾನ್ ಬಾಬು ಭಾರತದ ಪ್ರಸಿದ್ಧ ಪರ್ವತಾರೋಹಿ ಎಂದೇ ಖ್ಯಾತಿ ಗಳಿಸಿದ್ದ ಮಲ್ಲಿ ಮಸ್ತಾನ್ ಬಾಬು ಅವರ ಮೃತ ದೇಶ ಏ.5 ರಂದು ದೊರೆತಿತ್ತು. ಬಾಬು ಅವರು ಪರ್ವತಾರೋಹಣಕ್ಕಾಗಿ ಡಿಸೆಂಬರ್ 16ರಂದು ತೆರಳಿದ್ದರು. ಮಾರ್ಚ್ 24 ರಂದು ಅರ್ಜೆಂಟೀನಾದಿಂದ ಪರ್ವತಾರೋಹಣ ಪ್ರಾರಂಭಿಸಿದ್ದರು. ಮಾರನೇ ದಿನ ಅವರು ಶ
ಟಿ.ಸೈಲೋ1979ರಿಂದ 1984ರ ವರೆಗೆ ಮಿಜೋರಾಂನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಟಿ ಸೈಲೋ ಅವರು ಹೃದಯಾಘಾತದಿಂದಾಗಿ ಮಾ.27 ರಂದು ಸಾವನ್ನಪ್ಪಿದ್ದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಮಸುದುರ್ ರಹಮಾನ್ ಬೈದ್ಯ ವಿಶ್ವದ ಮೊದಲ ಅಂಗವಿಕಲ ಈಜುಪಟು ಎಂದೇ ಖ್ಯಾತಿಗಳಿಸಿದ್ದ ಮಸುದುರ್ ರಹಮಾನ್ ಬೈದ್ಯ ಅವರು ಹೃದಯಾಘಾತದಿಂದಾಗಿ ಏ.26ರಂದು ಸಾವನ್ನಪ್ಪಿದ್ದರು. ಅವರಿಗೆ 46 ವರ್ಷ ವಯಸ್ಸಾಗಿತ್ತು.
ಬಿಜೋಯ ರೇನ್ಯುಮೋನಿಯಾದಿಂದ ಬಳಲುತ್ತಿದ್ದ ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ ಸತ್ಯಜಿತ್ ಅವರ ಪತ್ನಿ ಬಿಜೋಯ ರೇ ಅವರು ಜೂ.2 ರಂದು ಸಾವನ್ನಪ್ಪಿದ್ದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.
ಹೇಮಂತ್ ಕನಿತ್ಕರ್ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತೀಯ ಕ್ರಿಕೆಟ್ ಆಟಗಾರ ಹೇಮಂತ್ ಕಸಿತ್ಕರ್ ಅವರು ಜೂ.9 ರಂದು ಸಾವನ್ನಪ್ಪಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಶೀಲಾ ಕೌಲ್ಜವಾಹರಲಾಲ್ ನೆಹರೂ ಅವರ ಸೊಸೆ ಹಾಗೂ ಮಾಜಿ ಕೇಂದ್ರ ಸಚಿವೆಯಾಗಿದ್ದ ಶೀಲಾ ಕೌಲ್ ಅವರು ಜೂ.13 ರಂದು ವಿಧಿವಶರಾಗಿದ್ದರು. ಅವರಿಗೆ 101 ವರ್ಷ ವಯಸ್ಸಾಗಿತ್ತು.
ಅಲೆಕ್ಸ್ ಮ್ಯಾಥ್ಯೂಮಲೆಯಾಳಂ ಚಿತ್ರರಂಗದ ಖ್ಯಾತ ನಟ ಅಲೆಕ್ಸ್ ಮ್ಯಾಥ್ಯೂ ಅವರು ಹೃದಯಾಘಾತದಿಂದಾಗಿ ಜೂ.23 ರಂದು ಸಾವನ್ನಪ್ಪಿದ್ದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.
ಓಂ ಪ್ರಕಾಶ್ ಮುಂಜಾಲಕೈಗಾರಿಕೋದ್ಯಮಿ, ಹೀರೋ ಸೈಕಲ್ಸ್ ಲಿಮಿಟೆಡ್ ನ ಸ್ಥಾಪಕ ಅಧ್ಯಕ್ಷ ಓಂ ಪ್ರಕಾಶ್ ಮುಂಜಾಲ್ ಅವರು ಆ.13ರಂದು ವಿಧಿವಶರಾಗಿದ್ದರು. ಅವರಿಗೆ 87 ವರ್ಷ ವಯಸ್ಸಾಗಿತ್ತು
ಆಹುತಿ ಪ್ರಸಾದ್ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ತೆಲುಗು ಚಿತ್ರರಂಗದ ಖ್ಯಾತ ನಟ ಆಹುತಿ ಪ್ರಸಾದ್ ಅವರು ಜ.4ರಂದು ಸಾವನ್ನಪ್ಪಿದ್ದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.
ಜಗದೀಶ್ ಕುಮಾರ್ತೀವ್ರ ಹೃದಯಾಘಾತದಿಂದಾಗಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜಗದೀಶ್ ಕುಮಾರ್ ಅವರು ನ.23 ರಂದು ಸಾವನ್ನಪ್ಪಿದ್ದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಶ್ರೀಹರಿಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಜನಪ್ರಿಯ ಬಹುಭಾಷಾ ನಟ ಶ್ರೀಹರಿಯವರು ಅ.9 ರಂದು ನಿಧನರಾಗಿದ್ದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.
Normal 0 false <w:Ignor
ಕೆ.ಎಸ್.ಎಲ್.ಸ್ವಾಮಿಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಕೆ.ಎಸ್.ಎಲ್.ಸ್ವಾಮಿ ಅವರು ಅ.28ರಂದು ಸಾವನ್ನಪ್ಪಿದ್ದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಆರ್.ಕೆ.ಲಕ್ಷ್ಮಣ್ತಮ್ಮ ವ್ಯಂಗ್ಯ ಚಿತ್ರದ ಮೂಲಕ ಜನರ ಗಮನ ಸೆಳೆದಿದ್ದ ಆರ್.ಕೆ.ಲಕ್ಷ್ಮಣ್ ಅವರು ಹಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಜ.26 ರಂದು ತೀವ್ರ ಅನಾರೋಗ್ಯ ಸಮಸ್ಯೆಯುಂಟಾದ ಕಾರಣ ಕೊನೆಯುಸಿರೆಳೆದಿದ್ದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಸುವ್ರಾ ಮುಖರ್ಜಿತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪತ್ನಿ ಸುವ್ರಾ ಮುಖರ್ಜಿ ಅವರು ಆ.18ರಂದು ವಿಧಿವಶರಾಗಿದ್ದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಜಗಮೋಹನ್ ದಾಲ್ಮಿಯಾಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಜಗಮೋಹನ್ ದಾಲ್ಮಿಯಾ ಅವರಿಗೆ ಸೆ.20 ರಂದು ಹೃದಯ ಸ್ತಂಭನ ಉಂಟಾಗಿ ಸಾವನ್ನಪ್ಪಿದ್ದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಸ್ವಾಮಿ ದಯಾನಂದ ಸರಸ್ವತಿಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅವರ ಆಧ್ಯಾತ್ಮಿಕ ಗುರು ಎಂದೇ ಹೆಸರುವಾಸಿಯಾಗಿದ್ದ ಆಧ್ಯಾತ್ಮಿಕ ಗುರು ಸ್ವಾಮಿ ದಯಾನಂತ ಸರಸ್ವತಿ ಅವರು ತೀವ್ರ ಅನಾರೋಗ್ಯದಿಂದಾಗಿ ಅ.30ರಂದು ವಿಧಿವಶರಾಗಿದ್ದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಇ.ನಾಗೇಶ್ವರ ರಾವ್ಶಂಕರಾಭರಣಂ, ಸಾಗರಸಂಗಮಂ ಮತ್ತು ಸ್ವಾತಿಮುತ್ಯಂನಂಥ ಹಲವಾರು ಹಿಟ್ ಚಿತ್ರಗಳ ನಿರ್ಮಾಪಕರಾಗಿದ್ದ ಇ.ನಾಗೇಶ್ವರ ರಾವ್ ಅವರು ಅ.4 ರಂದು ಸಾವನ್ನಪ್ಪಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಮನೋರಮಾಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ದಕ್ಷಿಣ ಭಾರತದ ಬಹುಭಾಷಾ ನಟಿ ಮನೋರಮಾ ಅವರು ಅ.11ರಂದು ವಿಧಿವಿಶರಾಗಿದ್ದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಅಶೋಕ್ ಸಿಂಘಾಲ್ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವಿಶ್ವ ಹಿಂದೂ ಪರಿಶತ್ ಅಂತರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರು ನ.17ರಂದು ಕೊನೆಯುಸಿರೆಳೆದಿದ್ದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ವಿನೋದ್ ಮೆಹ್ತಾಸುಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಹಾಗೂ ಲೇಖಕ ವಿನೋದ್ ಮೆಹ್ತಾ ಅವರು ಮಾ.8 ರಂದು ಕೊನೆಯುಸಿರೆಳೆದಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಅರುಣಾ ಶಾನಭಾಗ್ಅತ್ಯಾಚಾರಕ್ಕೊಳಗಾಗಿ ಸುಧೀರ್ಘ 42 ವರ್ಷಗಳಿಂದ ಜೀವಂತ ಶವದ ಸ್ಥಿತಿಯಲ್ಲಿದ್ದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪರ ಮೂಲದ ದಾದಿ ಅರುಣಾ ಶಾನಭಾಗ್ ಅವರು ಮೇ.18ರಂದು ಚಿರನಿದ್ರೆಗೆ ಜಾರಿದ್ದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಡಿ.ರಾಮನಾಯ್ಡುವೃಷಣದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಪಕ, ನಟ ವಿಕ್ಟರಿ ವೆಂಕಟೇಶ್ ಅವರ ತಂದೆ ದಗ್ಗುಬಾಟಿ ರಾಮನಾಯ್ಡು ಅವರು ಫೆ.18ರಂದು ವಿಧಿವಶರಾಗಿದ್ದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಎಂ.ಎಸ್.ನಾರಾಯಣತಮ್ಮ ಹಾಸ್ಯದಿಂದ ಇಡೀ ತೆಲುಗು ಜನತೆಯ ಮನ ಗೆದ್ದಿದ್ದ ಟಾಲಿವುಡ್ ಖ್ಯಾತ ಹಾಸ್ಯ ನಟ ಎಂ.ಎಸ್ ನಾರಾಯಣ ಅವರು ತೀವ್ರ ಅನಾರೋಗ್ಯ ಸಮಸ್ಯೆಯಿಂದಾಗಿ ಜ.23ರಂದು ಸಾವನ್ನಪ್ಪಿದ್ದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಬಾಲಿವುಡ್ ನಟಿ ಸಾಧನಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಬಾಲಿವುಡ್ ನಟಿ ಸಾಧನ ಅವರು ಡಿ.25 ಸಾವನ್ನಪ್ಪಿದ್ದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
Subscribe and Receive exclusive content and updates on your favorite topics
Advertisement
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.