'ಹಿಂದು ರಾಷ್ಟ್ರವಾದ' ಹೆಸರಿನಲ್ಲಿ ಬಿಜೆಪಿ ನೇತೃತ್ವದ ಸರಕಾರ 'ಬ್ರಾಹ್ಮಣತ್ವ'ವನ್ನು ಪಸರಿಸುತ್ತಿದ್ದು, ಬಿ.ಆರ್.ಅಂಬೇಡ್ಕರ್ ಹಿಂದೂ ಧರ್ಮವನ್ನು ತ್ಯಜಿಸಿದವರಾದರೂ ಕೆಲವು ಸಮಾಜ ಸುಧಾರಕರನ್ನು 'ಮಹಾನ್ ಹಿಂದುಗಳೆಂದು' ಪ್ರತಿಬಿಂಬಿಸಲಾಗುತ್ತಿದೆ-ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಅರುಂಧತಿ ರಾಯ್
ಬಾಲಿವುಡ್ ನಟರಾದ ಶಾರುಖ್‌ಖಾನ್ ಮತ್ತು ಅಮೀರ್ ಖಾನ್ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರು ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆಪಾದಿಸುವ ಮೂಲಕ ದೇಶದ ಗೌರವಕ್ಕೆ ಕಳಂಕ ಉಂಟು ಮಾಡುತ್ತಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿದ ಶಾರುಖ್ ಖಾನ್ ಪಾಕಿಸ್ತಾನದ ಏಜೆಂಟ್ - ವಿಶ್ವಭಾರತವು ಒಂದು ಅಪ್ಪಟ ಧರ್ಮ ಸಹಿಷ್ಣು ದೇಶವಾಗಿದೆ.100 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಒಂದಲ್ಲಾ ಒಂದು ಸಮಸ್ಯೆ, ಸಂಕಷ್ಟ ಸಹಜ ಮತ್ತು ಸರ್ವೇ ಸಾಮಾನ್ಯ-ಅನುಪಮ್ ಖೇರ್
ಅಸಹಿಷ್ಣುತೆ ಬಗ್ಗೆ ಪತ್ನಿ ಕಿರಣ್ ರಾವ್ ಜತೆ ಮಾತನಾಡುತ್ತಿರುವಾಗ, ನಾವು ದೇಶ ತೊರೆದು ಹೋಗೋಣವೇ ಎಂದು ಆಕೆ ನನ್ನನ್ನು ಕೇಳಿದ್ದಳು. ನನ್ನ ಪತ್ನಿ ಮಕ್ಕಳು ಹಾಗೂ ಅವರ ಭವಿಷ್ಯದ ಬಗ್ಗೆ ಹೆದರಿದ್ದಳು ಮತ್ತು ದಿನಪತ್ರಿಕೆಯನ್ನು ಓದಲು ಹೆದರುತ್ತಿದ್ದಳು-ಅಮೀರ್ ಖಾನ್
ಭಾರತದಲ್ಲಿ ಅಸಹಿಷ್ಣುತೆ ಇದೆ. ಇಲ್ಲಿನ ವ್ಯವಸ್ಥೆಗಳು ಎಲ್ಲಾ ಸರಿಯಾಗಿಲ್ಲ-ಶಾರೂಖ್ ಖಾನ್
ಭಾರತದಲ್ಲಿ ಅಸಹಿಷ್ಣುತೆ ವಿಷಯವನ್ನು ಹಣ ಕೊಟ್ಟು ದುರುದ್ದೇಶಪೂರ್ವಕವಾಗಿ ಹುಟ್ಟುಹಾಕಲಾಗಿದೆ-ಕೇಂದ್ರ ಸಚಿವ ವಿ.ಕೆ.ಸಿಂಗ್
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಧರ್ಮಗಳಲ್ಲಿರುವ ಅಸಹಿಷ್ಣುತೆ ದೂರವಾಗಬೇಕು. ಪ್ರತಿಯೊಬ್ಬರೂ ಸಹಿಷ್ಣುತೆಯಿಂದ ಬಾಳಬೇಕು. ಯಾವ ಧರ್ಮಕ್ಕೂ ಅಸಹಿಷ್ಣುತೆ ಒಳ್ಳೆಯದಲ್ಲ-ಉಡುಪಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ
ಸೌಹಾರ್ದತೆಯಿಂದ ಬದುಕುವ ಭಾರತೀಯರಿಗೆ ಶಿಕ್ಷಣ ಮತ್ತು ಉದ್ಯೋಗ ತೃಪ್ತಿ ಸಿಕ್ಕರೆ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ತಡೆಯಲು ಸಾಧ್ಯ-ರತನ್ ಟಾಟಾ
ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಪ್ರಶಸ್ತಿ ಹಿಂದಿರುಗಿಸುತ್ತಿರುವ 'ಲೇಖಕರು ಹಾಗೂ ಬರಹಗಾರರು ಚರ್ಚೆ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕು. ಅದು ಬಿಟ್ಟು, ಭಾವನೆಗಳ ಬೆನ್ನತ್ತಿ ಹೋಗಬಾರದು-ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಧರ್ಮದ ಆಧಾರದಲ್ಲಿ ಜನರನ್ನು ಧ್ರುವೀಕರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಿನಿಕತನದ ಪ್ರಚಾರದಲ್ಲಿ ತೊಡಗಿದೆ. ಇದು ಸಾಮಾಜಿಕ ಹಾಗೂ ಧಾರ್ಮಿಕ ಸಾಮರಸ್ಯವನ್ನು ಕದಡಲಿದೆ. ದೇಶದಲ್ಲಿ ನಡೆಯುತ್ತಿರುವ ಘಟನೆಗಳು ಪೂರ್ವ ಯೋಜಿತವಾಗಿದ್ದು, ಜನರಲ್ಲಿ ಭಯ– ಆತಂಕಗಳನ್ನು ಹುಟ್ಟಿಸುವ ಉದ್ದೇಶದಿಂದ ಕೂಡಿದೆ. ಈ ಪೂರ್ವ ನಿಯೋಜಒಗ್ಗಟ್ಟು ಹಾಗೂ ಸೌಹಾರ್ದತೆ ಮಾತ್ರ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಲ್ಲದು. ಯಾವುದೇ ದುಷ್ಕೃತ್ಯಗಳು ನಡೆದರೂ ಸಮಾಜ ಹಾಗೂ ರಾಷ್ಟ್ರಕ್ಕೊಂದು 'ಕಪ್ಪು ಚುಕ್ಕೆ-ಪ್ರಧಾನ ಮಂತ್ರಿ ನರೇಂದ್ರ ಮೋದಿ
ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ. ಇಲ್ಲಿ ಮುಸಲ್ಮಾನರಿಗೆ ರಕ್ಷಣೆ ಇಲ್ಲ. ಈ ಕುರಿತು ವಿಶ್ವಸಂಸ್ಥೆಗೆ ಪತ್ರ ಬರೆಯುತ್ತೇನೆ-ಉತ್ತರ ಪ್ರದೇಶ ಸಚಿವ ಅಜಂ ಖಾನ್
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos