ಆಮೀರ್ ಖಾನ್ ಬಾಲಿವುಡ್ ನಟ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ಬದುಕಲುಕಷ್ಟವಾಗುತ್ತಿದೆ. ಹೀಗಾಗಿ ದೇಶ ಬಿಟ್ಟು ಹೋಗಲು ಯೋಚಿಸುತ್ತಿರುವುದಾಗಿ ಹೇಳಿಕೆ.
 
ಹಿನ್ನೋಟ 2015

ವಿವಾದಾತ್ಮಕ ಹೇಳಿಕೆಗಳು-2015

ಕೆ.ಜೆ ಜಾರ್ಜ್, ಸಚಿವ:  ಬೆಂಗಳೂರಿನಲ್ಲಿ ಚಲಿಸುತ್ತಿದ್ದ ವಾಹನದಲ್ಲಿ ಕಾಲ್ ಸೆಂಟರ್ ಉದ್ಯೋಗಿ ಮೇಲೆ ಇಬ್ಬರು ಅತ್ಯಾಚಾರ ನಡೆಸಿದ್ದರು. ಈ ವೇಳೆ, ನೀವದನ್ನು ಹೇಗೆ  ಗ್ಯಾಂಗ್ ರೇಪ್ ಎಂದು ಕರೆಯುತ್ತೀರಿ? ನಾಲ್ಕೈದು ಜನರು ಇದ್ದಾಗ ಮಾತ್ರ ಗ್ಯಾಂಗ್ ರೇಪ್ ಆಗುತ್ತದೆ.ಇಬ್ಬರಿದಿದರೇ ಅದು ಗ್ಯಾಂಗ್ ರೇಪ್ ಆಗ
ಮುಲಾಯಂ ಸಿಂಗ್ ಯಾದವ್, ಸಮಾಜವಾದಿ ಪಕ್ಷದ ಮುಖಂಡ: ಏಕ ಕಾಲದಲ್ಲಿ ನಾಲ್ವರು ಒಟ್ಟಿಗೆ ಅತ್ಯಾಚಾರ ನಡೆಸಲು ಹೇಗೆ ಸಾಧ್ಯ, ಒಬ್ಬ ಆರೋಪಿ ಅತ್ಯಾಚಾರ ನಡೆಸಿರುತ್ತಾನೆ. ಸಂತ್ರಸ್ತ ಮಹಿಳೆ ನಾಲ್ವರ ವಿರುದ್ದ ದೂರು ನೀಡಿರುತ್ತಾಳೆ ಎಂದು ಆಗಸ್ಟ್ 18 ರಂದು ಲಕ್ನೋದಲ್ಲಿ ಮಹಿಳೆ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ
ಅಜಂ ಖಾನ್‌, ಸಮಾಜವಾದಿ ಪಕ್ಷದ ನಾಯಕ: 'ಪ್ರಧಾನಿ ಮೋದಿ ವಿಶ್ವದ ಅಗ್ರ 10 ಮಂದಿ ಕ್ರಿಮಿನಲ್‌ಗ‌ಳಲ್ಲಿ ಒಬ್ಬರಾಗಿದ್ದಾರೆ. ಅವರೇ ಪ್ರಧಾನಿಯಾಗಿದ್ದಾರೆ. ಅಂತಹುದರಲ್ಲಿ ನಾನ್ಯಾಕೆ ಪ್ರಧಾನಿ ಯಾಗಬಾರದು. 
ಸಾಕ್ಷಿ ಮಹಾರಾಜ್, ಬಿಜೆಪಿ ಸಂಸದ: ಹತ್ಯೆಯಾದ ಮುಸ್ಲಿಂ ಕುಟುಂಬಕ್ಕೆ ಸರ್ಕಾರ 20 ಲಕ್ಷ ಪರಿಹಾರ ಧನ ಘೋಷಿಸಿದೆ. ಆದರೆ ಹಿಂದೂ ವ್ಯಕ್ತಿ ಸತ್ತರೇ 20 ಸಾವಿರ ರೂಪಾಯಿ ಕೂಡ ನೀಡುವುದಿಲ್ಲ, ಗೋಮಾತೆ ರಕ್ಷಣೆಗೆ ನಾನು ಕೊಲ್ಲಲು ಮತ್ತು ಕೊಲೆಯಾಗಲೂ ಸಹ ಸಿದ್ದನಿದ್ದೇನೆ. ಹಿಂದೂ ಹೆಣ್ಣು ಮಕ್ಕಳು ಕನಿಷ್ಠ ಎಂದರೂ ನಾಲ್ಕು ಮ
ಹಜಿ ಯಾಕೂಬ್ ಖುರೇಶಿ: ಬಿಎಸ್ಪಿ ಶಾಸಕ  ಪ್ಯಾರಿಸ್ ನ ವಾರಪತ್ರಿಕೆ ಕಚೇರಿ ಮೇಲೆ ದಾಳಿ ನಡೆಸಿ ಪತ್ರಕರ್ತರನ್ನು ಹತ್ಯೆಗೈದ ಉಗ್ರರಿಗೆ 51 ಕೋಟಿ ರೂ ಇನಾಮು ನೀಡುವುದಾಗಿ ಘೋಷಣೆ.
ನರೇಂದ್ರ ಮೋದಿ ಪ್ರಧಾನ ಮಂತ್ರಿ: ಬಿಹಾರ ವಿಧಾನ ಸಭೆ ಚುನಾವಣೆ ಪ್ರಚಾರದ ವೇಳೆ ‘ನಿತೀಶ್ ಕುಮಾರ್ ಅವರ ಡಿಎನ್​ಎ ಸರಿ ಇಲ್ಲ’ ಎಂದು ಹೇಳಿದ್ದರು. ಇದಕ್ಕೆ ‘ಮೋದಿಯವರು ನನ್ನ ಡಿಎನ್​ಎ ಸರಿ ಇಲ್ಲ ಎನ್ನುವ ಮೂಲಕ ಇಡೀ ಬಿಹಾರಕ್ಕೆ ಅವಮಾನ ಮಾಡಿದ್ದಾರೆ’ ಎಂದು ಹೇಳಿ ನಿತೀಶ್ ಕುಮಾರ್  ಜನರ ಆತ್ಮಾಭಿಮಾನದ
ಮಾರ್ಕಂಡೇಯ ಕಾಟ್ಜು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ: ಗೋವು ಯಾರ ತಾಯಿಯೂ ಅಲ್ಲ, ಅದೂ ಸಹ ಒಂದು ಪ್ರಾಣಿಯಷ್ಟೆ. ಗೋಮಾಂಸ ಸೇವನೆ ತಪ್ಪಲ್ಲ. ವಿಶ್ವಾದ್ಯಂತ ಗೋಮಾಂಸ ಸೇವಿಸುವವರು ಕೆಟ್ಟವರು, ಗೋಮಾಂಸ ಸೇವಿಸದ ಭಾರತೀಯರು ಸಾಧು ಸಂತರು ಎನ್ನಲಾದೀತೆ. ಅಲ್ಲದೆ, ನಾನು ಗೋಮಾಂಸ ತಿನ್ನುತ್ತೇನೆ,
ಸಿದ್ದರಾಮಯ್ಯ,ಮುಖ್ಯಮಂತ್ರಿ: ಆಹಾರ ಪದ್ಧತಿ ಅವರವರ ಇಷ್ಟ. ದನದ ಮಾಂಸವನ್ನು ನಾನು ಇಷ್ಟಪಟ್ಟು ತಿನ್ನುತ್ತೇನೆ ಎಂದರೆ ಪ್ರಶ್ನಿಸಲು ಇವರು ಯಾರು, ಬೇಕಾದರೆ ಹಂದಿ ಮಾಂಸವನ್ನೂ ತಿನ್ನುತ್ತೇನೆ. ಬಿಜೆಪಿಯವರಿಗೆ ಸಂವಿಧಾನ ತಿಳಿದಿಲ್ಲ. ಅವರು ಮೊದಲು ಸಂವಿಧಾನ ಓದಿಕೊಳ್ಳಲಿ. ನನ್ನ ವಿರುದ್ಧ ಪ್ರತಿಭಟನೆ ನಡೆಸುವ
ಅಶೋಕ್ ಖೇಣಿ, ಬೀದರ್ ಶಾಸಕ:  ಸಾಲ ಹಾಗೂ ಬರದಿಂದ ರೈತರು ಸಾಯುತ್ತಿಲ್ಲ, ಮದ್ಯ ಸೇವನೆ, ಜೂಜಾಟಗಳಿಂದ ಸಾಲ ಮಾಡಿಕೊಂಡು ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದಾರೆ. .
ಮನೋಹರ್ ಲಾಲ್ ಕಟ್ಟಾರ್, ಹರ್ಯಾಣ ಮುಖ್ಯಮಂತ್ರಿ: ಗೋಮಾಂಸ ತಿನ್ನುವವರು ಭಾರತದಲ್ಲಿ ಇರಬಾರದು .ತಿನ್ನಲೇ ಬೇಕು ಎಂದವರು ಬೇರೆ ದೇಶಕ್ಕೆ ಹೋಗಬಹುದು.
ಹೆಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ : ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ನೀಡಿರುವುದಕ್ಕೆ ಕರ್ನಾಟಕದಲ್ಲೂ ವಿರೋಧ ವ್ಯಕ್ತವಾಗಿತ್ತು. ಮುಂದೊಂದು ದಿನ  ಬಿಜೆಪಿ ಸರ್ಕಾರ ಗೋಡ್ಸೆಗೂ ಭಾರತ ರತ್ನ ನೀಡಿದರೂ ಆಶ್ಚರ್ಯವಿಲ್ಲ.
ಕೆ.ಎಸ್ ಈಶ್ವರಪ್ಪ, ಬಿಜೆಪಿ ಮುಖಂಡ: ಯಾವನೊಎಳ್ಕೊಂಡು ಹೋಗಿ ನಿಮ್ಮನ್ನು ರೇಪ್ ಮಾಡಿದ್ರೆ ವಿರೋಧ ಪಕ್ಷದ ನಾವು ಎಲ್ಲೋ ಇರ್ತೀವಿ. ಏನ್ ಮಾಡ್ಬೇಕು ಹೇಳಿ?’’ಎಂಬುದಾಗಿ ಟಿವಿ ವರದಿಗಾರ್ತಿಗೆ ಉತ್ತರ.
ವಿ.ಕೆ ಸಿಂಗ್, ಕೇಂದ್ರ ಸಚಿವ : ಯಾರಾದಾರೂ ನಾಯಿಗೆ ಕಲ್ಲು ಹೊಡೆದರೇ, ಅದಕ್ಕೆ ಸರ್ಕಾರ ಕಾರಣವಲ್ಲ. ಹರ್ಯಾಣದಲ್ಲಿ ದಲಿತ ಮಕ್ಕಳ ಜೀವಂತ ದಹನಕ್ಕೆ ಸಂಬಂಧಿಸಿದಂತೆ ಸಚಿವರ ಹೇಳಿಕೆ.
ಪಿ.ಬಿ. ಆಚಾರ್ಯ,ಅಸ್ಸಾಂ ರಾಜ್ಯಪಾಲ: ''ಹಿಂದೂಸ್ತಾನ ಇರುವುದೇ ಹಿಂದೂಗಳಿಗೆ,'' 'ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲು ಸ್ವತಂತ್ರರು. ಅವರು ಬಯಸಿದರೆ ಪಾಕಿಸ್ತಾನಕ್ಕಾದರೂ ಹೋಗಬಹುದು, ಬಾಂಗ್ಲಾದೇಶಕ್ಕಾದರೂ ಹೋಗಬಹುದು.

ಫಾರೂಕ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ; ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದಲ್ಲಿದೆ ಮತ್ತು ಜಮ್ಮು ಕಾಶ್ಮೀರ ಭಾರತದಲ್ಲಿದೆ.  ಭಾರತದ ಇಡೀ ಸೇನೆ ಜೊತೆಗೂಡಿದರೂ, ಭಯೋತ್ಪಾದಕರು ಮತ್ತು ಉಗ್ರಗಾಮಿಗಳಿಂದ ಜಮ್ಮು - ಕಾಶ್ಮೀರವನ್ನು ರಕ್ಷಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಅಭಿಷೇಕ್ ಬ್ಯಾನರ್ಜಿ, ಮಮತಾ ಬ್ಯಾನರ್ಜಿ ಸಂಬಂಧಿ: ಪಶ್ಚಿಮ ಬಂಗಾಳ ಸರ್ಕಾರದ ಆಡಳಿತವನ್ನು ಯಾರಾದರು ಪ್ರಶ್ನಿಸಿದರೆ ಅಂತಹವರ ಕಣ್ಣನ್ನು ಕಿತ್ತು ಹಾಕುವುದಲ್ಲದೇ, ಕೈಗಳನ್ನು ಕತ್ತರಿಸಿ ಹಾಕುತ್ತೇವೆ.
ಯೋಗಿ ಆದಿತ್ಯ ನಾಥ, ಬಿಜೆಪಿ ಸಂಸದ: ಯೋಗ, ಸೂರ್ಯ ನಮಸ್ಕಾರ ವಿರೋಧಿಸುವವರನ್ನು ಸಮುದ್ರದಲ್ಲಿ ಮುಳುಗಿಸಬೇಕು ಇಲ್ಲವೇ ಭಾರತದಿಂದ ಹೊರಗೆ ಹಾಕಬೇಕು.
ಸಾಧ್ವಿ ಪ್ರಾಚಿ, ಉತ್ತರ ಪ್ರದೇಶ ಬಿಜೆಪಿ ನಾಯಕಿ:  ಸಲ್ಮಾನ್ ಖಾನ್ ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ಆತನಿಗೆ ಜಾಮೀನು ದೊರೆತಿದೆ ಎಂದು ಸಲ್ಮಾನ್ ಖಾನ್ ಗೆ ಜಾಮೀನು ದೊರೆತಿದೆ. ಸಲ್ಮಾನ್ ಖಾನ್ ಮುಸ್ಲಿಮ್ ಆಗಿಲ್ಲದೇ ಇದ್ದಲ್ಲಿ, ಹಿಟ್ ಅಂಡ್ ರನ್ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ದೊರೆಯುತ್ತಿತ್ತು ಎಂದು ಅಭಿಪ್
ಅಸಾದುದ್ದೀನ್ ಓವೈಸಿ, ಎಂಐಎಂ ಪಕ್ಷದ ಸಂಸದ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ನೀಡಿರುವುದಕ್ಕೆ ತಕರಾರು.  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಭಾರತ ರತ್ನ ನೀಡಿರುವುದು ತಪ್ಪು .

ಚನ್ನಬಸಪ್ಪ, ಶಿವಮೊಗ್ಗ ಬಿಜೆಪಿ ಮುಖಂಡ: ಗೋ ಮಾಂಸ ತಿನ್ನುತ್ತೇನೆ ಎಂದು ಹೇಳಿರುವ ಮುಖ್ಯಮಂತ್ರಿಯವರು ತಾಕತ್ತಿದ್ದರೆ ಶಿವಮೊಗ್ಗದ ಗೋಪಿ ವೃತ್ತಕ್ಕೆ ಬಂದು ದನದ ಮಾಂಸ ತಿಂದು ನೋಡಲಿ. ಗೋಮಾತೆಯ ಕುತ್ತಿಗೆಗೆ ಕೈ ಹಾಕುತ್ತೀರಾ ನೀವು? ಗೋಮಾಂಸವನ್ನು ತಿನ್ನುತ್ತೀನಿ ಎಂದು ರಾಜಾರೋಷವಾಗಿ ಹೇಳಿಕೆ ನೀಡುವ ಮುಖ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ರಾಜಸ್ಥಾನ: 12ನೇ ತರಗತಿ ವಿದ್ಯಾರ್ಥಿನಿ ಅಪಹರಿಸಿ, ಚಲಿಸುವ ಕಾರಿನಲ್ಲೇ ಗ್ಯಾಂಗ್ ರೇಪ್!

SCROLL FOR NEXT