ಬೆಂಗಳೂರಿನಲ್ಲಿ ಬಿಸಿಲಿನ ಧಗೆ..... ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಧಗೆ ಹೆಚ್ಚಾಗುತ್ತಿದ್ದು, ರೇಸ್ ಕೋರ್ಸ್ ರಸ್ತೆಯಲ್ಲಿ ಬುಧವಾರ ಬಾಯಾರಿದ ಪಾರಿವಾಳಗಳು ಕಾಣಿಸಿದ್ದು ಹೀಗೆ.
ಜಾನುವಾರ ಜಾತ್ರೆ.... ಶುಕ್ರವಾರ ನಡೆದ ಬಾಗಲಕೋಟೆಯ ಮೋಟಗಿ ಬಸವೇಶ್ವರ ಜಾನುವಾರ ಜಾತ್ರೆಯಲ್ಲಿ ಕಂಡುಬಂದ ದೃಶ್ಯ.ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ.... ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಬೀಚ್ ನಲ್ಲಿ ತಮ್ಮ ಮರಳು ಶಿಲ್ಪದ ಮೂಲಕ ಭಯೋತ್ಪಾದನೆ ವಿರುದ್ಧ ಭಾರತ ಹೃದಯಪೂರ್ವಕವಾಗಿ ಒಂದಾಗಬೇಕು ಎಂಬ ಸಂದೇಶ ನೀಡಿದ್ದಾರೆ.ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ.... ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಶುಕ್ರವಾರ ಬೆಂಗಳೂರಿನ ವಾಗ್ದೇವಿ ವಿಲಾಸ ಶಾಲೆಯಲ್ಲಿ ಈ ಮರಳು ಶಿಲ್ಪವನ್ನು ರಚಿಸುವ ಮೂಲಕ ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.ಗಾಂಧಿ ಪ್ರತಿಮೆ ಮುಂದೆ ಮಮತಾ ಪ್ರಾರ್ಥನೆ.... ಸಂಸತ್ ಭವನದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಬಿಜೆಪಿ ಸರ್ಕಾರವನ್ನು ಕೇಂದ್ರದಿಂದ ಕಿತ್ತೊಗೆಯುವಂತೆ ಬುಧವಾರ ಪ್ರಾರ್ಥಿಸಿದರು.ಕಲಾವಿದರ ಸೆಲ್ಫಿ ಸಂಭ್ರಮ.... ಆಗ್ರಾದ ತಾಜ್ ಮಹಲ್ ಬಳಿ ಜಾನಪದ ಕಲಾವಿದರು ಶನಿವಾರ ಸೆಲ್ಫಿ ತೆಗೆದು ಸಂಭ್ರಮಿಸಿದ್ದು ಹೀಗೆ.ಶಿಮ್ಲಾದಲ್ಲಿ ಹಿಮರಾಶಿ...... ಶಿಮ್ಲಾದಲ್ಲಿ ಹಿಮದಿಂದ ತುಂಬಿದ ರಸ್ತೆಗಳು ಶುಕ್ರವಾರ ಕಾಣಿಸಿದ್ದು ಹೀಗೆ.ಕರ್ನಾಟಕ ಕುಸ್ತಿ ಹಬ್ಬ..... ದೇಶೀ ಕ್ರೀಡೆ ಕುಸ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ಕರ್ನಾಟಕ ಕುಸ್ತಿ ಹಬ್ಬಕ್ಕೆ ಗುರುವಾರ ಚಾಲನೆ ನೀಡಲಾಯಿತು.ದಶಕದ ಸಂಭ್ರಮ.... ಮುಂಬೈನಲ್ಲಿ ಸೋಮವಾರ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಹಾಗೂ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ತಮ್ಮ ಸ್ಲಮ್ ಡಾಗ್ ಮಿಲಿಯನೇರ್ ಚಿತ್ರದ ದಶಕದ ಸಂಭ್ರಮ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಹೀಗೆ.ಕುಂಭಮೇಳದ ವೈಮಾನಿಕ ನೋಟ.... ಅಲಹಬಾದ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಮೌನಿ ಅಮವಾಸ್ಯೆ ದಿನವಾದ ಸೋಮವಾರ ಕಂಡುಬಂದ ವೈಮಾನಿಕ ನೋಟ.Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics