2020ನೇ ಇಸವಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದು ಕೊರೋನಾ ವೈರಸ್ ನಿಂದ. ಪಡಬಾರದ ಕಷ್ಟಗಳನ್ನು ಜನರು ಪಟ್ಟರು. ಆದರೆ ಅದರಿಂದ ಜನರು ಕನಸು, ಆಸೆಗಳನ್ನು ಕಳೆದುಕೊಂಡಿಲ್ಲ, 2021ನೇ ಇಸವಿಗೆ ಕಾಲಿಟ್ಟಿದ್ದು ಒಂದಷ್ಟು ಆಸೆ, ಆಕಾಂಕ್ಷೆಗಳು, ಕನಸುಗಳನ್ನು ಹೊತ್ತು ಮುಂದಡಿಯಿಟ್ಟಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿಯ ಒಪೆರಾ ಹೌಸ್ ಮತ್ತು ಹಾರ್ಬರ್ ಬ್ರಿಡ್ಜ್ ನಲ್ಲಿ ಹೊಸ ವರ್ಷಾಚರಣೆ 2021 ಕಂಡುಬಂದದ್ದು ಹೀಗೆ. ಸಾಮಾನ್ಯವಾಗಿ ಪ್ರತಿವರ್ಷ ಹೊಸ ವರ್ಷಾಚರಣೆ ಸಂಭ್ರಮ ಇಲ್ಲಿ ಮುಗಿಲುಮುಟ್ಟುತ್ತದೆ. ಸಿಡ್ನಿ ಬಂದರು ತೀರದಲ್ಲಿ ಈ ದಿನ ಸುಮಾರು 10 ಲಕ್ಷ ಜನ ಸೇರಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಆದರೆ ಈನ್ಯೂಜಿಲ್ಯಾಂಡ್ ನ ಔಕ್ನಾಂಡ್ ನ ಸ್ಕೈ ಟವರ್ ನಲ್ಲಿ ಹೊಸ ವರ್ಷ 2021ನ್ನು ಸ್ವಾಗತಿಸಿದ್ದು ಹೀಗೆ. ನ್ಯೂಜಿಲ್ಯಾಂಡ್ ಮತ್ತು ಅದರ ದಕ್ಷಿಣ ಫೆಸಿಫಿಕ್ ದ್ವೀಪದಲ್ಲಿ ಕೊರೋನಾ ಸೋಂಕು ಇಲ್ಲ, ಹೀಗಾಗಿ ಎಂದಿನಂತೆ ನಿನ್ನೆ ಕೂಡ ಹೊಸ ವರ್ಷ ಸಂಭ್ರಮಾಚರಣೆ ನೆರವೇರಿತು.ತೈವಾನ್ ನ ತೈಪೈ 101 ಕಟ್ಟಡದಲ್ಲಿ ನಿನ್ನೆ ಕಂಡುಬಂದ ಪಟಾಕಿ ಹಚ್ಚುವಿಕೆಯ ದೃಶ್ಯಜಕಾರ್ತದ ಹೊಟೇಲ್ ಇಂಡೋನೇಷಿಯಾ ರೌಂಡಬೌಟ್ ನಲ್ಲಿ ನಿನ್ನೆ ಕಂಡು ಬಂದ ದೃಶ್ಯ.ಜಕಾರ್ತದ ಇದೇ ಹೊಟೇಲ್ ನಲ್ಲಿ ಡಿಸೆಂಬರ್ 31, 2016ರಲ್ಲಿ ಜನದಟ್ಟಣೆ ಸೇರಿ ಕಂಡುಬಂದದ್ದು ಹೀಗೆ.ಟೊಕ್ಯೊದ ಸೆನ್ಸೊಜಿ ದೇವಾಲಯಕ್ಕೆ ನಿನ್ನೆ ಭೇಟಿ ನೀಡಿದ ಜನತೆ.ಇದು ಹೊಸ ದಶಕದ ಆರಂಭವಾಗಿರಬಹುದು. ಆದರೆ ಇನ್ನೂ ಕೊರೋನಾ ವೈರಸ್ ಹೋಗಿಲ್ಲ, ಚಿತ್ರದಲ್ಲಿ ಮಹಿಳೆಯೊಬ್ಬರು ಮಾಸ್ಕ್ ಧರಿಸಿಕೊಂಡು ಪಬ್ ಸಮೀಪ ನಡೆದುಕೊಂಡು ಹೋಗುತ್ತಿದ್ದಾರೆ. ಇದು ಕಂಡುಬಂದಿದ್ದು ಬ್ರುಝೆಲ್ಸ್ ನಲ್ಲಿ.ತೆರೆಯ ಮೇಲೆ ಫಿಯೊನಿಕ್ಸ್ ಕಂಡುಬರುತ್ತಿದೆ. ಚೀನಾದ ಬೀಜಿಂಗ್ ನಲ್ಲಿ ಕಟ್ಟಡ ಮುಂದೆ ಸೆಕ್ಯುರಿಟಿ ಗಾರ್ಡ್ ನಿಂತಿದ್ದಾರೆ.ಭಾರತದಲ್ಲಿ ಹೊಸ ದಶಕ ಆರಂಭದ ವರ್ಷದಲ್ಲಿ ಜನರಲ್ಲಿ ಇರುವ ಬಹುದೊಡ್ಡ ಭರವಸೆ ಕೊರೋನಾ ವೈರಸ್ ಗೆ ಲಸಿಕೆ ಬರಬಹುದು ಎಂದು. ಅಹ್ಮದಾಬಾದ್ ನಲ್ಲಿ ಜನರು 2021ನ್ನು ಸ್ವಾಗತಿಸಲು ಫಲಕಗಳನ್ನು ಹಿಡಿದುಕೊಂಡಿರುವುದು.