ಉಕ್ರೇನ್ ಮೇಲಿನ ರಷ್ಯಾ ದಾಳಿ ತೀವ್ರವಾಗಿದ್ದು ಹೆಚ್ಚು ಕ್ರೂರ ಮತ್ತು ವಿವೇಚನೆಯಿಲ್ಲದ ತಿರುವು ಪಡೆಯುತ್ತಿದ್ದು, ಪಾಶ್ಚಿಮಾತ್ಯ ದೇಶಗಳಿಂದ ಹೆಚ್ಚುತ್ತಿರುವ ಎಚ್ಚರಿಕೆಗಳ ನಡುವೆಯೇ ಬಂದರು ನಗರ ಮಾರಿಯುಪೋಲ್‌ನಲ್ಲಿ ಹೆರಿಗೆ ಆಸ್ಪತ್ರೆ ರಷ್ಯಾ ವೈಮಾನಿಕ ದಾಳಿಗೆ ಧ್ವಂಸಗೊಂಡಿದೆ. 
ಇತರೆ

ಉಕ್ರೇನ್ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾದ ವೈಮಾನಿಕ ದಾಳಿ; ಗರ್ಭಿಣಿ ಮಹಿಳೆಯರ ಪರದಾಟ

ಉಕ್ರೇನ್ ಮೇಲಿನ ರಷ್ಯಾ ದಾಳಿ ತೀವ್ರವಾಗಿದ್ದು ಹೆಚ್ಚು ಕ್ರೂರ ಮತ್ತು ವಿವೇಚನೆಯಿಲ್ಲದ ತಿರುವು ಪಡೆಯುತ್ತಿದ್ದು, ಪಾಶ್ಚಿಮಾತ್ಯ ದೇಶಗಳಿಂದ ಹೆಚ್ಚುತ್ತಿರುವ ಎಚ್ಚರಿಕೆಗಳ ನಡುವೆಯೇ ಬಂದರು ನಗರ ಮಾರಿಯುಪೋಲ್‌ನಲ್ಲಿ ಹೆರಿಗೆ ಆಸ್ಪತ್ರೆ ರಷ್ಯಾ ವೈಮಾನಿಕ ದಾಳಿಗೆ ಧ್ವಂಸಗೊಂಡಿದೆ.

ಮರಿಯುಪೋಲ್ ಹೆರಿಗೆ ಆಸ್ಪತ್ರೆ ಸಂಕೀರ್ಣದಲ್ಲಿ ಸಂಭವಿಸಿದ ಸರಣಿ ಸ್ಫೋಟದಿಂದಾಗಿ ಸುತ್ತಮುತ್ತಲ ಪ್ರದೇಶದ ನೆಲವು ಒಂದು ಮೈಲಿಗಿಂತಲೂ ಹೆಚ್ಚು ದೂರ ನಡುಗಿದ ಅನುಭವ ಉಂಟಾಗಿದೆ. ದಾಳಿಯಿಂದಾಗಿ ಒಂದು ಕಟ್ಟಡದ ಮುಂಭಾಗದ ಬಹುಭಾಗವನ್ನು ಧ್ವಂಸಗೊಂಡಿದೆ.
ಸಂತ್ರಸ್ತರನ್ನು ಸ್ಥಳಾಂತರಿಸಲು ಪೊಲೀಸರು ಮತ್ತು ಸೈನಿಕರು ಘಟನಾ ಸ್ಥಳಕ್ಕೆ ಧಾವಿಸಿ, ಗರ್ಭಿಣಿ ಮತ್ತು ರಕ್ತಸ್ರಾವದ ಮಹಿಳೆಯರನ್ನು ಸ್ಟ್ರೆಚರ್‌ನಲ್ಲಿ ಸಾಗಿಸಿದ್ದಾರೆ.
ಹೋರಾಟ ಆರಂಭವಾದಾಗಿನಿಂದ ಆರೋಗ್ಯ ಸೌಲಭ್ಯಗಳು ಮತ್ತು ಆಂಬ್ಯುಲೆನ್ಸ್‌ಗಳ ಮೇಲೆ 18 ದಾಳಿಗಳು ನಡೆದಿದ್ದು, 10 ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಉಕ್ರೇನ್‌ನ ಮಾರಿಯುಪೋಲ್‌ನಲ್ಲಿ ಶೆಲ್ ದಾಳಿಯಿಂದ ಹಾನಿಗೊಳಗಾದ ಅಪಾರ್ಟ್ಮೆಂಟ್ ಕಟ್ಟಡದ ಮುಂದೆ ವ್ಯಕ್ತಿಯೊಬ್ಬ ಬೈಸಿಕಲ್ ಸವಾರಿ ಮಾಡುತ್ತಿರುವುದು.
ಉಕ್ರೇನ್‌ನ ಕೀವ್‌ನಲ್ಲಿನ ಚಿಕಿತ್ಸೆಯ ಸರದಿ ನಿರ್ಧಾರದ ಹಂತದಲ್ಲಿ ಇರ್ಪಿನ್‌ನಿಂದ ಸ್ಥಳಾಂತರಿಸಲ್ಪಟ್ಟ ಅಳುತ್ತಿರುವ ಮಹಿಳೆಯನ್ನು ಸಾಂತ್ವನಗೊಳಿಸಲು ವ್ಯಕ್ತಿ ಪ್ರಯತ್ನಿಸುತ್ತಿದ್ದರು.
ಉಕ್ರೇನ್‌ನ ಕೀವ್‌ನ ಹೊರವಲಯದಲ್ಲಿರುವ ಇರ್ಪಿನ್‌ನಿಂದ ನಾಗರಿಕರನ್ನು ಸ್ಥಳಾಂತರಿಸುವ ವಾಹನಗಳ ಬೆಂಗಾವಲು ವಾಹನಗಳು ಪ್ರತಿ ದಾಳಿಯಲ್ಲಿ ನಾಶವಾದ ರಷ್ಯಾದ ಟ್ಯಾಂಕ್‌ನ ಹಿಂದೆ ಚಲಿಸುತ್ತಿವೆ.
ಉಕ್ರೇನ್‌ನ ಕೀವ್‌ನ ಹೊರವಲಯದಲ್ಲಿರುವ ಇರ್ಪಿನ್‌ನಿಂದ ನಾಗರಿಕರನ್ನು ಸ್ಥಳಾಂತರಿಸುತ್ತಿರುವಾಗ ಪುಟ್ಟ ಕಂದವೊಂದು ಕಿಟಿಕಿ ಮೂಲಕ ನೋಡುತ್ತಿತ್ತು.
ಉಕ್ರೇನಿಯನ್ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶಗಳಿಂದ ಸ್ಥಳಾಂತರಿಸಲ್ಪಟ್ಟ ಕುಟುಂಬಗಳು ಉಕ್ರೇನ್‌ನ ಕೀವ್‌ನಲ್ಲಿ ಚಿಕಿತ್ಸೆಗಾಗಿ ಬಂದಾಗ ಸಿಬ್ಬಂದಿ ಎರಡು ಶಿಶುವೊಂದನ್ನು ತಾಯಿಗೆ ನೀಡುತ್ತಿರುವುದು.
ಇರ್ಪಿನ್‌ನಲ್ಲಿ ನಾಶವಾದ ರಷ್ಯಾದ ಟ್ಯಾಂಕ್‌ನ ಪಕ್ಕದಲ್ಲಿ ದೊಡ್ಡ ಕ್ಯಾಲಿಬರ್ ಮದ್ದುಗುಂಡುಗಳು ನೆಲದ ಮೇಲೆ ಬಿದ್ದಿರುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT