ಯಾವುದೇ ದಿನ, ಯಾವುದೇ ಸಮಯದಲ್ಲಿ, ಎಲ್ಲಿಯೇ ಇರಲಿ ಭಾರತೀಯರ ಪಾಲಿಗೆ ಅತ್ಯುತ್ತಮ ಆರಾಮದಾಯಕ ಆಹಾರ ಇಡ್ಲಿ ಎಂದು ಪರಿಗಣಿಸಲಾಗಿದೆ.ಇಡ್ಲಿಯ ಮೊದಲ ಉಲ್ಲೇಖವು 9 ನೇ ಶತಮಾನದ ಕನ್ನಡ ಗದ್ಯ ಶಿವಕೋಟ್ಯಾಚಾರ್ಯರ 'ವಡ್ಡಾರಾಧನೆ' ಯಲ್ಲಿದೆ. ಇಡ್ಲಿ ಕನಿಷ್ಠ 1500 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತಿದೆ.
ವಿಶ್ವ ಇಡ್ಲಿ ದಿನವನ್ನು ಪ್ರತಿ ವರ್ಷ ಮಾರ್ಚ್ 30 ರಂದು ಆಚರಿಸಲಾಗುತ್ತದೆ. ತಜ್ಞರ ಪ್ರಕಾರ, ವಿಶ್ವ ಇಡ್ಲಿ ದಿನವನ್ನು ಚೆನ್ನೈನ ಪ್ರಸಿದ್ಧ ಇಡ್ಲಿ ಅಡುಗೆ ಮಾಡುವ ಎನಿಯವನ್ ಪ್ರಾರಂಭಿಸಿದರು. ಇಡ್ಲಿ ಭಾರತ ದೇಶದಲ್ಲಿ ಜನಪ್ರಿಯ ಉಪಹಾರವಾಗಿದೆ.ಇಡ್ಲಿ ದಿನವನ್ನು ಮೊದಲು ಆಚರಿಸಲು ಆರಂಭವಾಗಿದ್ದು 2015ರಲ್ಲಿ. ಚೆನ್ನೈ ಮೂಲದ ಪಾಕಶಾಸ್ತ್ರಜ್ಞ ಎನಿಯವನ್ 1,328 ವಿಧದ ಇಡ್ಲಿಗಳನ್ನು ತಯಾರಿಸಿದ್ದರಂತೆ.ಇಡ್ಲಿ ಜೊತೆ ಕಾಂಬೊ ಉದ್ದಿನ ವಡೆ. ಇಡ್ಲಿ-ವಡೆ ಕಾಂಬಿನೇಷನ್ ಗೆ ಸಾಂಬಾರ್ ಸೇರಿಸಿ ತಿಂದರೆ ಸ್ವರ್ಗಸುಖ.ಇಡ್ಲಿ ದಕ್ಷಿಣ ಭಾರತದಲ್ಲಿ ಮತ್ತು ಶ್ರೀಲಂಕಾದ ಉತ್ತರ ಭಾಗದಲ್ಲಿ ಪ್ರಮುಖ ಡಿಶ್ ಆಗಿದೆ.ಆರೋಗ್ಯಕ್ಕೆ ಸುರಕ್ಷಿತ ಇಡ್ಲಿ ಸೇವನೆ ಎಂದು ಪರಿಗಣಿಸಲಾಗುತ್ತಿದ್ದು ಪ್ರತಿ ಇಡ್ಲಿಯಲ್ಲಿ 39 ಕ್ಯಾಲೊರಿಗಳಿದ್ದು ಪರಿಷ್ಕರಿಸಿದ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇರುವುದಿಲ್ಲವಂತೆ. ಇಡ್ಲಿ ಸುಲಭವಾಗಿ ಜೀರ್ಣವಾಗುವ ಪದಾರ್ಥ. ಇಡ್ಲಿ ಪೌಷ್ಟಿಕಾಂಶಯುಕ್ತ ಎಂದು ಸಹ ಹೇಳಲಾಗುತ್ತದೆ. ಇದರಲ್ಲಿ ಕಾರ್ಬೊಹೈಡ್ರೇಟ್, ಫೈಬರ್ತವಾ ಪೋಡಿ ಇಡ್ಲಿ ಮಸಾಲ ಅತ್ಯಂತ ರುಚಿಕರವಾಗಿರುತ್ತದೆ ಎನ್ನುತ್ತಾರೆ ಇಡ್ಲಿಪ್ರಿಯರು. ಪೋಡಿ ರುಚಿಕರವಾದ ದಕ್ಷಿಣ ಭಾರತದ ಪುಡಿಯಾಗಿದ್ದು, ತುಪ್ಪದೊಂದಿಗೆ ಬೆರೆಸಿದಾಗ ಬಹಳ ರುಚಿಯಾಗಿರುತ್ತದೆ. ಇದಕ್ಕೆ ಸಾಕಷ್ಟು ತುಪ್ಪ ಸೇರಿಸುತ್ತಾರೆ. ಪೋಡಿಯೊಂದಿಗೆ ಅಕ್ಕಿ ಬೆರೆಸುವುದು ನನ್ನ ಪಟ್ಟಿಯಲ್ಲಿ ಮುಂದಿನ ವಿಷಯ.ಇಡ್ಲಿ ಯಾವುದೇ ಸಮಯದಲ್ಲಿ ನೆಚ್ಚಿನ ಉಪಹಾರವಾಗಿದೆ....ಸಂತೋಷ ಅಥವಾ ದುಃಖ, ಖಿನ್ನತೆಯಿರಲಿ, ಅನಾರೋಗ್ಯ ಅಥವಾ ಸಂಭ್ರಮಾಚರಣೆ, ಇಡ್ಲಿ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆವಿಯಲ್ಲಿ ಬೇಯಿಸಿದ ಇಡ್ಲಿಗಳು ಹೊಟ್ಟೆಗೆ ಆರೋಗ್ಯದಾಯಕ. ಇತ್ತೀಚೆಗೆ ಅನೇಕ ಹೊಟೇಲ್ ಗಳಲ್ಲಿ ಇಡ್ಲಿಗಳ ಮೇಲೆ ವಿವಿಧ ಡಿಶ್ ಗಳನ್ನು ಹಾಕದಕ್ಷಿಣ ಭಾರತದ ಉಪಹಾರದಲ್ಲಿ ಖ್ಯಾತವಾಗಿರುವ ಇಡ್ಲಿ ಭಾರತಕ್ಕೆ ಆಗಮನವಾಗಿದ್ದು ಇಂಡೋನೇಷಿಯಾದಿಂದ 800ರಿಂದ 1200 ಸಿಇ(Comman Era)ದಲ್ಲಿಯಂತೆ. ಇದರಲ್ಲಿ ಬಿ ವಿಟಮಿನ್ ಹೇರಳವಾಗಿರುತ್ತದೆಯಂತೆ.ಇನ್ನೊಂದು ಆಸಕ್ತಿಕರ ವಿಚಾರವೆಂದರೆ ರವೆ ಇಡ್ಲಿಯನ್ನು ಎರಡನೇ ವಿಶ್ವಯುದ್ಧದ ಸಮಯದಲ್ಲಿ ಕರ್ನಾಟಕದಲ್ಲಿ ಆವಿಷ್ಕರಿಸಲಾಯಿತಂತೆ. ಯುದ್ಧದ ಸಮಯದಲ್ಲಿ ಅಕ್ಕಿ ಪೂರೈಕೆ ಕುಂಠಿತವಾಗಿತ್ತು. ಆಗ ಜನರು ಹಸಿವು ನಿವಾರಿಸಿಕೊಳ್ಳಲು ಬೇರೆ ಬೇರೆ ರೀತಿಯ ಆಹಾರ ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾಗ ರವೆ ಇಡ್ಲಿಯನ್ನು ತಯಾರಿFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos