ದೇಶ

ಹೊಸ ಸಮವಸ್ತ್ರ, ಮಿಂಚುವ ಬ್ಯಾಗು, ಹೊಸ ಪುಸ್ತಕಗಳು.. ಶಾಲೆ ಆರಂಭ

Sumana Upadhyaya
ಕೇರಳದ ಕೊಚ್ಚಿಯ ತೊಪ್ಪುಂಪಾಡಿ ಹೆಚ್ ಎಸ್ಎಸ್ ಲೇಡಿ ಗರ್ಲ್ಸ್ ಶಾಲೆಯಲ್ಲಿ ರಜೆ ಕಳೆದು ಬಂದ ಮಕ್ಕಳನ್ನು ಶಾಲೆಯಲ್ಲಿ ಸ್ವಾಗತಿಸಿದ್ದು ಹೀಗೆ..

ಕೇರಳದ ಕೊಚ್ಚಿಯ ತೊಪ್ಪುಂಪಾಡಿ ಹೆಚ್ ಎಸ್ಎಸ್ ಲೇಡಿ ಗರ್ಲ್ಸ್ ಶಾಲೆಯಲ್ಲಿ ರಜೆ ಕಳೆದು ಬಂದ ಮಕ್ಕಳನ್ನು ಶಾಲೆಯಲ್ಲಿ ಸ್ವಾಗತಿಸಿದ್ದು ಹೀಗೆ..<br><br>
ಶಾಲೆಯಲ್ಲಿ ಮೊದಲ ದಿನ ಎಲ್ಲಾ ಮಕ್ಕಳಿಗೂ ನೆನಪಿನಲ್ಲುಳಿಯುವ ವಿಷಯ. ಮನೆಯಲ್ಲಿ ಅಪ್ಪ-ಅಮ್ಮನನ್ನು ಬಿಟ್ಟು ಹೊಸ ಮುಖಗಳನ್ನು ಎದುರುಗೊಳ್ಳುವ ಸಮಯ.


ಶಾಲೆಯ ಶಿಕ್ಷಣವೆಂದರೆ ಮಕ್ಕಳ ಪಾಲಿಗೆ ಕತ್ತಲೆಯನ್ನು ಕಳೆದು ದೀಪ ಹಚ್ಚುವ ಸಮಯ. ತಿರುವನಂತಪುರದ ಶಾಲೆಯೊಂದರಲ್ಲಿ ಆರಂಭದ ದಿನ ಜ್ಞಾನದ ದೀವಿಗೆಯ ಸಂಕೇತವಾಗಿ ದೀಪವನ್ನು ಹಚ್ಚಲಾಯಿತು.

ಹೊಸ ಸಮವಸ್ತ್ರ ಮತ್ತು ಹೊಸ ಪುಸ್ತಕ ಕೈಯಲ್ಲಿ ಹೊತ್ತು ಶಾಲೆಗೆ ತೆರಳುವ ಸಮಯದಲ್ಲಿ ವಿದ್ಯಾರ್ಥಿಗಳ ಮುಖದಲ್ಲಿ ಮುಗುಳ್ನಗೆ

ಆರಂಭದ ದಿನ ಹೊಸ ಮುಖಗಳನ್ನು ಕಂಡಾಗ ಮಕ್ಕಳ ಮೊಗದಲ್ಲಿ ಕುತೂಹಲ, ನಗು

ಶಾಲೆಯ ಆರಂಭದ ದಿನ ವರಾಂಡದಲ್ಲಿ ಕುಳಿತು ತಮ್ಮ ಟೀಚರ್ ಗಾಗಿ ಕಾಯುತ್ತಿರುವ ಮಕ್ಕಳು

ಶಾಲೆ ಮುಗಿದ ನಂತರ ಕೈ ಕೈ ಹಿಡಿದು ಮನೆಗೆ ಹಿಂತಿರುಗುತ್ತಿರುವ ಮಕ್ಕಳು

ಶಾಲೆಯ ಆರಂಭದ ತರಗತಿಯಲ್ಲಿ ಕೈಗೆ ಬಣ್ಣ ಹಚ್ಚಿಕೊಂಡು ಅಂಗೈಯ ಅಚ್ಚನ್ನು ಗೋಡೆಯಲ್ಲಿ ನೇತಾಡುತ್ತಿರುವ ಬಿಳಿ ಪರದೆಗೆ ಹಚ್ಚುತ್ತಿರುವುದು




SCROLL FOR NEXT