ದೇಶ

ಸಾಂಪ್ರದಾಯಿಕ ಮದ್ದು: ಅಸ್ತಮಾ ನಿಯಂತ್ರಣಕ್ಕೆ ರಾಮಬಾಣ ಈ ಮೀನು

Sumana Upadhyaya
ದೇಶದ ವಿವಿಧ ಭಾಗಗಳಿಂದ ಹೈದರಾಬಾದಿನ ನಿಜಾಮ ನಗರಕ್ಕೆ ಜನರು ಆಗಮಿಸಿದ್ದಾರೆ. ಮೀನಿನ ಔಷಧ ಸೇವಿಸಿದರೆ ಅಸ್ತಮಾ ಸಮಸ್ಯೆ ವಾಸಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿರುವುದು ಲಕ್ಷಾಂತರ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ.


ದೇಶದ ವಿವಿಧ ಭಾಗಗಳಿಂದ ಹೈದರಾಬಾದಿನ ನಿಜಾಮ ನಗರಕ್ಕೆ ಜನರು ಆಗಮಿಸಿದ್ದಾರೆ. ಮೀನಿನ ಔಷಧ ಸೇವಿಸಿದರೆ ಅಸ್ತಮಾ ಸಮಸ್ಯೆ ವಾಸಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿರುವುದು ಲಕ್ಷಾಂತರ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ.<br><br><br>
ಹೈದರಾಬಾದಿನ ನಂಪಲ್ಲಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಮೀನಿನ ಔಷಧ ವಿತರಣೆ ತುಂಬಾ ಜನಪ್ರಿಯ.
ಸಾರ್ವಜನಿಕರಿಗೆ ಈ ಔಷಧ ವಿತರಿಸುವ ಕಾರ್ಯಕ್ರಮವನ್ನು ಬಾತಿನಿ ಕುಟುಂಬ ಆಯೋಜಿಸಿಕೊಂಡು ಬರುತ್ತಿದೆ. 1845ರಿಂದ ಇದು ಆರಂಭವಾಗಿದ್ದು ಉಚಿತವಾಗಿ ಜನರಿಗೆ ಈ ಔಷಧ ನೀಡಲಾಗುತ್ತದೆ. 4 ಲಕ್ಷಕ್ಕೂ ಹೆಚ್ಚು ಜನರು ಈ ವರ್ಷ ಆಗಮಿಸುವ ನಿರೀಕ್ಷೆಯಿದ್ದು 450 ಕೆಜಿ ತೂಕದ ಔಷಧಿಯನ್ನು ತಯಾರಿಸುತ್ತಿದ್ದಾರೆ.

ಅಸ್ತಮಾವನ್ನು ದೂರವಾಗಿಸಲು ಮುರ್ರಲ್ ಫಿಂಗರ್ ಲಿಂಗ್ಸ್ ನ್ನು ಬಳಸಲಾಗುತ್ತದೆ. ಜೀವಂತ ಮೀನನ್ನು ರೋಗಿಯ ಗಂಟಲಿಗೆ ಹಾಕಲಾಗುತ್ತದೆ. ಸಸ್ಯಹಾರಿಗಳು ಬೆಲ್ಲದ ಮೂಲಕ ಇದನ್ನು ಸೇವಿಸುತ್ತಾರೆ,

ತಮ್ಮ ಕುಟುಂಬ ಸದಸ್ಯರಿಗೆ ಮಾತ್ರ ಶತಮಾನಗಳಿಂದ ಬಾತನಿ ಕುಟುಂಬ ಈ ವಿದ್ಯೆಯನ್ನು ಹೇಳಿಕೊಡುತ್ತಾ ಬಂದಿದೆ. ಗಿಡಮೂಲಿಕೆಗಳಿಂದ ತಯಾರಿಸುವ ಔಷಧಿ ಜೊತೆಗೆ ಜೀವಂತ ಮೀನನ್ನು ಗಂಟಲಿಗೆ ತುರುಕಲಾಗುತ್ತದೆ.

ಸಾರ್ವಜನಿಕರಿಗೆ ಔಷಧ ನೀಡಲು ಸುಮಾರು 1.32 ಲಕ್ಷ ಮುರ್ರೆಲ್ ಮೀನನ್ನು ರಾಜ್ಯದ ವಿವಿಧ ಕೆರೆಗಳಿಂದ ಸಂಗ್ರಹಿಸಿ ಬಾತನಿ ಕುಟುಂಬಕ್ಕೆ ಪೂರೈಸಲಾಗಿದೆ ಎನ್ನುತ್ತಾರೆ ತೆಲಂಗಾಣ ಸರ್ಕಾರದ ಪಶುಸಂಗೋಪಣಾ ಸಚಿವ ತಲಸನಿ ಶ್ರೀನಿವಾಸ್ ಯಾದವ್.

ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವಾಗ ಜನದಟ್ಟಣೆಯನ್ನು ನಿಯಂತ್ರಿಸಲು 150 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 1500 ಭದ್ರತಾ ಸಿಬ್ಬಂದಿ, 70 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.



SCROLL FOR NEXT