ದೇಶ

ಶತಮಾನದ ಮಹಿಳೆ ಇಂದಿರಾ ಗಾಂಧಿಯ 34ನೇ ಪುಣ್ಯತಿಥಿ

Sumana Upadhyaya
ಇಂದಿರಾ ಗಾಂಧಿಯವರ ರಾಜಕೀಯ ಜೀವನವಿಡೀ ವಿವಾದಗಳಿಂದ ಕೂಡಿತ್ತು.

ಇಂದಿರಾ ಗಾಂಧಿಯವರ ರಾಜಕೀಯ ಜೀವನವಿಡೀ ವಿವಾದಗಳಿಂದ ಕೂಡಿತ್ತು. <br><br>
ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿತಿ ಜಾರಿಗೆ ತಂದವರಲ್ಲಿ ಇಂದಿರಾ ಗಾಂಧಿ ಹೇಗೆ ಮೊದಲಿಗರೋ ಪ್ರಧಾನಿಯಾಗಿದ್ದಾಗ ಜೈಲು ಸೇರಿದವರಲ್ಲಿ ಕೂಡ ಮೊದಲಿಗರೇ.


ಇಂದಿರಾ ಗಾಂಧಿಯವರು ಪ್ರಧಾನಿಯಾಗಿ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಕೂಡ ತಂದಿದ್ದಾರೆ. 1967ರಲ್ಲಿ ಇವರ ಅಧಿಕಾರಾವಧಿಯಲ್ಲಿ ಭಾರತ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸಿತು. ಹಸಿರು ಕ್ರಾಂತಿಯನ್ನು ತಂದು ದೇಶದಲ್ಲಿ ಆಹಾರ ಕೊರತೆಯನ್ನು ನೀಗಿಸಲು ಯತ್ನಿಸಿದರು.

1975ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರಕ್ಕೆ ವಿರೋಧ ಪಕ್ಷದಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ದೇಶದ ಆರ್ಥಿಕತೆ, ಭ್ರಷ್ಟಾಚಾರ ವಿಷಯ ಎತ್ತಿಕೊಂಡು ಪ್ರತಿಭಟನೆ ನಡೆಸಿದವು. ಇಂದಿರಾ ಗಾಂಧಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದವು. ಆಗ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ಬದಲು ದೇಶದಲ್ಲು ತುರ್ತು ಪ
ಇಂದಿರಾ ಅವರ ರಾಜಕೀಯ ಮತ್ತು ವೈಯಕ್ತಿಕ ವರ್ಚಸ್ಸು ಅವರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಿತು.

1944ರಲ್ಲಿ ರಾಜೀವ್ ಗಾಂಧಿ ಜನಿಸಿದರೆ 1946ರಲ್ಲಿ ಸಂಜಯ್ ಗಾಂಧಿ ಹುಟ್ಟಿದರು. ಚಿತ್ರದಲ್ಲಿ ಇಂದಿರಾ, ರಾಜೀವ್, ಸಂಜಯ್ ಮತ್ತು ನೆಹರೂ ಇದ್ದಾರೆ.


1942ರಲ್ಲಿ ಪತ್ರಕರ್ತ ಫಿರೋಜ್ ಗಾಂಧಿಯನ್ನು ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಬ್ರಿಟಿಷರಿಂದ ಜೈಲಿಗೆ ಹೋಗಬೇಕಾಯಿತು. ಇಂದಿರಾ ಗಾಂಧಿ ವೈವಾಹಿಕ ಬದುಕು ಅಷ್ಟು ಸುಖಕರವಾಗಿರಲಿಲ್ಲ. ಈ ಚಿತ್ರ ಇಂದಿರಾ ವಿವಾಹ ಅಲಹಾಬಾದ್ ನ ಆನಂದ್ ಭವನದಲ್ಲಿ ನಡೆದ ಕ್ಷಣ.

ಇಂದಿರಾ ಗಾಂಧಿ ಉತ್ತಮ ಶಿಕ್ಷಣವನ್ನು ಕೂಡ ಗಳಿಸಿದ್ದರು. ಭಾರತ ರತ್ನ ಪಡೆದ ಗಟ್ಟಿಗಿತ್ತಿ. ಎಐಸಿಸಿಯ ಅಧ್ಯಕ್ಷೆ ಹಾಗೂ ಎಐಸಿಸಿಯ ರಾಷ್ಟ್ರೀಯ ಆಂತರಿಕ ಮಂಡಳಿಯ ಅಧ್ಯಕ್ಷೆ ಕೂಡ ಆಗಿದ್ದರು.

ರಾಷ್ಟ್ರ ರಾಜಕಾರಣದಲ್ಲಿ ಅಂದು ನೆಹರೂ ಕುಟುಂಬ ಪ್ರಧಾನವಾಗಿದ್ದರಿಂದ ಇಂದಿರಾ ಗಾಂಧಿ 4 ವರ್ಷದ ಪುಟ್ಟ ಹುಡುಗಿಯಾಗಿದ್ದಾಗಲೇ ರಾಜಕಾರಣಿದ ಪರಿಸರದಲ್ಲಿಯೇ ಬೆಳೆದರು. ಅಲಹಾಬಾದ್ ನಲ್ಲಿದ್ದಾಗ ನೆಹರೂ ಕುಟುಂಬಕ್ಕೆ ಮಹಾತ್ಮಾ ಗಾಂಧಿ ಹತ್ತಿರವಾಗಿದ್ದರು. ಈ ಚಿತ್ರ 1924ರಲ್ಲಿ ಇಂದಿರಾ ಗಾಂಧಿ ಮಹಾತ್ಮಾ ಗಾಂಧಿ ಜೊತೆಗಿದ್
ಅಕ್ಟೋಬರ್ 31, 1984ರಲ್ಲಿ ಅವರ ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬೀಂತ್ ಸಿಂಗ್ ಅವರಿಂದಲೇ ಗುಂಡಿಕ್ಕಿ ಹತ್ಯೆಗೀಡಾದರು. ಒಟ್ಟು 31 ಗುಂಡುಗಳು ಅವರ ದೇಹ ಹೊಕ್ಕವು.ಅವರ ನಿವಾಸ ದೆಹಲಿಯಲ್ಲಿಯೇ ಹತ್ಯೆಗೀಡಾದರು.


SCROLL FOR NEXT