ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಭಗತ್ ಸಿಂಗ್ ಜನ್ಮದಿನವಿಂದು. ಇಂದಿನ ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯದ ಲ್ಯಾಲ್ ಪುರ್ ಜಿಲ್ಲೆಯಲ್ಲಿ 1907 ಸೆಪ್ಟೆಂಬರ್ 28ರಂದು ಜನನ. ಮಾರ್ಕ್ಸ್ ವಾದಿ ಸಮಾಜವಾದಿ ಕ್ರಾಂತಿಕಾರಕ. 23ರ ತರುಣನಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟದ ನೆಪದಲ್ಲಿ ಹುತಾತ್ಮರಾದರು. ಇಂದಿಗೂ ಯುವಜ 
ದೇಶ

ಭಗತ್ ಸಿಂಗ್: ಕ್ರಾಂತಿಕಾರಿ ಬಗ್ಗೆ ಗೊತ್ತಿರದ ಅಪರೂಪದ ಸಂಗತಿಗಳು

ಭಗತ್ ಸಿಂಗ್ ಒಬ್ಬ ಬಹುಮುಖ ನಟ, ಕಾಲೇಜು ದಿನಗಳಲ್ಲಿ ಅನೇಕ ಸ್ಟೇಜ್ ಶೋಗಳನ್ನು ನಡೆಸಿಕೊಡುತ್ತಿದ್ದರು. ಅವರು ಮಾಡುತ್ತಿದ್ದ ಪಾತ್ರಗಳಲ್ಲಿ ರಾಣಾ ಪ್ರತಾಪ್ ಮತ್ತು ಚಂದ್ರಗುಪ್ತ ಮೌರ್ಯ ಜನಪ್ರಿಯವಾದವು.


ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಭಗತ್ ಸಿಂಗ್ ಜೀವನದಲ್ಲಿ ಭಾರೀ ಪರಿಣಾಮ ಬೀರಿತ್ತು. 12ನೇ ವಯಸ್ಸಿನಲ್ಲಿ ಹತ್ಯಾಕಾಂಡ ನಡೆದ ಸ್ಥಳಕ್ಕೆ ಹೋಗಿ ಬಲಿಯಾದವರ ದೇಹದಿಂದ ಬಿದ್ದ ರಕ್ತದಲ್ಲಿ ಒದ್ದೆಯಾದ ಮಣ್ಣನ್ನು ಮನೆಗೆ ತಂದು ಸಂಗ್ರಹಿಸಿಟ್ಟಿದ್ದರು. ಅಂದೇ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡುವುದಾಗಿ
ಚಿಕ್ಕ ಬಾಲಕನಾಗಿದ್ದ ಭಗತ್ ಸಿಂಗ್ ತನ್ನ ಹೊಲದ ಜಮೀನಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಬಂದೂಕು, ಸಿಡಿಮದ್ದುಗಳನ್ನು ಬೆಳೆಸಬೇಕೆಂದು ಹೇಳುತ್ತಿದ್ದನಂತೆ. ಬೆಳೆಯ ಬದಲು ಗನ್ ಬೆಳೆದರೆ ಶತ್ರುಗಳ ಜೊತೆ ಹೋರಾಡಲು ಸುಲಭ ಎಂಬ ಯೋಚನೆ ಬಾಲಕನಿಗೆ.

ಭಗತ್ ಸಿಂಗ್ ಒಬ್ಬ ಅವ್ಯಾಹತ ಓದುಗಾರ ಮಾತ್ರವಲ್ಲದೆ ಬರಹಗಾರರು ಕೂಡ ಆಗಿದ್ದರು. ಆ ಸಮಯದಲ್ಲಿ ಪತ್ರಿಕೆಗಳಿಗೆ ಬರೆಯುತ್ತಿದ್ದರು. ಜೈಲಿನಲ್ಲಿರುವಾಗ ಕರಪತ್ರಗಳನ್ನು ಬರೆಯುತ್ತಿದ್ದರು. ಅವುಗಳಲ್ಲೊಂದು ''ನಾನು ಏಕೆ ನಾಸ್ತಿಕ'' ಎಂಬ ಕರಪತ್ರ ಅವರ ಬುದ್ಧಿಮತೆಯನ್ನು ತಿಳಿಸಿತ್ತಂತೆ.


ಕುಟುಂಬದವರು ಹೆಣ್ಣು ನೋಡುತ್ತಿದ್ದಾರೆ ಎಂದು ಗೊತ್ತಾದಾಗ ಮನೆ ಬಿಟ್ಟು ಖಾನ್ಪುರಕ್ಕೆ ಓಡಿ ಹೋದರಂತೆ. ನನ್ನ ಜೀವನ ಈ ದೇಶದ ಒಳಿತಿನ ಕಾರ್ಯಕ್ಕೆ ಮೀಸಲು, ದೇಶದ ಸ್ವಾತಂತ್ರ್ಯಕ್ಕೆ. ಹೀಗಾಗಿ ನನಗೆ ವಿಶ್ರಾಂತಿಯಿಲ್ಲ ಮತ್ತು ಈ ಇಹದ ಬಯಕೆಗಳಲ್ಲಿ ನನಗೆ ಆಸಕ್ತಿಯಿಲ್ಲ ಎಂದು ಬರೆದಿಟ್ಟು ಮನೆಬಿಟ್ಟು ಬಂದಿದ್ದರಂತೆ.
ಭಗತ್ ಸಿಂಗ್ ಗೆ ಶಿಕ್ಷೆ ಪ್ರಕಟವಾಗುವ ಒಂದು ಗಂಟೆಗೆ ಮುನ್ನ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಅವರ ಮೃತದೇಹವನ್ನು ಕುಟುಂಬ ವರ್ಗದವರಿಗೆ ನೀಡದೆ ಸಟ್ಲೆಜ್ ನದಿ ತೀರದಲ್ಲಿ ರಹಸ್ಯವಾಗಿ ದಹಿಸಲಾಯಿತು.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT