ದೇಶ

ಹಿನ್ನೋಟ 2019: ನಮ್ಮನ್ನಗಲಿದ ಗಣ್ಯರು, ಪ್ರಮುಖರು

Manjula VN
ಸಂತರ ಸಂತ, ಶಿಷ್ಯರ ಪಾಲಿನ ಮಾತೃರೂಪಿ ಗುರು, ಈ ಶತಮಾನ ಕಂಡ ಅತ್ಯಂತ ಶ್ರೇಷ್ಠ ವಿದ್ವಾಂಸ, ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ನ್ಯೂಮೋನಿಯಾದಿಂದಾಗಿ ಡಿಸೆಂಬರ್ 29 ರಂದು ಕೃಷ್ಣೈಕ್ಯರಾಗಿದ್ದರು. ವಿಶ್ವೇಶ ತೀರ್ಥ ಸ್ವಾಮೀಜಿಗಳಿಗೆ 88 ವರ್ಷ ವಯಸ್ಸಾಗಿತ್ತು.
ಸಂತರ ಸಂತ, ಶಿಷ್ಯರ ಪಾಲಿನ ಮಾತೃರೂಪಿ ಗುರು, ಈ ಶತಮಾನ ಕಂಡ ಅತ್ಯಂತ ಶ್ರೇಷ್ಠ ವಿದ್ವಾಂಸ, ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ನ್ಯೂಮೋನಿಯಾದಿಂದಾಗಿ ಡಿಸೆಂಬರ್ 29 ರಂದು ಕೃಷ್ಣೈಕ್ಯರಾಗಿದ್ದರು. ವಿಶ್ವೇಶ ತೀರ್ಥ ಸ್ವಾಮೀಜಿಗಳಿಗೆ 88 ವರ್ಷ ವಯಸ್ಸಾಗಿತ್ತು.
ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಶತಾಯುಷಿ ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಾಜಿಗಳು ವಯೋಸಹಜ ಕಾಯಿಲೆಯಿಂದಾಗಿ ಜನವರಿ 21 ರಂದು ಇಹಲೋಕ ತ್ಯಜಿಸಿದ್ದರು. ಶಿವಕುಮಾರ ಸ್ವಾಮೀಜಿಗಳಿಗೆ 111 ವರ್ಷ ವಯಸ್ಸಾಗಿತ್ತು.
ಸುಪ್ರೀಂಕೋರ್ಟ್, ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಗಳಲ್ಲಿ ಹಲವು ಮಹತ್ತರ ಪ್ರಕರಣಗಳಲ್ಲಿ ವಾದ ಮಂಡಿಸುವ ಮೂಲಕ ಕಾನೂನು ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿದ್ದ ರಾಮ್ ಜೇಠ್ಮಲಾನಿಯವರು ವಯೋಸಹಜ ಕಾಯಿಲೆಯಿಂದಾಗಿ ಸೆಪ್ಟೆಂಬರ್ 8 ರಂದು ಕೊನೆಯುಸಿರೆಳೆದಿದ್ದರು. ಜೇಠ್ಮಲಾನಿಯವರಿಗೆ 96 ವರ್ಷ ವಯಸ್ಸ
ರಂಗಭೂಮಿ ಹಿರಿಯ ಜೀವಿ, ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ.ಚೌಟ ಅವರು ಜೂನ್.19ರಂದು ವಯೋಸಹಜ ಕಾಯಿಲೆಯಿಂದಾಗಿ ನಿಧನಹೊಂದಿದ್ದರು. ಚೌಟ ಅವರಿಗೆ 82 ವರ್ಷ ವಯಸ್ಸಾಗಿತ್ತು.
ವಾಜಪೇಯಿ ಸರ್ಕಾರದ ಅವಧಿಯಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದ ಕರ್ನಾಟಕದ ಜಾರ್ಜ್ ಫರ್ನಾಂಡೀಸ್ ಅವರು ಜನವರಿ 29 ರಂದು ದೀರ್ಘಕಾಲದಿಂದ ಬಳಲುತ್ತಿದ್ದ ಆಲ್ಝೈಮರ್ ಎಂಬ ನೆನಪು ಶಕ್ತಿ ಕೊರತೆ ಮತ್ತು ಪಾರ್ಕಿನ್ಸನ್ ಎಂಬ ನರಕೋಶ ಸಂಬಂಧಿ ಕಾಯಿಲೆಗಳಿಂದಾಗಿ ಕೊನೆಯುಸಿರೆಳೆದಿದ್ದರು. ಜಾರ್ಜ ಅವರಿಗೆ 88 ವರ್ಷ ವಯಸ
ಕರ್ನಾಟಕ ಶಾಸ್ತ್ರೀಯ ಸಂಗೀತ ಪರಿಣತ, ಸ್ಯಾಕ್ಸೋಫೋನ್ ವಾದನದಿಂದ ಜಗದಗಲ ಕೀರ್ತಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಕದ್ರಿ ಗೋಪಾಲನಾಥ್ ಅವರು ತೀವ್ರ ಅನಾರೋಗ್ಯದಿಂದಾಗಿ ಅಕ್ಟೋಬರ್ 11 ವಿಧಿವಶರಾಗಿದ್ದರು. ಗೋಪಾಲನಾಥ ಅವರಿಗೆ 70 ವರ್ಷ ವಯಸ್ಸಾಗಿತ್ತು.
ಕನ್ನಡ ಸಾರಸ್ವತ ಲೋಕದ ದಿಗ್ಗಜ, ಸಿನಿಮಾ ನಟ, ನಿರ್ದೇಶಕ, ಜ್ಞಾನಪೀಠ ಪುರಸ್ಕೃ ಗಿರೀಶ್ ಕಾರ್ನಾಡ್ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಜೂನ್ 10 ರಂದು ಇಹಲೋಕ ತ್ಯಜಿಸಿದ್ದರು. ಕಾರ್ನಾಡ್ ಅವರಿಗೆ 81 ವರ್ಷ ವಯಸ್ಸಾಗಿತ್ತು.
ಹಿರಿಯ ನಾಹಿತಿ ಹಾಗೂ ಚಿಂತಕರಾಗಿದ್ದ ನಾಡೋಜ ಕೊ. ಚನ್ನಬಸಪ್ಪ ಅವರು ಫೆಬ್ರವರಿ 23 ರಂದು ವಯೋಸಹಜ ಖಾಯಿಲೆಯಿಂದಾಗಿ ವಿಧಿವಶರಾಗಿದ್ದರು. ಚನ್ನಬಸಪ್ಪ ಅವರಿಗೆ 96 ವರ್ಷ ವಯಸ್ಸಾಗಿತ್ತು.
ಕನ್ನಡದ ನಾಗರಹಾವು ಹಾಗೂ ತೆಲುಗಿನ ಅರುಂಧತಿ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ನಿರ್ದೇಶ ಕೋಡಿ ರಾಮಕೃಷ್ಣ ಅವರು, ಫೆಬ್ರವರಿ 22 ರಂದು ಶ್ವಾಸಕೋಶ ಸೋಂಕಿನಿಂದಾಗಿ ಇಹಲೋಕ ತ್ಯಜಿಸಿದ್ದರು, ರಾಮಕೃಷ್ಣ ಅವರಿಗೆ 69 ವರ್ಷ ವಯಸ್ಸಾಗಿತ್ತು.
ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಗೋವಾ ಪ್ರಸಿದ್ಧ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು, ಮಾರ್ಚ್ 17 ರಂದು ಕೊನೆಯುಸಿರೆಳೆದಿದ್ದರು. ಪರಿಕ್ಕರ್ ಅವರಿಗೆ 63 ವರ್ಷ ವಯಸ್ಸಾಗಿತ್ತು.
ಅಭಿನಯ ಚತುರ ಎಂದೇ ಖ್ಯಾತಿ ಪಡೆದಿದ್ದ ಖ್ಯಾತ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರು ಮೇ.2ರಂದು ವಯೋಸಹಜ ಕಾಯಿಲೆಯಿಂದಾಗಿ ಇಹಲೋಕ ತ್ಯಜಿಸಿದ್ದರು. ಹಿರಣ್ಣಯ್ಯ ಅವರಿಗೆ 84 ವರ್ಷ ವಯಸ್ಸಾಗಿತ್ತು.
ಕೂಡಲ ಸಂಗಮದ ಬಸವ ಧರ್ಮದ ಪೀಠಾಧ್ಯಕ್ಷೆ ಮಾತೆ ಮಹಾದೇವಿಯವರು ಮಾರ್ಚ್ 14 ರಂದು ಲಿಂಗೈಕೈರಾಗಿದ್ದರು. ಮಹಾದೇವಿಯವರಿಗೆ 73 ವರ್ಷ ವಯಸ್ಸಾಗಿತ್ತು.
ಚುನಾವಣಾ ಆಯೋಗಕ್ಕ ಎಷ್ಟರ ಮಟ್ಟಿಗೆ ಅಧಿಕಾರವಿದೆ ಎಂಬುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್ ಶೇಷನ್ ಅವರು ವಯೋಸಹಜ ಕಾಯಿಲೆಯಿಂದಾಗಿ ನವೆಂಬರ್ 11 ರಂದು ನಿಧನ ಹೊಂದಿದ್ದರು. ಶೇಷನ್ ಅವರಿಗೆ 87 ವರ್ಷ ವಯಸ್ಸಾಗಿತ್ತು.
ಕಾಂಗ್ರೆಸ್ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಅವರು ಹೃದಯಾಘಾತದಿಂದಾಗಿ ಜುಲೈ 20 ರಂದು ನಿಧನ ಹೊಂದಿದ್ದರು. ಶೀಲಾ ದೀಕ್ಷಿತ್ ಅವರಿಗೆ 81 ವರ್ಷ ವಯಸ್ಸಾಗಿತ್ತು.
ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿಯವರು ಮಾರ್ಚ್ 22 ರಂದು ಲಘು ಹೃದಯಾಘಾತದಿಂದಾಗಿ ಮಾರ್ಚ್ 22 ರಂದು ನಿಧನರಾಗಿದ್ದರು. ಶಿವಳ್ಳಿಯವರಿಗೆ 58 ವರ್ಷ ವಯಸ್ಸಾಗಿತ್ತು.
ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ ಭಕ್ತಧ್ರುವದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಹಿರಿಯ ನಟಿ ಎಸ್.ಕೆ. ಪದ್ಮಾವತಿಯವರು ಸೆಪ್ಟೆಂಬರ್ 19 ರಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ಪದ್ಮಾವತಿಯವರಿಗೆ 95 ವರ್ಷ ವಯಸ್ಸಾಗಿತ್ತು.
ಮಾಜಿ ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು, ಹೃದಯಾಘಾತದಿಂದಾಗಿ ಆಗಸ್ಟ್ 6 ರಂದು ಇಹಲೋಕ ತ್ಯಜಿಸಿದ್ದರು. ಸುಷ್ಮಾ ಸ್ವರಾಜ್ ಅವರಿಗೆ 67 ವರ್ಷ ವಯಸ್ಸಾಗಿತ್ತು.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಕೋಚ್ ರಮಾಕಾಂತ್ ಆಚ್ರೇಕರ್ ಅವರು ವಯೋಸಹದ ಕಾಯಿಲೆಯಿಂದಾಗಿ ಜನವರಿ 2 ರಂದು ಇಹಲೋಕ ತ್ಯಜಿಸಿದ್ದರು. ಅಚ್ರೇಕರ್ ಅವರಿಗೆ 87 ವರ್ಷ ವಯಸ್ಸಾಗಿತ್ತು.
ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಯಾಗಿ ನಿವೃತ್ತಿರಾಗಿದ್ದ ವೆಂಕಟಾಚಲಯ್ಯ ಅವರು ಹೃದಯಾಘಾತದಿಂದಾಗಿ ಅಕ್ಟೋಬರ್ 30 ರಂದು ವಿಧಿವಶರಾಗಿದ್ದರು. ವೆಂಕಟಾಚಲಯ್ಯ ಅವರಿಗೆ 89 ವರ್ಷ ವಯಸ್ಸಾಗಿತ್ತು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಮ ಅವರ ಅಳಿಯ, ಕೆಫೆ ಕಾಫಿ ಡೇ ಸಂಸ್ಥಾಪಕ ಹಾಗೂ ಉದ್ಯಮಿ ವಿ.ಜಿ.ಸಿದ್ಱಾರ್ಥ ಹೆಗಡೆಯವರು ಜುಲೈ 29 ರಂದು ಆತ್ಮಹತ್ಯೆಗೆ ಶರಣಾಗಿದ್ದರು, ಸಿದ್ಧಾರ್ಥ ಅವರಿಗೆ 60 ವರ್ಷ ವಯಸ್ಸಾಗಿತ್ತು.
SCROLL FOR NEXT