1998ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಕ್ಷಣಾ ಸಚಿವರಿಗೆ ವೈಜ್ಞಾನಿಕ ಸಲಹೆಗಾರರಾಗಿದ್ದವರು ಹಿರಿಯ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ.
ದೇಶ
ಡಾ ಎ ಪಿ ಜೆ ಅಬ್ದುಲ್ ಕಲಾಂ 4ನೇ ಪುಣ್ಯತಿಥಿ: ಒಂದು ಮೆಲುಕು
ಟಿಬೆಟ್ ನ ಧಾರ್ಮಿಕ ಗುರು ದಲೈ ಲಾಮಾ, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ರವಿಶಂಕರ್ ಗುರೂಜಿ ಅವರೊಂದಿಗೆ
ಅಂದಿನ ತಮಿಳು ನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರೊಂದಿಗೆ ಡಾ ಕಲಾಂ.
2004ರ ಸುನಾಮಿಯಲ್ಲಿ ಮಡಿದ ಮಕ್ಕಳ ನೆನಪಿಗಾಗಿ ನಾಗಪಟ್ಟಿಣಂನ ಕೀಚಂಕುಪ್ಪಮ್ ತೀರದಲ್ಲಿ ತೆಂಗಿನ ಸಸಿ ನೆಟ್ಟ ಕಲಾಂ.
ಕಲಾಂ ಅವರಿಗೆ ಮಕ್ಕಳೆಂದರೆ ಪಂಚಪ್ರಾಣ. 2005ರಲ್ಲಿ ಚೆನ್ನೈಯ ಶಾಲೆಯೊಂದರಲ್ಲಿ ಮಕ್ಕಳೊಂದಿಗೆ ಸಂತಸ ಕ್ಷಣದಲ್ಲಿ ಕಲಾಂ.
2004ರಲ್ಲಿ ಕಾರ್ಗಿಲ್ ನಲ್ಲಿ ಅಂದಿನ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎನ್ ಸಿ ವಿಜ್ ಜೊತೆಗೆ ಎಪಿಜೆ ಕಲಾಂ
2003ರಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಗೆ ಪದ್ಮಶ್ರೀ ಸನ್ಮಾನ.
ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರೊಂದಿಗೆ ಡಾ ಎ ಪಿ ಜೆ ಅಬ್ದುಲ್ ಕಲಾಂ
ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರೊಂದಿಗೆ ರಾಜಕೀಯ ನಾಯಕರು.
2002ರಲ್ಲಿ ತಮ್ಮ ನಿವಾಸದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಡನೆ ಡಾ ಎ ಪಿ ಜೆ ಅಬ್ದುಲ್ ಕಲಾಂ.
ಚಿತ್ರದಲ್ಲಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಜೊತೆಗೆ ಅಂದಿನ ಇಸ್ರೊ ಅಧ್ಯಕ್ಷ ಕಸ್ತೂರಿ ರಂಗನ್,
1931ರ ಅಕ್ಟೋಬರ್ 15ರಂದು ಜನಿಸಿದ ಡಾ ಎ ಪಿ ಜೆ ಅಬ್ದುಲ್ ಕಲಾಂ ಪಕ್ಷಾತೀತವಾಗಿ ರಾಜಕೀಯ ನಾಯಕರು ಮತ್ತು ಜನರು ಮೆಚ್ಚಿಕೊಂಡ ರಾಷ್ಟ್ರಪತಿ. ಈ ಚಿತ್ರ ಕಲಾಂ ಅವರು 2012ರಲ್ಲಿ ಬೆಂಗಳೂರಿನ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭ.
2010ನೇ ಇಸವಿಯಲ್ಲಿ ರೂರ್ಕೆಲಾಗೆ ರೈಲಿನಲ್ಲಿ ಬಂದಿಳಿದ ಡಾ ಎ ಪಿ ಜೆ ಅಬ್ದುಲ್ ಕಲಾಂ.