ದೇಶ

ಭಾರತೀಯ ವಾಯುಪಡೆಗೆ ಆನೆಬಲ: ಶತ್ರು ರಾಷ್ಟ್ರಗಳನ್ನು ನಡುಗಿಸುವ ಅಪಾಚೆ ಹೆಲಿಕಾಪ್ಟರ್ ಸಾಮರ್ಥ್ಯ!

Vishwanath S
ಅಪಾಚೆಯಲ್ಲಿ 30 ಎಂಎಂ ಚೈನ್ ಗನ್, ಎಐಎಂ-92 ಕ್ಷಿಪಣಿ, ಹೈಡ್ರಾ 70 ಎಂಎಂ ರಾಕೆಟ್ ಮತ್ತು ಸ್ಪೈಕ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಅಪಾಚೆಯಲ್ಲಿ 30 ಎಂಎಂ ಚೈನ್ ಗನ್, ಎಐಎಂ-92 ಕ್ಷಿಪಣಿ, ಹೈಡ್ರಾ 70 ಎಂಎಂ ರಾಕೆಟ್ ಮತ್ತು ಸ್ಪೈಕ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಹೆಲಿಕಾಪ್ಟರ್ ಗಳು ರಾಕೆಟ್‌ ಮತ್ತು ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ನಿಖರವಾಗಿ ಹಾಗೂ ನಿರ್ದಿಷ್ಟ ಸ್ಥಳದ ಮೇಲೆ ಕ್ಷಿಪಣಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.
ಬಿರುಗಾಳಿ ಹಾಗೂ ಭಾರೀ ಮಳೆ ಸೇರಿದಂತೆ ಯಾವುದೇ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲಿಯೂ ಅಡೆತಡೆಯಿಲ್ಲದೆ ಕಾರ್ಯಾಚರಣೆ ನಡೆಸಲಿದೆ.
ಪರ್ವತದ ಪ್ರದೇಶಗಳಲ್ಲಿ, ಮಂಜಿನ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಅಪಾಚೆ ಹೆಲಿಕಾಪ್ಟರ್ ಗಳು ಗುಡ್ಡಗಾಡು ಹಾಗೂ ಬೆಟ್ಟ ಪ್ರದೇಶಗಳಲ್ಲಿನ ಕಡಿದಾದ ಪ್ರದೇಶದಲ್ಲೂ ಸುಲಭವಾಗಿ ಇಳಿಯುವ ಸಾಮರ್ಥ್ಯ ಹೊಂದಿದೆ.
ಭೂಮಿಯ ಮೇಲ್ಬಾಗದಿಂದ ಎದುರಾಗುವ ದಾಳಿಯನ್ನೂ ಎದುರಿಸುವ ಸಾಮರ್ಥ್ಯ ಹೊಂದಿದ್ದು, ಯುದ್ಧದ ಸಂದರ್ಭದಲ್ಲಿ ಭೂ ಸೇನೆಗೆ ಪೂರಕವಾಗಿ ಕಾರ್ಯಾಚರಣೆಗೆ ಇವು ನೆರವಾಗಲಿವೆ.
ಯುದ್ದ ಭೂಮಿಯಿಂದ ನೇರ ನಿಯಂತ್ರಣ ಕೊಠಡಿಗಳಿಗೆ ಛಾಯಾಚಿತ್ರ ತೆಗೆದು ರವಾನೆ, ವಿನಿಮಯ ಮಾಡುವ ಸಾಮರ್ಥ್ಯ ಈ ಕಾಪ್ಟರ್ ಗಳಿಗಿದೆ. ಅಲ್ಲದೆ ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಈ ಬಹುಪಯೋಗಿ ಕಾಪ್ಟರ್ ಗಳನ್ನು ಬಳಕೆ ಮಾಡಬಹುದು.
ಅಪಾಚೆ ಎಹೆಚ್ 64E ಹೆಲಿಕಾಪ್ಟರ್ ಗಳು ಸೇನೆಯ ಬತ್ತಳಿಕೆಗೆ ಸೇರಿಸಿಕೊಳ್ಳುವ ಮೂಲಕ ಭಾರತೀಯ ವಾಯುಸೇನೆಯ ಸಾಮರ್ಥ್ಯ ವೃದ್ದಿಯಾಗಿದೆ.
ಗಂಟೆಗೆ 365 ಕಿ.ಮೀ ವೇಗ, ಭೂಮಿಯಿಂದ ಸುಮಾರು 2500 ಅಡಿ ಎತ್ತರದಲ್ಲಿ ಕಾದಾಡುವ ಸಾಮರ್ಥ್ಯ.
ಅಪಾಚೆ ಹೆಲಿಕಾಪ್ಟರ್
ಅಪಾಚೆ ಹೆಲಿಕಾಪ್ಟರ್
ಅಪಾಚೆ ಹೆಲಿಕಾಪ್ಟರ್
ಅಪಾಚೆ ಹೆಲಿಕಾಪ್ಟರ್
SCROLL FOR NEXT