ದೇಶ

ಕೊರೋನಾ ಭೀತಿ ಬೆನ್ನಲ್ಲೇ ನಡೆದ ವಿಶ್ವವಿಖ್ಯಾತ ಪೂರಿ ಜಗನ್ನಾಥ ಸ್ವಾಮಿ ರಥಯಾತ್ರೆ!

Vishwanath S
ಈ ರಥಯಾತ್ರೆ ಒಂದು ವಾರಗಳ ಕಾಲ ನಡೆಯಲಿದ್ದು, ರಥಯಾತ್ರೆಗೆ ನಿನ್ನೆಯಷ್ಟೇ ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತ್ತು.
ಈ ರಥಯಾತ್ರೆ ಒಂದು ವಾರಗಳ ಕಾಲ ನಡೆಯಲಿದ್ದು, ರಥಯಾತ್ರೆಗೆ ನಿನ್ನೆಯಷ್ಟೇ ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತ್ತು.
ರಥಯಾತ್ರೆಯಲ್ಲಿ ಕೇವಲ ದೇವಸ್ಥಾನದ ಸಿಬ್ಬಂದಿ ಮತ್ತು ಪುರೋಹಿತರು ಮಾತ್ರ ಭಾಗವಿಸಿದ್ದು, ಪೂಜಾ ಕಾರ್ಯಕ್ರಮಗಳು ಆರಂಭವಾಗುವುದಕ್ಕೂ ಮುಂಚೆಯೇ ದೇವಸ್ಥಾನದ ಸಂಕೀರ್ಣವನ್ನು ಸ್ಯಾನಿಟೈಸ್ ಮಾಡಲಾಗಿತ್ತು.
ಸಾಂಪ್ರದಾಯಿಕ ಪೂಜೆಗಳು ಆರಂಭವಾಗಿದ್ದು, ದೇವಸ್ಥಾನವನ್ನು ವರ್ಣರಂಜಿತವಾಗಿ ಸಜ್ಜುಗೊಳಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಪುರೋಹಿತರು ಸಾಂಪ್ರದಾಯಿಕ ಸಂಗೀತ ನುಡಿಸುತ್ತಿದ್ದು, ತಾಳಮದ್ದಳೆಗಳ ಶಬ್ಧಕ್ಕೆ ನೃತ್ಯ ಮಾಡುತ್ತಾ ಬಾಲಭದ್ರ ಪ್ರತಿಮೆಯನ್ನು ರಥದಲ್ಲಿ ತಂದು ಪ್ರತಿಷ್ಟಾಪಿಸಿದ್ದಾರೆ.
ಪ್ರತಿಮೆ ಸ್ಥಾಪನೆ ಬಳಿಕ ಪ್ರತಿಯೊಂದು ರಥದ ಬಳಿಯೂ ಸಾಕಷ್ಟು ಜನರು ಸುತ್ತುವರೆದಿರುವುದು ಕಂಡು ಬಂದಿದ್ದು, ರಥಯಾತ್ರೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದರು.
ಜಗನ್ನಾಥ ರಥಯಾತ್ರೆ ದೇಶದ ಪ್ರತಿಯೊಬ್ಬರಿಗೂ ಸಂತೋಷ, ಅದೃಷ್ಟ ಹಾಗೂ ಆರೋಗ್ಯವನ್ನು ನೀಡಲಿ ಎಂದು ಟ್ವೀಟ್ ಮಾಡಿದ್ದರು.
ಜಗನ್ನಾಥ ರಥಯಾತ್ರೆ
ಜಗನ್ನಾಥ ರಥಯಾತ್ರೆ
ಜಗನ್ನಾಥ ರಥಯಾತ್ರೆ
ಜಗನ್ನಾಥ ರಥಯಾತ್ರೆ
ಜಗನ್ನಾಥ ರಥಯಾತ್ರೆ
ಜಗನ್ನಾಥ ರಥಯಾತ್ರೆ
SCROLL FOR NEXT