ದೇಶ

26/11ರ ಮುಂಬೈ ಭಯೋತ್ಪಾದಕ ದಾಳಿಗೆ 12 ವರ್ಷ: ದೇಶದ ಇತಿಹಾಸ ಕಂಡ ಕರಾಳ ದಿನದ ಚಿತ್ರಗಳು

Sumana Upadhyaya
ಉಗ್ರಗಾಮಿಗಳ ದಾಳಿಯಿಂದ ಮುಂಬೈಯ ತಾಜ್ ಮಹಲ್ ಹೊಟೇಲ್ ನ ಮೇಲಿನ ಮಹಡಿಯಿಂದ ಬೆಂಕಿ ಹೊರಬರುತ್ತಿರುವುದು,
ಉಗ್ರಗಾಮಿಗಳ ದಾಳಿಯಿಂದ ಮುಂಬೈಯ ತಾಜ್ ಮಹಲ್ ಹೊಟೇಲ್ ನ ಮೇಲಿನ ಮಹಡಿಯಿಂದ ಬೆಂಕಿ ಹೊರಬರುತ್ತಿರುವುದು,
ಈ ಸಂದರ್ಭದಲ್ಲಿ ತಮ್ಮ ಜೀವ ಕಾಪಾಡಿಕೊಳ್ಳಲು ತಾಜ್ ಮಹಲ್ ಹೊಟೇಲ್ ನ ಕೋಣೆಯಿಂದ ಹೊರಬರಲು ಉದ್ಯೋಗಿಗಳು ಮತ್ತು ಅತಿಥಿಗಳು ಪರದೆ ಬಳಸಿಕೊಂಡು ಕೆಳಗಿಳಿಯಲು ಪ್ರಯತ್ನಿಸುತ್ತಿರುವ ದೃಶ್ಯ.
ಹೊಟೇಲ್ ನ ಮೇಲಿನ ಮಹಡಿಯಿಂದ ಕೆಳಗೆ ಹಾರಿ ಗಾಯಗೊಂಡ ಸಹೋದ್ಯೋಗಿಯನ್ನು ಉಪಚರಿಸುತ್ತಿರುವ ಉದ್ಯೋಗಿ.
ತಾಜ್ ಮಹಲ್ ಹೊಟೇಲ್ ನ ಮೇಲಿನ ಮಹಡಿಯಿಂದ ಹೊರಬರುತ್ತಿರುವ ಬೆಂಕಿ. ಇದು ಭಯೋತ್ಪಾದಕ ದಾಳಿಯ ನಂತರ ಕಂಡುಬಂದ ದೃಶ್ಯ.
ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್ ನಲ್ಲಿ ಉಗ್ರ ದಾಳಿಯ ನಂತರ ಜನರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು.
ಪತ್ರಕರ್ತರು, ಜನರು ಉಗ್ರರ ದಾಳಿ ಸಮಯದಲ್ಲಿ ಭೀತಿಯಿಂದ ಅಡಗಿ ಕುಳಿತು ತಮ್ಮನ್ನು ಕಾಪಾಡಿಕೊಳ್ಳಲು ನೋಡುತ್ತಿರುವುದು.
ಮರುದಿನ ಅಂದರೆ ನವೆಂಬರ್ 27ರಂದು ಮುಂಬೈ ತಾಜ್ ಮಹಲ್ ಹೊಟೇಲ್ ನಲ್ಲಿ ಕಂಡುಬಂದ ದೃಶ್ಯ.
ಅತ್ತ ತಾಜ್ ಹೊಟೇಲ್ ನಲ್ಲಿ ಗುಂಡಿನ ಶಬ್ದ ಕೇಳುತ್ತಿದ್ದಾಗ ಇತ್ತ ಸುದ್ದಿ ವರದಿ ಮಾಡುತ್ತಿದ್ದ ಮಾಧ್ಯಮ ಪ್ರತಿನಿಧಿಗಳು ನೆಲಕ್ಕೊರಗಿ ಭೀತಿಯಿಂದ ಬಚಾವಾಗಲು ಪ್ರಯತ್ನಿಸುತ್ತಿರುವುದು.
ಮುಂಬೈಯ ಕೊಲಬಾ ಪ್ರದೇಶದಲ್ಲಿ ಪೊಲೀಸರು ಪ್ರತಿದಾಳಿಗೆ ಸಿದ್ದವಾಗಿರುವುದು.
ಮುಂಬೈಯ ಕೊಲಬಾ ಮಾರುಕಟ್ಟೆಯ ನಾರಿಮನ್ ಹೌಸ್ ನಲ್ಲಿ ನವೆಂಬರ್ 28ರಂದು ಹೆಲಿಕಾಪ್ಟರ್ ಕಾರ್ಯಾಚರಣೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ನವೆಂಬರ್ 27, 2008ರ ಪತ್ರಿಕೆಯ ಮುಖಪುಟ.
SCROLL FOR NEXT