ಕೋವಿಡ್-19 ರೋಗಿಗಳ ಕುಟುಂಬ ಸದಸ್ಯರು ಕಾನ್ಪುರದಲ್ಲಿ ತಮ್ಮ ಖಾಲಿ ಸಿಲಿಂಡರ್‌ಗಳನ್ನು ವೈದ್ಯಕೀಯ ಆಮ್ಲಜನಕ ತುಂಬಿಸಿಕೊಳ್ಳಲು ಕಾಯುತ್ತಿದ್ದಾರೆ.
ಮಾರಕ ಕೊರೋನಾ ವೈರಸ್ ನ 2ನೇ ಅಲೆ ವೇಳೆ ದೇಶಾದ್ಯಂತ ಆಮ್ಲಜನಕದ ವ್ಯಾಪಕ ಕೊರತೆ ಎದುರಾಗಿದ್ದು, ವೈದ್ಯಕೀಯ ಆಮ್ಲಜನಕದ ನಿರಂತರ ಉತ್ಪಾದನೆ ಮತ್ತು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಕಠಿಣ ಆದೇಶಗಳ ಹೊರತಾಗಿಯೂ ಆಸ್ಪತ್ರೆಗಳು ಆಮ್ಲಜನಕದ ತೀವ್ರ ಕೊರತೆ ಎದುರಿಸುತ್ತಿವೆ.ವೈದ್ಯಕೀಯ ಆಮ್ಲಜನಕದ ನಿರಂತರ ಉತ್ಪಾದನೆ ಮತ್ತು ಪೂರೈಕೆ ಮತ್ತು ಅಂತರ್-ರಾಜ್ಯ ಗಡಿಗಳಲ್ಲಿ ಅದರ ಸುಗಮ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಕೋವಿಡ್-19 ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೇಶದ ಇತರೆ ಪ್ರಮುಖ ನಗರಗಳಲ್ಲಿನ ಆಸ್ಪತ್ರೆಗಳು ತೀವ್ರವಾಗಿ ಆಕ್ಸಿಜನ್ ಕೊರತೆ ಎದುರಾಗುತ್ತಿದೆ. ಸಾಕಷ್ಟು ಆಸ್ಪತ್ರೆಗಳು ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿವೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಶುಕ್ರವಾರ ನೀಡಿದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ನಿನ್ನೆ 2,263 ಜನರು ಸೋಂಕಿಗೆ ಬಲಿಯಾಗಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ ರಾಷ್ಟ್ರವ್ಯಾಪಿ 1,86,920 ಕ್ಕೆ ತಲುಪಿದೆ.ಕೋವಿಡ್ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಕೋವಿಡ್-19 ರೋಗಿಯ ಕುಟುಂಬ ಸದಸ್ಯರೊಬ್ಬರು ಮಾಯಾಪುರಿಯಲ್ಲಿ ಆಮ್ಲಜನಕ ಸಿಲಿಂಡರ್ ಭರ್ತಿಗಾಗಿ ಸಿಲಿಂಡರ್ ಒಯ್ಯುತ್ತಿದ್ದಾರೆ.ನವದೆಹಲಿಯ ಲೋಕ ನಾಯಕ ಜೈಪ್ರಕಾಶ್ ನಾರಾಯಣ್ ಆಸ್ಪತ್ರೆಯ ಹೊರಗೆ ಕೋವಿಡ್-19 ರೋಗಿಯೊಬ್ಬರು ದಾಖಲಾತಿಗಾಗಿ ಕಾಯುತ್ತಿರುವುದುಶಾಂತಿ ಮುಕುಂದ್ ಆಸ್ಪತ್ರೆಯ ಹೊರಗೆ ಆಮ್ಲಜನಕ ಖಾಲಿಯಾಗಿದೆ ಎಂದು ನೋಟಿಸ್ ಅಂಟಿಸಿರುವುದು.ದೇಶಾದ್ಯಂತ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳಿಂದಾಗಿ ಆಮ್ಲಜನಕದ ಸರಬರಾಜು ಕೊರತೆಯ ನಡುವೆ, ಕೋವಿಡ್-19 ರೋಗಿಗಳು ಕಾನ್ಪುರದ ಎಲ್ಎಲ್ಆರ್ ಆಸ್ಪತ್ರೆಯಲ್ಲಿ ಆಮ್ಲಜನಕವನ್ನು ಹಂಚಿಕೊಳ್ಳಲು ಹೊರಟಿರುವುದು,.Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos