ತೀರ್ಥ ಕ್ಷೇತ್ರ ಜಗನ್ನಾಥಪುರಿಯಲ್ಲಿ ಜಗದ್ವಿಖ್ಯಾತ ರಥಯಾತ್ರೆ ಕೋವಿಡ್-19 ಶಿಷ್ಟಾಚಾರ, ಭದ್ರತೆಯ ನಡುವೆ ನಡೆದಿದೆ. 
ದೇಶ

ಪುರಿ ಜಗನ್ನಾಥ ರಥಯಾತ್ರೆ 2021: ಕೋವಿಡ್-19 ಶಿಷ್ಟಾಚಾರ, ಭದ್ರತೆ ನಡುವೆ ನಡೆದ ರಥೋತ್ಸವದ ಚಿತ್ರಗಳು

ತೀರ್ಥ ಕ್ಷೇತ್ರ ಜಗನ್ನಾಥಪುರಿಯಲ್ಲಿ ಜಗದ್ವಿಖ್ಯಾತ ರಥಯಾತ್ರೆ ಕೋವಿಡ್-19 ಶಿಷ್ಟಾಚಾರ, ಭದ್ರತೆಯ ನಡುವೆ ನಡೆದಿದೆ. ಭಗವಾನ್ ಜಗನ್ನಾಥ ಹಾಗೂ ಬಲರಾಮ, ಸುಭದ್ರೆಯರ ಮೂರು ರಥಗಳನ್ನು ಶ್ರದ್ಧಾಭಕ್ತಿಗಳಿಂದ ಮೆರವಣಿಗೆ ಮಾಡಲಾಯಿತು.

ಸರ್ವಾಲಂಕೃತಗೊಂಡ ಭಗವಾನ್ ಜಗನ್ನಾಥ ಹಾಗೂ ಬಲರಾಮ, ಸುಭದ್ರೆಯರ ಮೂರು ರಥಗಳನ್ನು ಶ್ರದ್ಧಾಭಕ್ತಿಗಳಿಂದ ಜುಲೈ 12 ರಂದು ಮೆರವಣಿಗೆ ಮಾಡಲಾಯಿತು.
ಸತತ ಎರಡನೇ ವರ್ಷವೂ ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚು ಜನ ಭಾಗವಹಿಸದೇ ರಥ ಯಾತ್ರೆ ನಡೆದಿದೆ.
ಪುರೋಹಿತರು ಬೆಳಿಗ್ಗೆ 4.30 ಕ್ಕೆ ಮಂಗಳಾರತಿ ಮಾಡುವ ಮೂಲಕ ರಥಯಾತ್ರೆಗೆ ಚಾಲನೆ ನೀಡಲಾಯಿತು. ಋತ್ವಿಜರ ನೇತೃತ್ವದಲ್ಲಿ ಹೋಮ-ಹವನಗಳು ನಡೆದಿದ್ದು, ರಥವನ್ನು ಸಜ್ಜುಗೊಳಿಸಲಾಯಿತು.
ಒಡಿಶಾದ ರಾಜವಂಶಸ್ಥ ಗಜಪತಿ ಮಹಾರಾಜ ದಿವ್ಯಸಿಂಗ್ ದೇವ್ ಅರಮನೆಯಿಂದ ರಥದಲ್ಲಿ ಆಗಮಿಸಿ ಜಗನ್ನಾಥನಿಗೆ ಪೂಜೆ ಸಲ್ಲಿಸಿದರು.
ಬಿಸಿಲ ಝಳವಿದ್ದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಾಪಮಾನ ಕಡಿಮೆ ಮಾಡಲು ರಥದ ಮೇಲೆ ನೀರು ಹಾಯಿಸಿದರು.
ರಥ ಎಳೆಯುವುದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಂಡು 500 ಮಂದಿಗೆ ಅವಕಾಶ ನೀಡಲಾಗಿತ್ತು.
ರಥಯಾತ್ರೆ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ
ರಥಯಾತ್ರೆ ಹಿನ್ನೆಲೆಯಲ್ಲಿ 4000 ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ದೇವಾಲಯದ ಸೇವಕರು, ಅಧಿಕಾರಿಗಳು, ಪೊಲೀಸರಿಗೂ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ.
ರಾಜವಂಶಸ್ಥರಿಂದ ಭಗವಾನ್ ಜಗನ್ನಾಥ ದೇವರ ರಥದಲ್ಲಿ ಸೇವೆ...
ಪುರಿ ಜಗನ್ನಾಥ ದೇವಾಲಯ ಪೂರ್ವಾಮ್ನಾಯ ಗೋವರ್ಧನ ಪೀಠದ ಪ್ರಧಾನ ದೇವರಾಗಿದ್ದು, ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಗಳು ಭಕ್ತಾದಿಗಳೊಂದಿಗೆ ರಥವೇರಿ ಭಗವಾನ್ ಜಗನ್ನಾಥನಿಗೆ ಪೂಜೆ ಸಲ್ಲಿಸಿದರು.
ಭಗವಾನ್ ಜಗನ್ನಾಥನ ದರ್ಶನ ಪಡೆದ ಗೋವರ್ಧನ ಪೀಠದಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಗಳು
ರಥಯಾತ್ರೆಗೂ ಮುನ್ನ ಪುರಿ ಜನ್ನಾಥ ದೇವಾಲಯದ ಬಳಿ ಸಜ್ಜುಗೊಂಡಿದ್ದ ರಥಗಳು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT