ದೇಶ

ಚಿಪ್ಕೊ ಚಳವಳಿಯ ರೂವಾರಿ, ಖ್ಯಾತ ಪರಿಸರವಾದಿ ಸುಂದರ್ ಲಾಲ್ ಬಹುಗುಣ: ಅಪರೂಪದ ಚಿತ್ರಗಳು

Sumana Upadhyaya
ಪರಿಸರವಾದ ಮಾತ್ರ ಸುಂದರ್ ಲಾಲ್ ಹೃದಯಕ್ಕೆ ಹತ್ತಿರದ ವಿಷಯವಾಗಿರಲಿಲ್ಲ. ಅಸೃಶ್ಯತೆ ವಿರುದ್ಧ ಹೋರಾಡುತ್ತಾ ಪುರುಷರ ಮದ್ಯವ್ಯಸನ ವಿರುದ್ಧ ಉತ್ತರಾಖಂಡದ ಪರ್ವತ ಪ್ರದೇಶದ ಸಾವಿರಾರು ಮಹಿಳೆಯರನ್ನು ಒಗ್ಗೂಡಿಸಿ ಮದ್ಯ ವಿರೋಧಿ ಚಳವಳಿ ನಡೆಸಿದ್ದರು. ಆಗ 1965-70ರ ಸಮಯ. ಚಿತ್ರದಲ್ಲಿ ಕೇರಳದ ವಯನಾಡಿನಲ್ಲಿ ಬಾಲಕನೊಬ್ಬನ
ಪರಿಸರವಾದ ಮಾತ್ರ ಸುಂದರ್ ಲಾಲ್ ಹೃದಯಕ್ಕೆ ಹತ್ತಿರದ ವಿಷಯವಾಗಿರಲಿಲ್ಲ. ಅಸೃಶ್ಯತೆ ವಿರುದ್ಧ ಹೋರಾಡುತ್ತಾ ಪುರುಷರ ಮದ್ಯವ್ಯಸನ ವಿರುದ್ಧ ಉತ್ತರಾಖಂಡದ ಪರ್ವತ ಪ್ರದೇಶದ ಸಾವಿರಾರು ಮಹಿಳೆಯರನ್ನು ಒಗ್ಗೂಡಿಸಿ ಮದ್ಯ ವಿರೋಧಿ ಚಳವಳಿ ನಡೆಸಿದ್ದರು. ಆಗ 1965-70ರ ಸಮಯ. ಚಿತ್ರದಲ್ಲಿ ಕೇರಳದ ವಯನಾಡಿನಲ್ಲಿ ಬಾಲಕನೊಬ್ಬನ
ತೀವ್ರ ಗಾಂಧೀವಾದಿಯಾಗಿದ್ದ ಸುಂದರ್ ಲಾಲ್ ಬಹುಗುಣ ಉತ್ತರಾಖಂಡದ ಖ್ಯಾತ ಪರಿಸರವಾದಿ ಶ್ರೀ ದೇವ್ ಸುಮನ್ ಅವರಿಂದ ಸ್ಪೂರ್ತಿ ಪಡೆದುಕೊಂಡಿದ್ದರು. ರಾಷ್ಟ್ರೀಯತೆ, ಅಹಿಂಸೆ ಮೇಲೆ ಅಪಾರ ನಂಬಿಕೆಯಿತ್ತು.
ಅವರಿಗೆ ಸಿಕ್ಕಿದ ಶಿಕ್ಷಣವೇ ಚಿಪ್ಕೊ ಚಳವಳಿಯನ್ನು ರೂಪಿಸಲು ಸಹಾಯ ಮಾಡಿತು. ಅದು ಆರಂಭವಾಗಿದ್ದು 1973ರಲ್ಲಿ ಉತ್ತರಾಖಂಡದ ಕೆಲವು ಭಾಗಗಳು ಮತ್ತು ಉತ್ತರ ಪ್ರದೇಶಗಳಲ್ಲಿ, ಅರಣ್ಯ ನಾಶ ವಿರುದ್ಧ ಆರಂಭಗೊಂಡ ಚಳವಳಿ. ನಂತರದ ದಿನಗಳಲ್ಲಿ ಜಗತ್ತಿನಾದ್ಯಂತ ಪರಿಸರ ರಕ್ಷಣೆಗೆ ಹಲವು ಚಳವಳಿಗಳಿಗೆ ಪ್ರೇರಣೆಯಾಯಿತು.
ಭಾರತದ ಹಲವು ರಾಜ್ಯಗಳಲ್ಲಿ ಹಳ್ಳಿಗಳಿಗೆ ಹೋಗಿ ಚಿಪ್ಕೊ ಚಳವಳಿ ಮೂಲಕ ಜನರಿಗೆ ಶಿಕ್ಷಣ, ಅರಿವು ಮೂಡಿಸಲು ಪ್ರಾರಂಭಿಸಿದರು. 1984ರಲ್ಲಿ ಟೆಹ್ರಿ ಅಣೆಕಟ್ಟು ವಿರೋಧಿ ಚಳವಳಿ ಆರಂಭಿಸಿದರು. ಈ ಚಿತ್ರದಲ್ಲಿ ಸುಂದರ್ ಲಾಲ್ ಬಹುಗುಣ ಅವರು ದೆಹಲಿಯಲ್ಲಿ 88ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ಡಾ ಎ ಪಿ ಜೆ ಅ
ಬಹುಗುಣ ಅವರ ಅನೇಕ ಮಾನವಪರ ಕೆಲಸಗಳು ಶ್ಲಾಘನೆಗೆ ಪಾತ್ರವಾಗಿದೆ. 1981ರಲ್ಲಿ ಪದ್ಮಶ್ರೀ, 1986ರಲ್ಲಿ ಜಮ್ಮಲಾಲ್ ಬಜಾಜ್ ಪ್ರಶಸ್ತಿ, 2009ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರವಾಗಿದ್ದಾರೆ. ಚಿತ್ರದಲ್ಲಿ ಸುಂದರ್ ಲಾಲ್ ಬಹುಗುಣ ಅವರು ತಮ್ಮ ಪತ್ನಿ ವಿಮಲಾ ಬಹುಗುಣ ಅವರೊಂದಿಗೆ.
13 ದಿನಗಳ ಕಾಲ ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಾ ಹೃಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ತಮ್ಮ 94ನೇ ವಯಸ್ಸಿನಲ್ಲಿ ನಿನ್ನೆ ಸುಂದರ್ ಲಾಲ್ ಬಹುಗುಣ ಅಸುನೀಗಿದರು. ಅವರು ಹಾಕಿಕೊಂಡ ಖ್ಯಾತ ಪರಂಪರೆ ಪರಿಸರವಾದಿಗಳಿಗೆ, ಪರಿಸರ ಸಂರಕ್ಷಣೆಯಲ್ಲಿ ಒಲವಿನಿಂದ ಕೆಲಸ ಮಾಡುವವರಿಗೆ ದಾರಿದೀಪ.
SCROLL FOR NEXT