ಪುರಿ ಜಗನ್ನಾಥ್ ವಾರ್ಷಿಕ ರಥಯಾತ್ರೆಯಲ್ಲಿ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯ ರಥಗಳನ್ನು ಭಕ್ತರು ಎಳೆಯುತ್ತಾರೆ.
COVID-19 ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ವಿರಾಮದ ನಂತರ ನಿನ್ನೆ ಜುಲೈ 1ರಂದು ಯಾತ್ರೆ ಪ್ರಾರಂಭವಾಯಿತು.ಭಗವಾನ್ ಜಗನ್ನಾಥ ಮತ್ತು ಅವರ ಒಡಹುಟ್ಟಿದವರ ಒಂಬತ್ತು ದಿನಗಳ ಯಾತ್ರೆಯ ಸಂಕೇತವಾಗಿ ಗುಂಡಿಚಾ ದೇವಸ್ಥಾನದಲ್ಲಿ ರಥ ಜಾತ್ರೆಯಾಗಿದ್ದು, ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯ ತಿಥಿಯಂದು ನಡೆಯುತ್ತದೆ.ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರ ಮತ್ತು ಚಕ್ರರಾಜ್ ಸುದರ್ಶನರ ದೈತ್ಯಾಕಾರದ ರಥಗಳು ಈ ಸಮುದ್ರ ತೀರದ ಯಾತ್ರಿಕರ ಪಟ್ಟಣದಲ್ಲಿ ಹೋಗುತ್ತಿರುವಾಗ ಭಾವಪರವಶರಾಗಿ ಭಕ್ತರು ಜೈ ಜಗನ್ನಾಥ ಮತ್ತು ಹರಿಬೋಲ ಎಂದು ಕೂಗುತ್ತಿದ್ದರು.ರಥ ಎಳೆಯುವಾಗ ಕಂಸಾಳೆ ಮತ್ತು ತಾಳದ ಶಬ್ದಗಳು ಗಾಳಿಯಲ್ಲಿ ಪ್ರತಿಧ್ವನಿಸಿವೆ. ರಥಗಳ ಮೇಲಿನ ದೇವತೆಗಳ ದರ್ಶನಕ್ಕಾಗಿ ದೇಶ ಮತ್ತು ವಿದೇಶಗಳಿಂದ ಭಕ್ತರು ಸಿಂಹದ್ವಾರದ ಸುತ್ತಮುತ್ತಲಿನ ಪ್ರದೇಶದಲ್ಲಿ ನೆರೆದಿದ್ದರು.ಉತ್ಸವವನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಮತ್ತು ಒಡಿಶಾ ಪೊಲೀಸರಿಂದ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.ಬೆಳಗ್ಗೆ 9.30ಕ್ಕೆ ನಡೆಯಬೇಕಿದ್ದ 'ಪಹಂಡಿ' ಅಥವಾ ದೇವತೆಗಳ ವಿದ್ಯುಕ್ತ ಮೆರವಣಿಗೆ ಬೆಳಗ್ಗೆ 7 ಗಂಟೆಗೆ ಆರಂಭವಾಯಿತು.ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ತಮ್ಮ ಆಯ್ದ ಶಿಷ್ಯರೊಂದಿಗೆ ಸಂಪ್ರದಾಯದಂತೆ ರಥಗಳ ಮೇಲೆ ದೇವತೆಗಳ ದರ್ಶನ ಪಡೆದರು.ಇದರ ನಂತರ ಪುರಿಯ ಪಟ್ಟದ ರಾಜ ಗಜಪತಿ ಮಹಾರಾಜ ದಿಬ್ಯಸಿಂಗ ದೇಬ್ ಅವರು ಚಿನ್ನದ ಪೊರಕೆಯಿಂದ ರಥಗಳನ್ನು ಶಾಸ್ತ್ರೋಕ್ತವಾಗಿ ಗುಡಿಸುವ 'ಛೇರಾ ಪಹನರಾ'ವನ್ನು ಮಾಡಿದರು.ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಒಡಿಶಾ ರಾಜ್ಯಪಾಲ ಗಣೇಶಿ ಲಾಲ್, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದರು.Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos