ದೇಶ

ಹೊಸ ಸಂಸತ್ತು ಭವನದ ಮೇಲೆ ರಾಷ್ಟ್ರೀಯ ಲಾಂಛನ ಪಿಎಂ ಮೋದಿಯಿಂದ ಅನಾವರಣ

Sumana Upadhyaya
ರಾಷ್ಟ್ರೀಯ ಲಾಂಛನವನ್ನು ಕಂಚಿನಿಂದ ತಯಾರಿಸಲ್ಪಟ್ಟಿದ್ದು, ಒಟ್ಟು 9,500 ಕೆಜಿ ತೂಕ ಮತ್ತು 6.5 ಮೀಟರ್ ಎತ್ತರವಿದೆ.
ರಾಷ್ಟ್ರೀಯ ಲಾಂಛನವನ್ನು ಕಂಚಿನಿಂದ ತಯಾರಿಸಲ್ಪಟ್ಟಿದ್ದು, ಒಟ್ಟು 9,500 ಕೆಜಿ ತೂಕ ಮತ್ತು 6.5 ಮೀಟರ್ ಎತ್ತರವಿದೆ.
ಹೊಸ ಸಂಸತ್ತಿನ ಕಟ್ಟಡದ ಕೇಂದ್ರ ದ್ವಾರದ ಮೇಲ್ಭಾಗದಲ್ಲಿ ಇದನ್ನು ನಿಲ್ಲಿಸಲಾಗಿದೆ. ಲಾಂಛನ ಗಟ್ಟಿಯಾಗಿ ನಿಲ್ಲಲು ಸುಮಾರು 6,500 ಕೆಜಿ ತೂಕದ ಉಕ್ಕಿನ ಪೋಷಕ ರಚನೆಯನ್ನು ನಿರ್ಮಿಸಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಈ ಲಾಂಛನದ ಅನಾವರಣ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ತು ಭವನದ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು.
ಹೊಸ ಸಂಸತ್ತು ಭವನದಲ್ಲಿ ರಾಷ್ಟ್ರೀಯ ಲಾಂಛನವನ್ನು ನಿರ್ಮಿಸುವ ತಯಾರಿ ಪ್ರಕ್ರಿಯೆ ಎಂಟು ವಿವಿಧ ಹಂತಗಳಲ್ಲಿ ಮಣ್ಣಿನ ಮಾದರಿ, ಕಂಪ್ಯೂಟರ್ ಗ್ರಾಫಿಕ್ಸ್‌ನಿಂದ ಕಂಚಿನ ಎರಕಹೊಯ್ದು ಕಾಂತಿಯುತಗೊಳಿಸುವವರೆಗೆ ನಡೆದಿದೆ.
ನೂತನ ಸಂಸತ್ತು ಭವನ ನಿರ್ಮಾಣ ಸಿಬ್ಬಂದಿಯೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮಾಲೋಚನೆ
ಇಂದು ದೆಹಲಿಯ ನೂತನ ಸಂಸತ್ತು ಭವನದಲ್ಲಿ ನಡೆದ ರಾಷ್ಟ್ರೀಯ ಲಾಂಛನ ಅನಾವರಣದ ಪೂಜೆ
SCROLL FOR NEXT