ದೇಶ

ಪ್ರಧಾನಿ ನರೇಂದ್ರ ಮೋದಿ ಯುರೋಪ್ ಪ್ರವಾಸದ ಚಿತ್ರಗಳು

Sumana Upadhyaya
ಪ್ರವಾಸದ ಮೊದಲ ದಿನ ಅವರು ಬಂದಿಳಿದದ್ದು ಜರ್ಮನಿ ರಾಜಧಾನಿ ಬರ್ಲಿನ್ ಗೆ. ಅವರನ್ನು ಜರ್ಮನಿಯ ಮಿಲಿಟರಿ ಪಡೆಯೊಂದಿಗೆ ಅಲ್ಲಿನ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಆತ್ಮೀಯವಾಗಿ ಬರಮಾಡಿಕೊಂಡರು.
ಪ್ರವಾಸದ ಮೊದಲ ದಿನ ಅವರು ಬಂದಿಳಿದದ್ದು ಜರ್ಮನಿ ರಾಜಧಾನಿ ಬರ್ಲಿನ್ ಗೆ. ಅವರನ್ನು ಜರ್ಮನಿಯ ಮಿಲಿಟರಿ ಪಡೆಯೊಂದಿಗೆ ಅಲ್ಲಿನ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಆತ್ಮೀಯವಾಗಿ ಬರಮಾಡಿಕೊಂಡರು.
ಪ್ರಧಾನಿ ಮೋದಿಯವರು ಯಾವುದೇ ದೇಶಗಳಿಗೆ ಹೋದರೂ ಅಲ್ಲಿರುವ ಭಾರತೀಯರನ್ನು ಭೇಟಿ ಮಾಡಿ ಅವರ ಜೊತೆ ಮಾತುಕತೆ ನಡೆಸುವುದು ಸಾಮಾನ್ಯ, ನಂತರ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಬರ್ಲಿನ್ ನಲ್ಲಿ ಕೂಡ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದಾರೆ.
ಬರ್ಲಿನ್ ಗೆ ಬೆಳ್ಳಂಬೆಳಗ್ಗೆ ಬಂದಿಳಿಯುತ್ತಿದ್ದಂತೆ ಹಲವು ಭಾರತೀಯರು ಬಂದು ಪ್ರಧಾನಿ ಮೋದಿಯನ್ನು ಆತ್ಮೀಯವಾಗಿ ಮಾತನಾಡಿಸಿ ಫೋಟೋ ಕ್ಲಿಕ್ಕಿಸಿಕೊಂಡರು
ಪುಟ್ಟ ಬಾಲಕಿ ದೇಶಭಕ್ತಿ ಸಾರುವ ಗೀತೆಯನ್ನು ಹಾಡಿ ಮೋದಿಯವರ ಮನಸೂರೆಗೊಂಡನು.
ಪುಟ್ಟ ಬಾಲಕಿಯೊಬ್ಬಳು ಮೋದಿ ಭಾವಚಿತ್ರ ಬಿಡಿಸಿ ತಂದಿದ್ದು ತೋರಿಸಿ ಅದರಲ್ಲಿ ಹಸ್ತಾಕ್ಷರ ಹಾಕಿಸಿಕೊಂಡಳು,
ಪ್ರಧಾನಿ ಮೋದಿಯವರಿಗೆ ಬರ್ಲಿನ್ ನಲ್ಲಿ ಅಲ್ಲಿನ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರಿಂದ ಸಾಂಪ್ರದಾಯಿಕ ಸ್ವಾಗತ ದೊರೆಯಿತು.
ಚಾನ್ಸೆಲರ್ ಸ್ಕೋಲ್ಜ್ ಅವರೊಂದಿಗೆ ವ್ಯಾಪಕ ಚರ್ಚೆಗಳನ್ನು ನಡೆಸಿದೆನು. ವ್ಯಾಪಾರ, ವಾಣಿಜ್ಯ, ನಾವೀನ್ಯತೆ, ಸಂಸ್ಕೃತಿ ಮತ್ತು ಜನರಿಂದ ಜನರ ಸಂಪರ್ಕ, ಭಾರತ ಮತ್ತು ಜರ್ಮನಿ ಹಲವಾರು ವಿಷಯಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಉಭಯ ನಾಯಕರು ಚರ್ಚಿಸಿದರು.
6 ನೇ ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಯಲ್ಲಿ ಭಾಗವಹಿಸಿದರು.. ಚಾನ್ಸೆಲರ್ ಸ್ಕೋಲ್ಜ್ ಮತ್ತು ನಾನು, ಜರ್ಮನಿ ಮತ್ತು ಭಾರತದ ಮಂತ್ರಿಗಳು, ಅಧಿಕಾರಿಗಳು ಸುಸ್ಥಿರ ಅಭಿವೃದ್ಧಿ, ಚಲನಶೀಲತೆ, ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ಚರ್ಚಿಸಿದ್ದೇವೆ ಎಂದು
ನಂತರ ರಾತ್ರಿ ಬರ್ಲಿನ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದರು.
ಬರ್ಲಿನ್ ನಿಂದ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದು ಡೆನ್ಮಾರ್ಕ್ ಗೆ. ಅಲ್ಲಿನ ಪ್ರಧಾನಿ ಫ್ರೆಡೆರಿಕ್ಸೆನ್ ಆತ್ಮೀಯವಾಗಿ ಮೋದಿಯವರನ್ನು ಬರಮಾಡಿಕೊಂಡದ್ದು, ಅವರು ನಡೆಸಿದ ಮಾತುಕತೆ, ಚರ್ಚೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾದವು. ಭಾರತ-ಡೆನ್ಮಾರ್ಕ್ ಸಂಬಂಧವನ್ನು ವಿಸ್ತರಿಸುವ ಕುರಿತ
ಡೆನ್ಮಾರ್ಕ್‌ನೊಂದಿಗಿನ ಭಾರತದ ಹಸಿರು ಕಾರ್ಯತಂತ್ರ(Green Strategic) ಪಾಲುದಾರಿಕೆಯು ಮೌಲ್ಯಯುತವಾಗಿದೆ. ಪಿಎಂ ಫ್ರೆಡೆರಿಕ್ಸೆನ್ ಮತ್ತು ನಾನು ಈ ಪಾಲುದಾರಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಮಾಡಬಹುದು ಎಂದು ಚರ್ಚಿಸಿದೆವು.
ನವೀಕರಿಸಬಹುದಾದ ಇಂಧನ, ಬಂದರುಗಳು, ಹಡಗು, ನೀರು ನಿರ್ವಹಣೆ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿನ ಸಹಕಾರವನ್ನು ನಾವು ಚರ್ಚಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಡೆನ್ಮಾರ್ಕ್ ರಾಜಧಾನಿಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು
ಡೆನ್ಮಾರ್ಕ್ ರಾಜಧಾನಿ ಕೋಪನ್ ಹ್ಯಾಗನ್ ಅಲ್ಲಿನ ರಾಣಿ 2ನೇ ಮಾರ್ಗರೆಥೆಯನ್ನು ಸಹ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ.
ನಂತರ ನಾರ್ಡಿಕ್ ದೇಶಗಳ ಜನಪ್ರತಿನಿಧಿಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು. ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರನ್ನು ಭೇಟಿ ಮಾಡಿ ಎರಡೂ ದೇಶಗಳ ಸಹಕಾರ, ಸಂಬಂಧ ವರ್ಧನೆ, ವ್ಯವಹಾರಗಳಲ್ಲಿ ಸಹಕಾರ ಕುರಿತು ಮಾತುಕತೆ ನಡೆಸಿದ್ದಾರೆ.
ಸ್ವೀಡನ್ ಪ್ರಧಾನಿ ಮ್ಯಾಗ್ಡಲೀನಾ ಆಂಡರ್ಸನ್ ಅವರೊಂದಿಗೆ ಭದ್ರತೆ, ಐಟಿ, ಸಂಶೋಧನೆ ಮತ್ತು ನಾವೀನ್ಯತೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಆಳಗೊಳಿಸುವ ಮಾರ್ಗಗಳನ್ನು ಚರ್ಚಿಸಿದರು.
ಭಾರತ-ಐರ್ಲ್ಯಾಂಡ್ ಸಂಬಂಧಗಳು, ವಿಶೇಷವಾಗಿ ಆರೋಗ್ಯ ರಕ್ಷಣೆ, ನವೀಕರಿಸಬಹುದಾದ ಇಂಧನ, ಮೀನುಗಾರಿಕೆ ಮತ್ತು ಹೆಚ್ಚಿನವುಗಳಲ್ಲಿ ನಮ್ಮ ಹಂಚಿಕೆಯ ಸಹಯೋಗದ ಬಗ್ಗೆ ಅಲ್ಲಿನ ಪ್ರಧಾನಿ ಕ್ಯಾಟ್ರಿಂಜಕ್ ಜೊತೆ ಮಾತುಕತೆ ನಡೆಸಿದರು.
ಫಿನ್ಲ್ಯಾಂಡ್ ಪ್ರಧಾನಿ ಮರಿನ್ ಸನ್ನ ಅವರನ್ನು ಭೇಟಿ ಮಾಡಿ ಭಾರತ ಫಿನ್ಲ್ಯಾಂಡ್ ಡಿಜಿಟಲ್ ಸಹಭಾಗಿತ್ವ, ವ್ಯಾಹಾರ ಪಾಲುದಾರಿಕೆ, ಹೂಡಿಕೆ ಬಗ್ಗೆ ಮಾತುಕತೆ ನಡೆಸಿದರು. ಸಾಂಸ್ಕೃತಿಕ ಸಹಯೋಗ ಕುರಿತು ಕೂಡ ಚರ್ಚೆ ನಡೆಸಿದ್ದಾರೆ.
ನಾರ್ಡಿಕ್ ದೇಶಗಳ ಪ್ರಧಾನ ಮಂತ್ರಿಗಳೊಂದಿಗೆ ಸಭೆ ಮುಗಿಸಿ ಪ್ರಧಾನಿ ಮೋದಿ ಬಂದಿಳಿದದ್ದು ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಗೆ. ಅಲ್ಲಿ ಕೂಡ ಸಾಂಪ್ರದಾಯಿಕವಾಗಿ ಮೋದಿಯವರಿಗೆ ಸ್ವಾಗತ ದೊರಕಿತು.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಭೇಟಿ ಮಾಡಿದಾಗ ಉಭಯ ನಾಯಕರು ಆಲಂಗಿಸಿಕೊಂಡ ಪರಿ.
ನಾವು ದ್ವಿಪಕ್ಷೀಯ ಹಾಗೂ ಜಾಗತಿಕ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ಹರಡಿರುವ ನಮ್ಮ ಪಾಲುದಾರಿಕೆಯೊಂದಿಗೆ ಭಾರತ ಮತ್ತು ಫ್ರಾನ್ಸ್ ಹೆಮ್ಮೆಯ ಅಭಿವೃದ್ಧಿ ಪಾಲುದಾರರಾಗಿದ್ದಾರೆ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.
ಫ್ರಾನ್ಸ್ ಅಧ್ಯಕ್ಷರು ಪ್ರಧಾನಿ ಮೋದಿಯವರನ್ನು ಬೀಳ್ಕೊಟ್ಟ ಪರಿ.
SCROLL FOR NEXT