ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ G20 ಶೃಂಗಸಭೆಯಲ್ಲಿ ಬೆಳಗ್ಗಿನಿಂದಲೂ ಸತತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ವಿಶ್ವ ನಾಯಕರಿಗೆ ರಾತ್ರಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ.
ಜಿ20 ಶೃಂಗಸಭೆಯ ಶನಿವಾರದ ಕಾರ್ಯಕ್ರಮಗಳು, ಸಭೆಗಳ ಮುಕ್ತಾಯದ ಬಳಿಕ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ನಾಯಕರು ಮತ್ತು ಪ್ರತಿನಿಧಿಗಳಿಗಾಗಿ ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ವಿಶೇಷ ಔತಣಕೂಟ ಏರ್ಪಡಿಸಿದ್ದಾರೆ.ದೆಹಲಿಯ ‘ಭಾರತ್ ಮಂಟಪಂ’ನಲ್ಲಿ ರಾತ್ರಿ ಭವ್ಯ ಭೋಜನಕೂಟಕ್ಕೆ ನಾಯಕರನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾಗತಿಸಿದರು.ಶೃಂಗಸಭೆಗೆ ಆಗಮಿಸಿದ್ದ ವಿಶ್ವನಾಯಕರು ಮತ್ತು ಭಾರತೀಯ ಸಂಪ್ರದಾಯಿಕ ಧಿರಿಸಿನಲ್ಲಿ ಔತಣಕೂಟಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.ವೆಲ್ಕಮ್ ಡ್ರಿಂಕ್ಸ್ ನೀಡಲು ಸ್ವರ್ಣಲೇಪಿತ ವಸ್ತುಗಳ ಬಳಕೆ ಮಾಡಲಾಗಿದೆ. 200 ಕುಶಲಕರ್ಮಿಗಳು ಸಿದ್ಧಪಡಿಸಿರುವ 15,000 ಬೆಳ್ಳಿ ವಸ್ತುಗಳ ಬಳಕೆ ಮಾಡಿದ್ದು, ಭಾರತದ ಪಾಕಶಾಲೆಯ ವೈವಿಧ್ಯತೆ ಪ್ರತಿಬಿಂಬಿಸಲಿದೆ ಔತಣಕೂಟ.ಜಿ20 ನಾಯಕರು ಮತ್ತು ಪ್ರತಿನಿಧಿಗಳಿಗಾಗಿ ಔತಣಕೂಟದಲ್ಲಿ ಸೊಗಸಾದ ಭಾರತೀಯ ಸಸ್ಯಾಹಾರಿ ಆಹಾರಗಳನ್ನು ತಯಾರಿಸಲಾಗಿದೆ.g20dinner25g20dinner26g20dinner27g20dinner28g20dinner10g20dinner11g20dinner12g20dinner13g20dinner14g20dinner15g20dinner16g20dinner17g20dinner18g20dinner19g20dinnerg20dinner1g20dinner2g20dinner3g20dinner4g20dinner5g20dinner6g20dinner7g20dinner8g20dinner9Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos