ದೇಶ

ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ 'ಸ್ನಾರ್ಕ್ಲಿಂಗ್'! Photos

Sumana Upadhyaya
ಹವಳಗಳು ಮತ್ತು ಮೀನಿನ ಚಿತ್ರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ಸಾಹಸ ಪ್ರಿಯರಿಗೆ ಖಂಡಿತವಾಗಿಯೂ ಇದು ಪ್ರಶಸ್ತ ಸ್ಥಳ ಎಂದು ಬರೆದುಕೊಂಡಿದ್ದಾರೆ.
ಹವಳಗಳು ಮತ್ತು ಮೀನಿನ ಚಿತ್ರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ಸಾಹಸ ಪ್ರಿಯರಿಗೆ ಖಂಡಿತವಾಗಿಯೂ ಇದು ಪ್ರಶಸ್ತ ಸ್ಥಳ ಎಂದು ಬರೆದುಕೊಂಡಿದ್ದಾರೆ.
ತಮ್ಮಲ್ಲಿರುವ ಸಾಹಸ ಮನೋವೃತ್ತಿಯನ್ನು ಹೊರತೆಗೆಯಲು ಬಯಸುವವರಿಗೆ, ಲಕ್ಷದ್ವೀಪವು ಖಂಡಿತಾ ಅವರ ಪಟ್ಟಿಯಲ್ಲಿರುತ್ತದೆ. ಅಲ್ಲಿ ನನ್ನ ವಾಸ್ತವ್ಯದ ಸಮಯದಲ್ಲಿ, ನಾನು ಸ್ನಾರ್ಕೆಲಿಂಗ್ ನ್ನು ಸಹ ಪ್ರಯತ್ನಿಸಿದೆ - ಇದು ಎಂತಹ ಹರ್ಷದಾಯಕ ಅನುಭವ, ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಪ್ರಾಚೀನ ಕಡಲ ತೀರದಲ್ಲಿ ಇಂದು ತಮ್ಮ ಬೆಳಗಿನ ನಡಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ರಮಣೀಯ ಸೌಂದರ್ಯದ ಜೊತೆಗೆ ಲಕ್ಷದ್ವೀಪದ ಪ್ರಶಾಂತತೆಯೂ ಮನಮೋಹಕವಾಗಿದೆ. ಇಲ್ಲಿನ ಪ್ರಶಾಂತ ವಾತಾವರಣವು 140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ ಇನ್ನಷ್ಟು ಶ್ರಮಿಸುವುದು ಹೇಗೆ ಎಂಬುದನ್ನು ಪ್ರತಿಬಿಂಬಿಸಲು ಅವಕಾಶವನ್ನು ನೀಡಿತು ಎಂದು ಬರೆದುಕೊಂಡಿದ್ದಾರೆ.
ರಮಣೀಯ ಸೌಂದರ್ಯವನ್ನು ಸಮುದ್ರ ತೀರದಲ್ಲಿ ಸವಿಯುತ್ತಿರುವ ಪ್ರಧಾನಿ ಮೋದಿ
ನಯನ ಮನೋಹರ ಪ್ರಕೃತಿ ಸೌಂದರ್ಯಕ್ಕೆ ಮನಸೋತ ಪ್ರಧಾನಿ ನರೇಂದ್ರ ಮೋದಿ
ಲಕ್ಷದ್ವೀಪದಲ್ಲಿ ತಂಗಿದ್ದಾಗ ಸ್ನಾರ್ಕೆಲಿಂಗ್ ಮಾಡಿ ಸಮುದ್ರದ ನಯನ ಮನೋಹರ ದೃಶ್ಯ
ಸ್ನಾರ್ಕೆಲಿಂಗ್ ನ ಪ್ರಕೃತಿ ಸೌಂದರ್ಯ
ಸ್ನಾರ್ಕ್ಲಿಂಗ್ ಎಂಬುದು ಜಲರಾಶಿಯ ಮೂಲಕ ಅಥವಾ ಅದರ ಮೇಲೆ ,ನೇರವಾಗಿ ನೀರಿಗಿಳಿಯುವ ಡೈವಿಂಗ್ ಮುಖವಾಡ ಧರಿಸಿಕೊಂಡು ಈಜುವುದನ್ನು ಅಭ್ಯಾಸ ಮಾಡುವುದಾಗಿದೆ. ಈ ಡೈವಿಂಗ್ ಮುಖವಾಡವನ್ನು ಕೊಳವೆಯಾಕಾರದಲ್ಲಿರುವ ಉಸಿರುಕೊಳವೆ ಎಂದು ಕರೆಯಲಾಗುತ್ತದೆ. ಅಲ್ಲದೇ ಈಜು ರೆಕ್ಕೆಗಳು ಎಂದೂ ಕರೆಯಲಾಗುತ್ತದೆ.
SCROLL FOR NEXT