ಕ್ರೀಡೆ

ಕ್ರಿಕೆಟ್ ಬಿಟ್ಟು, ಎಂಎಸ್ ಧೋನಿ ಬಗ್ಗೆ ನಿಮಗೆಷ್ಟು ಗೊತ್ತು? ಬರ್ತಡೇ ಬಾಯ್ ಬಗ್ಗೆ ಇನ್ನಷ್ಟು ತಿಳಿಯಿರಿ

Lingaraj Badiger
ಎಲ್ಲಾ ಮಾದರಿ ಕ್ರಿಕೆಟ್ ನಲ್ಲೂ ಯಶಸ್ವಿ ನಾಯಕನಾಗಿರುವ ಧೋನಿ ಅವರು ಉತ್ತಮ ನಾಯಕತ್ವ ಗುಣಗಳನ್ನು ಹೊಂದಿದ್ದು, ಯುವಕರಿಗೆ ಪ್ರೋತ್ಸಾಹ ನೀಡುವ ಭಾಷಣಗಳನ್ನು ಮಾಡಿದ್ದಾರೆ.
ಎಲ್ಲಾ ಮಾದರಿ ಕ್ರಿಕೆಟ್ ನಲ್ಲೂ ಯಶಸ್ವಿ ನಾಯಕನಾಗಿರುವ ಧೋನಿ ಅವರು ಉತ್ತಮ ನಾಯಕತ್ವ ಗುಣಗಳನ್ನು ಹೊಂದಿದ್ದು, ಯುವಕರಿಗೆ ಪ್ರೋತ್ಸಾಹ ನೀಡುವ ಭಾಷಣಗಳನ್ನು ಮಾಡಿದ್ದಾರೆ.
ಹಲವು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಧೋನಿ, ತಮ್ಮ ಟ್ರಸ್ಟ್ ಮೂಲಕ ಹಲವು ಭಾವಿ ಕ್ರಿಕೆಟಿಗರಿಗೆ ಆರ್ಥಿಕ ಸಹಾಯ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ.
ಭಾರತೀಯ ಸೇನೆ ಸೇರಬೇಕು ಎಂದು ಕನಸು ಕಂಡಿದ್ದ ಧೋನಿ, ಪ್ಯಾರಾಚೂಟ್ ರೆಜಿಮೆಂಟ್ ನಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗುವ ಮೂಲಕ ಕನಸು ನನಸಾಗಿತ್ತು.
ಧೋನಿ ಅವರು ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯ ಅಭಿಮಾನಿಯಾಗಿದ್ದು, ಹಾಕಿ ಇಂಡಿಯಾ ಲೀಗ್ ನಲ್ಲಿ ರಾಂಚಿ ರೇಯ್ಸ್ ತಂಡವನ್ನು ಹೊಂದಿದ್ದಾರೆ.
ಧೋನಿ ಕ್ರಿಕೆಟರ್ ಆಗುವುದಿಕ್ಕಿಂತ ಮುನ್ನ ಒಬ್ಬ ಫೂಟ್ ಬಾಲ್ ಗೋಲ್ ಕೀಪರ್ ಆಗಿದ್ದರು. ಈಗಲೂ ಅವರು ಫುಟ್ ಬಾಲ್ ಆಟವನ್ನು ಪ್ರೀತಿಸುತ್ತಾರೆ.
ಧೋನಿ ವಿಮಾನ, ಹೆಲಿಕಾಪ್ಟರ್ ಬಗ್ಗೆಯೂ ಕ್ರೇಜ್ ಹೊಂದಿದ್ದು, ಸಮಯ ಮತ್ತು ಅವಕಾಶ ಸಿಕ್ಕಾಗಲೆಲ್ಲ ವಾಯು ನೆಲೆಗಳಿಗೆ ಮತ್ತು ಏರ್ ಶೋಗಳಿಗೆ ಭೇಟಿ ನೀಡುತ್ತಾರೆ.
ಟೀಂ ಇಂಡಿಯಾ ಮಾಜಿ ನಾಯಕ ಕೇವಲ ಬೈಕ್ ಪ್ರಿಯ ಮಾತ್ರವಲ್ಲ. ಕಾರುಗಳ ಮೇಲೂ ಎಲ್ಲಿಲ್ಲದ ಪ್ರೀತಿ ಹೀಗಾಗಿ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 
ಧೋನಿ ಬೈಕ್ ಪ್ರಿಯರಾಗಿದ್ದು, ಹಲವು ಅಚ್ಚುಮೆಚ್ಚಿನ ಬೈಕ್ ಗಳನ್ನು ಹೊಂದಿದ್ದಾರೆ.
ದೈವ ಭಕ್ತರಾಗಿರುವ ಧೋನಿ ಮತ್ತು ಅವರ ಕುಟಂಬ ಇತ್ತೀಚಿಗೆ ತಾಮರ್ ನ ದಿಯೋರಿಯಲ್ಲಿ ದುರ್ಗಾ ಪೂಜೆ ನೆರವೇರಿಸಿದ್ದರು.
ಪತ್ನಿ ಸಾಕ್ಷಿ ಸಿಂಗ್ ಇನ್ ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಧೋನಿ ಜತೆ ಭಾವುಕ ಸಂದೇಶಯನ್ನು ಹಂಚಿಕೊಂಡಿದ್ದಾರೆ. ಕಳೆದ 10 ವರ್ಷಗಳಿಂದ ನಾನು ನಿಮ್ಮಿಂದ ಸಾಕಷ್ಟು ಕಲಿತಿದ್ದೇನೆ ಮತ್ತು ಕಲಿಯುತ್ತಲೇ ಇದ್ದೇನೆ. ಜೀವನವನ್ನು ವಾಸ್ತವಿಕವಾಗಿ ನಿಭಾಯಿಸಲು ಕಲಿಸಿರುವುದಕ್ಕೆ ಧನ್ಯವಾದಗಳು. ನನ್ನ ಜೀವನವನ್ನು
2010ರಲ್ಲಿ ತಮ್ಮ ಬಾಲ್ಯದ ಗೆಳತಿ ಸಾಕ್ಷಿ ಸಿಂಗ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಜುಲೈ 4ರಂದು 7ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಧೋನಿ ಒಬ್ಬ ಉತ್ತಮ ಪತಿ ಮತ್ತು ತಂದೆಯಾಗಿ ಗುರುತಿಸಿಕೊಂಡಿದ್ದಾರೆ.
ಧೋನಿ ಅವರ ನಾಯಕತ್ವ ಗುಣ ಮತ್ತು ಸಾಧನೆಗಳನ್ನು ಗುರುತಿಸಿ ಲಂಡನ್ ನ ಡೆ ಮೊಂಟಫೋರ್ಟ್ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟೊರೇಟ್ ನೀಡಿದೆ.
SCROLL FOR NEXT