ಮೊಟೇರಾದಲ್ಲಿನ ನವೀಕರಣಗೊಂಡ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ಇನ್ನು ಮುಂದೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಕರೆಯಲಾಗುತ್ತದೆ.
ನವೀಕರಣಗೊಂಡ ಕ್ರೀಡಾಂಗಣದಲ್ಲಿ ಅಶ್ಚರ್ಯ ಎಂಬಂತೆ 1.32 ಲಕ್ಷ ಪ್ರೇಕ್ಷಕರು ಕೂರಲು ಅವಕಾಶ ನೀಡಬಹುದಾಗಿದೆ.63 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಸ್ಟೇಡಿಯಂನ್ನು ಅಂದಾಡು 800 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ 90 ಸಾವಿರ ಪ್ರೇಕ್ಷಕರಿಗೆ ಅವಕಾಶವಿದೆ. ಆದರೆ, ಅದನ್ನು ಮೊಟೇರಾ ಕ್ರೀಡಾಂಗಣ ಮೀರಿಸಿದೆ.ಅಧಿಕೃತ ಮಾಹಿತಿ ಪ್ರಕಾರ, ಮೊಟೇರಾ ಸ್ಟೇಡಿಯಂನ ಒಟ್ಟಾರೇ ಪ್ರದೇಶ, '32 ಒಲಿಂಪಿಕ್ ಗಾತ್ರದ ಸಾಕರ್ ಕ್ಷೇತ್ರಗಳನ್ನು ಒಟ್ಟುಗೂಡಿಸಲಾಗಿದೆ'ಮೆಲ್ಬರ್ನ್ ಕ್ರಿಕೆಟ್ ಸ್ಟೆಡಿಯಂ ವಿನ್ಯಾಸಗೊಳಿಸಿರುವ ಅಸ್ಟ್ರೇಲಿಯಾದ ವಿನ್ಯಾಸ ಸಂಸ್ಥೆ ಪೊಂಪುಲಾಸ್ ಮತ್ತಿತರ ಸಂಸ್ಥೆಗಳು ನೂತನ ಸ್ಟೇಡಿಯಂನ್ನು ವಿನ್ಯಾಸಗೊಳಿಸಿವೆ.ಈ ಸ್ಟೇಡಿಯಂನ ಕ್ರೀಡಾ ಸಂಕೀರ್ಣ ಕೇವಲ ಕ್ರಿಕೆಟ್ ಮಾತ್ರವಲ್ಲದೇ, ಪುಟ್ ಬಾಲ್, ಹಾಕಿ, ಬಾಸ್ಕೆಟ್ ಬಾಲ್,ಕಬ್ಬಡಿ, ಬಾಕ್ಸಿಂಗ್, ಲಾನ್ ಟೆನ್ನಿಸ್ ನಂತಹ ಇತರ ಕ್ರೀಡೆಗಳನ್ನು ಸಹ ಒಳಗೊಂಡಿದೆ.ಹೆಚ್ಚಿನ ಪ್ರಕಾಶಮಾನದ ಫ್ಲೆಡ್ ಲೈಟ್ ಗಳ ಬದಲಾಗಿ ಆಟದ ಮೈದಾನದಲ್ಲಿ ಎಲ್ ಇಡಿ ಲೈಟ್ ಗಳನ್ನು ಅಳವಡಿಸಲಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ.ಆಟಗಾರರಿಗೆ ನಾಲ್ಕು ಡ್ರೆಸ್ಸಿಂಗ್ ಕೊಠಡಿಗಳನ್ನು ಹೊಂದಿರುವ ವಿಶ್ವದಲ್ಲಿನ ಮೊದಲ ಸ್ಟೇಡಿಯಂ ಇದಾಗಿದೆ. ಇದರಿಂದಾಗಿ ಒಂದೇ ದಿನ ಬ್ಯಾಕ್- ಟು ಬ್ಯಾಕ್ ಪಂದ್ಯಗಳನ್ನು ಆಡಬಹುದಾಗಿದೆ.ಮೊಟೇರಾ ಕ್ರೀಡಾಂಗಣದಲ್ಲಿನ 11 ಪಿಚ್ ಗಳನ್ನು ಕೆಂಪು ಮತ್ತು ಕಪ್ಪು ಮಣ್ಣಿನಲ್ಲಿ ಮಾಡಲಾಗಿದೆ. ವಿಶ್ವದಲ್ಲಿಯೇ ಪ್ರಮುಖ ಮತ್ತು ತರಬೇತಿ ಪಿಚ್ ಗಳಿಗಾಗಿಗಿ ಮಣ್ಣಿನ ಮೇಲ್ಮೈಗಳು ಒಂದೇ ಇರುವುದಾಗಿ ವಿಶ್ವದಲ್ಲಿಯೇ ಇದೊಂದೇ ಕ್ರೀಡಾಂಗಣವಾಗಿದೆ.ಸುಸಜ್ಜಿತ ಒಳಚರಂಡಿ ವ್ಯವಸ್ಥೆ ಹೊಂದಿದ್ದು, ಮಳೆ ಬಿದ್ದಂತಹ ಸಂದರ್ಭದಲ್ಲಿ ಕೇವಲ 30 ನಿಮಿಷಗಳಲ್ಲಿ ನೀರನ್ನು ಒದ್ದೆ ಮಾಡುತ್ತದೆ.ಮೊಟೇರಾದಲ್ಲಿ ಕ್ರಿಕೆಟ್ ಅಕಾಡೆಮಿ, ಒಳಾಂಗಣ ತರಬೇತಿ ಪಿಚ್ ಗಳು, ಮತ್ತು ಸಣ್ಣ ಫೆವಿಲಿಯನ್ ಪ್ರದೇಶದೊಂದಿಗೆ ಎರಡು ಪ್ರತ್ಯೇಕ ತರಬೇತಿ ಮೈದಾನಗಳಿವೆ.Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos