ಕ್ರೀಡೆ

ರಾಹುಲ್ ದ್ರಾವಿಡ್ @48

Sumana Upadhyaya
ರಾಹುಲ್ ದ್ರಾವಿಡ್ ತಮ್ಮ ವೃತ್ತಿ ಬದುಕಿನಲ್ಲಿ 164 ಟೆಸ್ಟ್ ಗಳನ್ನು, 344 ಒನ್ ಡೇ ಅಂತಾರಾಷ್ಟ್ರೀಯ ಕ್ರಿಕೆಟ್ ನ್ನು ಆಡಿದ್ದು, ಕ್ರಮವಾಗಿ 13 ಸಾವಿರದ 288 ರನ್ ಗಳು ಮತ್ತು 10 ಸಾವಿರದ 889 ರನ್ ಗಳನ್ನು ಆಡಿದ್ದಾರೆ.
ರಾಹುಲ್ ದ್ರಾವಿಡ್ ತಮ್ಮ ವೃತ್ತಿ ಬದುಕಿನಲ್ಲಿ 164 ಟೆಸ್ಟ್ ಗಳನ್ನು, 344 ಒನ್ ಡೇ ಅಂತಾರಾಷ್ಟ್ರೀಯ ಕ್ರಿಕೆಟ್ ನ್ನು ಆಡಿದ್ದು, ಕ್ರಮವಾಗಿ 13 ಸಾವಿರದ 288 ರನ್ ಗಳು ಮತ್ತು 10 ಸಾವಿರದ 889 ರನ್ ಗಳನ್ನು ಆಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕನಾಗಿದ್ದ ರಾಹುಲ್ ದ್ರಾವಿಡ್ ತಮ್ಮ ನಾಯಕತ್ವದಲ್ಲಿ 25 ಟೆಸ್ಟ್ ಗಳು ಮತ್ತು 79 ಏಕದಿನ ಪಂದ್ಯಗಳನ್ನಾಡಿದ್ದು ಕ್ರಮವಾಗಿ ಶೇಕಡಾ 32 ಮತ್ತು ಶೇಕಡಾ 53.16ರಷ್ಟು ಗೆದ್ದಿದ್ದಾರೆ.
ತಾಳ್ಮೆ, ಸಂಯಮ, ವಿನಯತೆ ಗುಣಗಳಿಂದ ತಮ್ಮ ತಂಡದ ಸದಸ್ಯರಿಂದ ಯಾವಾಗಲೂ ಗೌರವಕ್ಕೆ ಪಾತ್ರವಾಗಿದ್ದ ರಾಹುಲ್ ದ್ರಾವಿಡ್ ಎಂದಿಗೂ ವೃತ್ತಿ ಮತ್ತು ಖಾಸಗಿ ಬದುಕಿನಲ್ಲಿ ವಿವಾದಕ್ಕೆ ಸಿಕ್ಕಿಹಾಕಿಕೊಂಡವರಲ್ಲ.
ಯುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಚೆನ್ನಾಗಿ ತರಬೇತಿಗೊಳಿಸುವಲ್ಲಿ ಕೂಡ ರಾಹುಲ್ ದ್ರಾವಿಡ್ ಪ್ರಮುಖ ಪಾತ್ರ ವಹಿಸಿದ್ದರು.
ಅಂಡರ್ -19 ಕ್ರಿಕೆಟ್ ತಂಡದ ಕೋಚ್ ಆಗಿಯೂ ನಿವೃತ್ತಿ ನಂತರ ರಾಹುಲ್ ದ್ರಾವಿಡ್ ಕೆಲಸ ಮಾಡಿದ್ದಾರೆ. ಅದು ಐಸಿಸಿ ಅಂಡರ್ -19 ವಿಶ್ವಕಪ್ ನಲ್ಲಿ ಭಾಗವಹಿಸಲಿದೆ.
ಬೆಂಗಳೂರು ಎಫ್ ಸಿ ತಂಡ 2018ರಲ್ಲಿ ಐಎಸ್ ಎಲ್ ಸೀಸನ್ ನ ಅಂಬಾಸಿಡರ್ ಆಗಿ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡಿದೆ.
ರಾಹುಲ್ ದ್ರಾವಿಡ್ ಬಗ್ಗೆ ಡಬ್ಲ್ಯುಡಬ್ಲ್ಯುಡಬ್ಲ್ಯು ಸ್ಟಾರ್ ಹಾಗೂ ಹಾಲಿವುಡ್ ನಟ ಜಾನ್ ಸೆನ ಅವರು ಕೂಡ ಪ್ರಶಂಸೆಯ ಮಾತುಗಳನ್ನಾಡಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.
SCROLL FOR NEXT