ಕ್ರೀಡೆ

'ದಿ ವಾಲ್, ಜ್ಯಾಮಿ' ರಾಹುಲ್ ದ್ರಾವಿಡ್ ಗೆ ಹುಟ್ಟುಹಬ್ಬದ ಸಂಭ್ರಮ 

Sumana Upadhyaya
ಕ್ರಿಕೆಟ್ ನ್ನು ಇಷ್ಟಪಡುವವರು, ಪ್ರೀತಿಸುವವರು ಅಸಂಖ್ಯಾತ ಮಂದಿ. ಇಂದು ಅವರಿಂದಾಗಿ ನಾವೆಲ್ಲರೂ ಇದ್ದೇವೆ,ಕ್ರಿಕೆಟ್ ನಲ್ಲಿ ಈ ಮಟ್ಟಿಗೆ ಬೆಳೆದಿದ್ದೇವೆ.
ಕ್ರಿಕೆಟ್ ನ್ನು ಇಷ್ಟಪಡುವವರು, ಪ್ರೀತಿಸುವವರು ಅಸಂಖ್ಯಾತ ಮಂದಿ. ಇಂದು ಅವರಿಂದಾಗಿ ನಾವೆಲ್ಲರೂ ಇದ್ದೇವೆ,ಕ್ರಿಕೆಟ್ ನಲ್ಲಿ ಈ ಮಟ್ಟಿಗೆ ಬೆಳೆದಿದ್ದೇವೆ.
ಪ್ರತಿಭೆಯನ್ನು ನಾವು ಹಲವು ಬಾರಿ ತಪ್ಪಾಗಿ ಅಳೆಯುತ್ತೇವೆ. ಸಾಮರ್ಥ್ಯ ಅಂದಾಗ ಏನು ನೋಡುತ್ತೇವೆ?ಕ್ರಿಕೆಟ್ ನಲ್ಲಿ ಬಾಲ್ ಕ್ಯಾಚ್ ಮಾಡಿದಾಗಸ, ಸಿಕ್ಸರ್, ಫೋರ್ ಹೊಡೆದಾಗ ಮಾತ್ರ ಸಾಮರ್ಥ್ಯವೇ?ದೃಢ ನಿರ್ಧಾರ, ಧೈರ್ಯ, ಶಿಸ್ತು, ಸಂಯಮ ಎಲ್ಲವೂ ಪ್ರತಿಭೆಯಾಗುತ್ತದೆ.
ವೃತ್ತಿ ಬದುಕಿನ ಆರಂಭದಲ್ಲಿ ಅಭಿಮಾನಿಗಳಿಂದ ಜನರಿಂದ ಒಂದು ಇಮೇಜ್ ಪಡೆದುಕೊಳ್ಳುತ್ತೀರಿ, ನಂತರ ಅದು ನಿಮಗೆ ಇಷ್ಟವಾಗುತ್ತದೆಯೋ, ಇಲ್ಲವೋ ನಿಮ್ಮ ಉಳಿದ ಜೀವಿತಾವಧಿಯಲ್ಲಿ ಆ ಇಮೇಜ್ ನಲ್ಲಿರುತ್ತೀರಿ.
ನಾನು ಗೌರವ ನೀಡಿದ, ಭಯಪಟ್ಟ, ಅಳೆದ ಕ್ರಿಕೆಟರ್ ಗಳ ನನ್ನ ಬಗ್ಗೆ ಭಯ, ಭಕ್ತಿ ಇಟ್ಟದ್ದು, ಅವಮಾನ ಮಾಡಿದ್ದು, ಕೈಯಲ್ಲಿ ಬಾಲ್ ಸಿಕ್ಕಿದಾಗ ಎದುರಿಗಿರುವ ಯಾರೇ ಆದರೂ, ಎಷ್ಟೇ ಪ್ರೀತಿಪಾತ್ರದವನಾದರೂ ಅವನನ್ನು ಮಣಿಸುವುದು ಕ್ರಿಕೆಟ್ ಆಟದ ಧರ್ಮ, ಅವರಿಂದಾಗಿಯೇ ನಾನು ಇಂದು ಬೆಳೆದದ್ದು.
ದ್ವೇಷ, ಹಠ ಸಾಧನೆಗೆ ಆಟವಾಡುವುದು ಅಲ್ಲ, ಹೆಮ್ಮೆ,ಗೌರವಕ್ಕೆ.
ಕ್ರಿಕೆಟ್ ಪಂದ್ಯ ಇಲ್ಲದಿರುವ ಸಮಯಗಳಲ್ಲಿ ನನ್ನ ಫಿಟ್ ನೆಸ್ ಗಾಗಿ ವರ್ಕೌಟ್ ಮಾಡುತ್ತಾ ಇನ್ನೂ ಉತ್ತಮ ಕ್ರಿಕೆಟರ್ ಆಗಿ ಬಂದರೆ ಅಷ್ಟೇ ಸಾಕಾಗುವುದಿಲ್ಲ. ನಿಮ್ಮ ಕೌಶಲ್ಯವನ್ನು ಹುರಿಗೊಳಿಸಲು ಅದನ್ನು ಇನ್ನಷ್ಟು ಬೆಳೆಸಲು ಪ್ರಯತ್ನಿಸಬೇಕು.
ಸುಂದರ ಕಣ್ಣು ಬೇರೆಯವರಲ್ಲಿ ಒಳ್ಳೆಯದ್ದನ್ನೇ ಕಾಣುತ್ತದೆ. ಸುಂದರವಾದ ಬಾಯಿ ಒಳ್ಳೆಯ ಸಂಗತಿಯನ್ನೇ ಮಾತನಾಡುತ್ತದೆ, ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲು ನೀವು ಎಂದಿಗೂ ಒಬ್ಬಂಟಿಯಲ್ಲ ಎಂಬ ಜ್ಞಾನದೊಂದಿಗೆ ನಡೆಯಿರಿ.
'ನಾನು ಮಾತ್ರ ತೀವ್ರ ಬುದ್ಧಿವಂತ ಕ್ರಿಕೆಟಿಗನಲ್ಲ. ನಾನು ಇತರ ಕ್ರಿಕೆಟಿಗರೊಂದಿಗೆ ಆಡಿದ್ದೇನೆ, ಅವರು ತುಂಬಾ ತೀವ್ರ ಮತ್ತು ಬೌದ್ಧಿಕವಾಗಿ ಎತ್ತರಕ್ಕೆ ಏರಿಸುವಂಥದ್ದು.
ಯಾವ ಕನಸನ್ನೂ ಒಂಟಿಯಾಗಿ ಬೆನ್ನಟ್ಟಲು ಸಾಧ್ಯವಿಲ್ಲ. ನೀವು ಯಾವುದೇ ಕೆಲಸ ಮಾಡುತ್ತಿರಲಿ, ಸಾರ್ವಜನಿಕ ಜೀವನದಲ್ಲಿ ವಿಶ್ವಾಸಾರ್ಹತೆ ಮುಖ್ಯವಾಗುತ್ತದೆ.
SCROLL FOR NEXT