ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೆರಿಕದ ಈಜುಗಾರ್ತಿ ಅನಿತಾ ಅಲ್ವರೇಜ್ ಅವರು ಸ್ವಿಮ್ಮಿಂಗ್ ಪೂಲ್ ನಲ್ಲೇ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. 
ಕ್ರೀಡೆ

ಸ್ವಿಮ್ಮಿಂಗ್ ಪೂಲ್ ನಲ್ಲೇ ಪ್ರಜ್ಞೆ ತಪ್ಪಿದ ಅಮೆರಿಕದ ಈಜುಗಾರ್ತಿಯನ್ನು ರಕ್ಷಿಸಿದ ಕೋಚ್!

ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೆರಿಕದ ಈಜುಗಾರ್ತಿ ಅನಿತಾ ಅಲ್ವರೇಜ್ ಅವರು ಸ್ವಿಮ್ಮಿಂಗ್ ಪೂಲ್ ನಲ್ಲೇ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ.

ಸ್ಪರ್ಧೆ ವೇಳೆ ಪ್ರಜ್ಞಾಹೀನರಾಗಿ ಈಜುಕೊಳದ ತಳಭಾಗಕ್ಕೆ ಮುಳುಗಿದ ಅನಿತಾ ಅಲ್ವರೇಜ್ ಅವರನ್ನು ಅವರ ತಂಡದ ಕೋಚ್‌ ರಕ್ಷಿಸಿದ್ದಾರೆ.
ಬುಡಾಪೆಸ್ಟ್‌ ನಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ನ ಆರ್ಟಿಸ್ಟಿಕ್‌ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಅನಿತಾ ಅಲ್ವರೇಜ್ ಪ್ರದರ್ಶನ ನೀಡುತ್ತಿದ್ದಾಗಲೇ ಪ್ರಜ್ಞೆ ಕಳೆದುಕೊಂಡಿದ್ದಾರೆ.
ಈ ವೇಳೆ ಅನಿತಾಗೆ ಏನೋ ಅನಾಹುತ ಆಗಿದೆ ಎಂಬುದನ್ನು ಅರಿತ ಅಮೆರಿಕ ಮಹಿಳಾ ತಂಡದ ಮುಖ್ಯ ಕೋಚ್‌ ಆಂಡ್ರಿಯಾ ಫುಯೆಂಟಸ್, ತಕ್ಷಣವೇ ನೀರಿಗೆ ಧುಮುಕಿ ಅಲ್ವರೇಜ್ ಅವರನ್ನು ಮೇಲಕ್ಕೆತ್ತಿದ್ದಾರೆ. ತಂಡದ ಇತರ ಸಿಬ್ಬಂದಿ ಕೂಡಾ ನೆರವಿಗೆ ಬಂದಿದ್ದಾರೆ.
ಈಜುಕೊಳದ ಬಳಿಯಿದ್ದ ಲೈಫ್‌ಗಾರ್ಡ್‌ಗಳು ಗರಬಡಿದವರಂತೆ ನಿಂತಿದ್ದರೇ ಹೊರತು, ಕೂಡಲೇ ರಕ್ಷಣೆಗೆ ಮುಂದಾಗಲಿಲ್ಲ. ಆದ್ದರಿಂದ ನಾನೇ ನೀರಿಗೆ ಧುಮುಕಿದೆ ಎಂದು ಫುಯೆಂಟಸ್‌ ಹೇಳಿದ್ದಾರೆ.
ಅನಿತಾ ಅವರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಅನಿತಾ ಅಲ್ವರೇಜ್
ಅನಿತಾ ಅಲ್ವರೇಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ

ಶಿಕ್ಷಕರ ಕೊರತೆ ಎಂದು ದೂರಿದ್ದೇ ತಪ್ಪಾಯ್ತು ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತು!

ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಮಿಂಚಿದ ಪಾರ್ವತಿ ತಿರುವೋತ್; ದಂಗಾದ ಅಭಿಮಾನಿಗಳು, Video!

Asian Games 2026: ಮಲೇಷ್ಯಾ ಸೋಲಿಸಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಬಿಜೆಪಿ ಜಿಲ್ಲಾಧ್ಯಕ್ಷರಿಂದ ನನ್ನ ಮೇಲೆ ಪದೇ ಪದೇ ಅತ್ಯಾಚಾರ: ಉತ್ತರ ಪ್ರದೇಶ ಪಕ್ಷದ ನಾಯಕಿಯ ಗಂಭೀರ ಆರೋಪ