ಕ್ರೀಡೆ

ಸಲಿಂಗಿ ಮದುವೆ: ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿಯರು ದಾಂಪತ್ಯ ಜೀವನಕ್ಕೆ ಪ್ರವೇಶ

Srinivasamurthy VN
ಪರಸ್ಪರ ಉಂಗುರ ಬದಲಿಸಿಕೊಳ್ಳುವ ಮೂಲಕ ಇಬ್ಬರು ಆಟಗಾರ್ತಿಯರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಪರಸ್ಪರ ಉಂಗುರ ಬದಲಿಸಿಕೊಳ್ಳುವ ಮೂಲಕ ಇಬ್ಬರು ಆಟಗಾರ್ತಿಯರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಭಾರತ ಮೂಲದ ಇಂಗ್ಲೆಂಡ್ ಮಾಜಿ ಕ್ರಿಕೆಟ್ ಆಟಗಾರ್ತಿ ಇಶಾ ಗುಹಾ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಸಲಿಂಗಿ ಜೋಡಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಇಶಾ ಗುಹಾ, ಹೆಮ್ಮೆ ಎನಿಸುತ್ತಿದೆ, ನಿಮ್ಮಿಬ್ಬರನ್ನು ಇಷ್ಟಪಡುತ್ತೇನೆ (Proud. Love you both) ಎಂದು ಬರೆದುಕೊಂಡಿದ್ದರು.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲೂ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದು, ವಾರಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಥಾಲಿ ಶೀವರ್ ಹಾಗೂ ಕ್ಯಾಥರೀನ್ ಬ್ರಂಟ್‌ ಹೃತ್ಪೂರ್ವಕ ಅಭಿನಂದನೆಗಳು ಎಂದು ಟ್ವೀಟ್‌ ಮಾಡಿದೆ.
ನಾಟ್ ಸ್ಕೀವರ್ ಮತ್ತು ಕ್ಯಾಥರೀನ್ ಬ್ರಂಟ್ ಇಬ್ಬರು ಸುಮಾರು ಐದು ವರ್ಷಗಳಿಂದ ಸಂಬಂಧ ಹೊಂದಿದ್ದಾರೆ.
ಅವರ ನಿಶ್ಚಿತಾರ್ಥವು 2019 ರಲ್ಲಿ ನಡೆದಿತ್ತಾದರೂ, ಕೊರೋನಾದಿಂದಾಗಿ ಮದುವೆಯನ್ನು ಮುಂದೂಡಲಾಗಿತ್ತು.
2022ರ ಮಹಿಳಾ ಏಕದಿನ ವಿಶ್ವಕಪ್ ಬಳಿಕ ಅವರ ಮದುವೆ ನಡೆಯಲಿದೆ ಎಂಬ ಸುದ್ದಿಯೂ ಇತ್ತು. ಇದೀಗ ಇಬ್ಬರು ಮದುವೆಯಾಗಿದ್ದರು.
ನಾಟ್ ಸ್ಕೈವರ್ ಮತ್ತು ಕ್ಯಾಥರೀನ್ ಬ್ರಂಟ್ 2017 ರ ಮಹಿಳಾ ODI ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮಹಿಳಾ ಕ್ರಿಕೆಟ್ ನಲ್ಲಿ ಲೆಸ್ಬಿಯನ್ ಮದುವೆ ಹೊಸದೇನಲ್ಲ. ಈ ಮೊದಲು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ್ತಿಯಾದ ಡೇನ್ ವಾನ್ ನೈಕರ್ಕ್, ಸಹ ಆಟಗಾರ್ತಿ ಹಾಗೂ ಆಲ್ರೌಂಡರ್ ಮಾರಿಜಾನ್ನೆ ಕಾಪ್‌ರನ್ನು ವಿವಾಹವಾಗಿದ್ದರು.
ಅದೇ ರೀತಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಾದ ಆಮಿ ಸಟ್ಟರ್‌ವೇಟ್‌ ಹಾಗೂ ಲಿಯಾ ತಹುಹು ಅವರು ಸಹಾ ಸಲಿಂಗಿ ವಿವಾಹವಾಗಿದ್ದರು.
SCROLL FOR NEXT