ಬಹುಮತ ಸದನದಲ್ಲಿ ತಿಳಿಯುತ್ತೆ...
ಬೆಂಗಳೂರು: ಸರ್ಕಾರಕ್ಕೆ ಬಹುಮತ ಇದೆಯೋ ಇಲ್ಲವೋ ಎಂಬುದು ಸದನದಲ್ಲಿ ಗೊತ್ತಾಗುತ್ತದೆ. ಎಂತಹ ಸಂದರ್ಭ ಬಂದರು ಸರ್ಕಾರ ವಿಶ್ವಾಸಮತ ಸಾಬೀತು ಮಾಡುತ್ತದೆ ಎಂದು ಸಚಿವ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಯಡಿಯೂರಪ್ಪನವರೂ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಈಗ ಜಗದೀಶ್ ಶೆಟ್ಟರ್ ಅವರಿಗೆ ಏಕವಚನದಲ್ಲಿ ನಿಂದಿಸುವುದು ಅವರಿಗೆ ಶೋಭೆ ತರುವುದಿಲ್ಲ.
ಸಿಎಂ ಜಗದೀಶ್ ಶೆಟ್ಟರ್ ಜನಪ್ರಿಯ ಬಜೆಟ್ ನೀಡುತ್ತಾರೆ ಎಂಬ ಭಯ ಕೆಜೆಪಿಯನ್ನು ಕಾಡುತ್ತಿದೆ. ಹೀಗಾಗಿ ಈ ರೀತಿ ವರ್ತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಎಲ್ಲ ಗೊಂದಲ ನಿವಾರಿಸಲು ಸದನದಲ್ಲಿ ಬಹುಮತ ಸಾಬೀತುಪಡಿಸುವುದೇ ಸೂಕ್ತ ಮಾರ್ಗ.
ಸರ್ಕಾರ ವಿಶ್ವಾಸಮತ ಪಡೆಯುತ್ತದೆ. 14 ಶಾಸಕರ ರಾಜಿನಾಮೆ ಅಂಗೀಕಾರವಾದರೂ, ಇನ್ನೂ ನಾಲ್ಕು ಜನ ರಾಜಿನಾಮೆ ಕೊಟ್ಟರೂ ಸರ್ಕಾರ ಉಳಿಯುತ್ತದೆ ಎಂದು ಹೇಳಿದರು.
ಹಿಂದೆ ನಮ್ಮನ್ನು ರಾತ್ರೋರಾತ್ರಿ ಯಡಿಯೂರಪ್ಪನವರು ಅನರ್ಹಗೊಳಿಸಿದಾಗ ನಾವು ಅನುಭವಿಸಿದ ಮಾನಸಿಕ ಯಾತನೆ ನಮಗೆ ಗೊತ್ತು. ಈಗ ಇವರು ಸ್ಪೀಕರ್ ಕಚೇರಿ, ರಾಜಭವನಕ್ಕೆ ಅಡ್ಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.